Wednesday, May 18, 2011

ಸುವರ್ಣ ನ್ಯೂಸ್’ ನಲ್ಲಿ ಪ್ರತಿ ಅರ್ಧ ಗಂಟೆಗೆ ‘ಕನ್ನಡಪ್ರಭ’ ಜಾಹೀರಾತು !

ವಿಶ್ವೇಶ್ವರ ಭಟ್ಟರಿಗೆ
ಸ್ವಾಮಿ,
ಯಾಕೋ ನಿಮ್ಮದು ಸ್ವಲ್ಪ ಅತಿಯಾಯ್ತು ಅನ್ನಿಸ್ತಿದೆ. ಕನ್ನಡದ ಕೆಲ ಪತ್ರಕರ್ತ ನೀವೂ ಸಹ ಏನು ಮಾಡಿದರೂ ದಕ್ಕಿಸಿಕೊಳ್ತೀನಿ ಎಂದು ನಿಧರ್ಾರ ಮಾಡಿದಂತಿದೆ. ಯಾಕೆ ನಿಮಗೆ ಜಗತ್ತಿನಲ್ಲಿ ಪ್ರತಾಪ್, ತ್ಯಾಗರಾಜ್, ಬಡ್ತಿ, ನಿಮ್ಮ ತಮ್ಮನ ಮಗ ವಿನಾಯಕ್ ಬಿಟ್ಟರೆ ಬೇರೆಯವರು ಕಣ್ಣಿಗೆ ಕಾಣುವುದಿಲ್ಲವೇ? ಬೇರೆಯವರು ಪತ್ರಕರ್ತರು ಎನಿಸುವುದಿಲ್ಲವೇ?
ಇದನ್ನು ಕೇಳಲು ಕಾರಣವಿಷ್ಟೆ. ಇತ್ತೀಚೆಗೆ ನೀವು ಕನ್ನಡದ ನಂಬರ್ 1 ಚಾನೆಲ್ ಸುವರ್ಣದಲ್ಲಿ (ಅಫ್ಕೋರ್ಸ್ ಹಮೀದ್ ಬಂದ ನಂತರ ಸುವರ್ಣ ನಂಬರ್ 1 ಚಾನೆಲ್ ಆಗಿದೆ) ಪ್ರತಿ ಅರ್ಧಗಂಟೆಗೆ ಕನ್ನಡಪ್ರಭ ಜಾಹೀರಾತು ಎಂದು ಹೇಳಿಕೊಂಡು ಗಂಟಲು ಹರಕೊಳ್ತಿದ್ದೀರಿ. ನಿಮ್ಮ ವೆಬ್ ಸೈಟ್ ನಲ್ಲಿ ಅದರ ಲಿಂಕ್ ಸಹ ನೀಡಿದ್ದೀರಿ.
ಯಾರ್ಯರಾರು ಏನೇನು ಡೈಲಾಗ್ ಹೊಡ್ದಿದ್ದಾರೆ ಎಂದು ಅದರ ಡೀಟೇಲ್ಸ್ ಸಹ ನೀಡಿದ್ದೀರಿ.
ಪ್ರತಾಪ್:
ನಾನು ಪ್ರತಾಪ್ ಸಿಂಹ!ನನಗೆ ಸುತ್ತಿ ಬಳಸಿ ಮಾತಾಡೋದು ಗೊತ್ತಿಲ್ಲ. ಬರೆಯೋದಂತೂ ಗೊತ್ತೇ ಇಲ್ಲ.ನನ್ನದೇನಿದ್ರೂ ನೇರಾ ನೇರ.ಪ್ರತಿ ಶನಿವಾರ ನಾನು ಬರೆಯುವಬೆತ್ತಲೆ ಪ್ರಪಂಚಇನ್ನು ಮುಂದೆ….
ಕನ್ನಡ ಪ್ರಭದಲ್ಲಿ

ತ್ಯಾಹರಾಜ್:
ನಾನು ಪಿ.ತ್ಯಾಗರಾಜ್
ಪ್ರತಿ ವಾರದ ರಾಜಕೀಯ ವಿದ್ಯಮಾನಗಳ ಆಳವಾದ ವಿಷ್ಲೇಷಣೆಗಾಗಿ
ಕನ್ನಡ ಪ್ರಭದಲ್ಲಿ ಪ್ರತಿ ಸೋಮವಾರ ಓದಿ ನನ್ನ ಅಂಕಣ….ಒಳಸುರಳಿ

ಬಡ್ತಿ
ನಾನು ರಾಧಾಕೃಷ್ಣ ಭಡ್ತಿ
ಪ್ರತಿ ಶುಕ್ರವಾರಕನ್ನಡ ಪ್ರಭದಲ್ಲಿ ನೀರೆಚ್ಚರದ ಬರಹಕ್ಕಾಗಿ ಓದಿ ನನ್ನ ಅಂಕಣ ಮೇಘ ಮೇದಿನಿ
ನೀರಿನ ಬಗ್ಗೆ ಸಮಗ್ರ ಮಾಹಿತಿ..ವೈಜ್ನಾನಿಕ ಹಾಗೂ ಸಾಮಾಜಿಕ ನೆಲೆಯಲ್ಲಿ
ಭಟ್ಟರ ಡೈಲಾಗ್:
ನಾನು ವಿಶೇಶ್ವರ ಭಟ್
ಈಗ ನಾನುಕನ್ನಡ ಪ್ರಭಕ್ಕೆ ಬದಲಾಗಿದ್ದೇನೆ..ಈಗ ನಿಮ್ಮ ಸರದಿ.
ಇದು ನಿಮ್ಮ ಡೈಲಾಗ್ ಗಳು.
ಪ್ರತಾಪ್ ಏನೇ ಬರೆದರೂ ಅದು ಕದ್ದ ಮಾಲು ಎಂಬುದರಲ್ಲಿ ಅನುಮಾನವೇ ಇಲ್ಲ. ರಾಷ್ಟ್ರೀಯ ಪತ್ರಿಕೆಗಳು, ಇಂಟರ್ನೆಟ್ನಲ್ಲಿ ಬರುವ ಮಾಲನ್ನೇ ಆತ ಕದ್ದು ತನ್ನದೇ ಲೇಖನ ಎಂಬಂತೆ ಉಣಬಡಿಸುತ್ತಾನೆ. ಆತನಿಗೆ ಜನರಲ್ ಕಮಾನ್ ಸೆನ್ಸ್ ಆಗಲಿ, ಸಾಮಾನ್ಯ ಜ್ಞಾನವಾಗಲಿ ಇಲ್ಲ ಎಂಬುದು ಆತನೊಂದಿಗೆ ಮಾತನಾಡಿದ ಅರ್ಧಗಂಟೆಯಲ್ಲಿ ಪ್ರೋವ್ ಆಗುತ್ತದೆ.
ಇನ್ನು ತ್ಯಾಗರಾಜ ನಿಮಗೇಕೆ ಅಚ್ಚುಮೆಚ್ಚು ಎಂದು ನೋಡಿದರೆ ಅದು ಒಟ್ಟಿಗೆ ಕೂತು ಉಣ್ಣುವ ಲಿಂಕ್. ನಿಮ್ಮ ಬಹುತೇಕ ವ್ಯವಹಾರಗಳು ನಡೆಯುವುದೇ ತ್ಯಾಗರಾಜ್ ಮೂಲಕ ಎಂಬ ಮಾತುಗಳೂ ಇವೆ. ವಿ.ಕ.ದಲ್ಲಿದ್ದಾಗ ಯಾವುದಾದರೂ ಸುದ್ದಿ ಬರಬೇಕಿದ್ದರೆ, ಚುನಾವಣೆ ಸಂದರ್ಭದಲ್ಲಿ ಒಂದೆರಡು ಸಾಲು ಒಳ್ಳೆಯ ಮಾತು ಬರೆಯಬೇಕೆಂದಿದ್ದರೆ ಅದಕ್ಕೆ ತ್ಯಾಗರಾಜನ ತಮ್ಮನ ಹೆಸರಿನಲ್ಲಿರುವ ಆಡ್ ಏಜೆನ್ಸಿ ಮೂಲಕ ನಿಮ್ಮದೇ ವಿ.ಕ.ಕಕ್ಕೆ ಕ್ಯಾಷ್ ಸಮೇತ ಪೇಮೆಂಟ್ ಮಾಡಿ ಜಾಹೀರಾತು ಕೊಡಬೇಕು. ನಂತರವೇ ಅವರ ಸುದ್ದಿ ಪ್ರಕಟವಾಗುತ್ತಿತ್ತು ಎಂಬುದು ನಿಮಗೆ ಗೊತ್ತಿಲ್ಲವೇ? ವಿ.ಕ.ಸೇರುವ ಮೊದಲು ಕೇರ್ ಆಫ್ ಫುಟ್ ಪಾತ್ ನಂತಿದ್ದ ತ್ಯಾಗರಾಜ್ ಇಂದು ಕೊಟಿಗಳ ಒಡೆಯ ಎಂದರೆ ಅದು ಹೇಗೆ ಸಾಧ್ಯ? ಇದರ ಒಳ ಸುರುಳಿಗಳೇನು??? ಇನ್ನು ತ್ಯಾಗರಾಜ್ ಅಂತಹ ರಾಜಕೀಯ ವಿಶ್ಲೇಷಕನೇನೂ ಅಲ್ಲ. ವಿ.ಕ.ದಲ್ಲಿ ಪ್ರಮೋಟ್ ಮಾಡಿ, ಮಾಡಿ, ಆತ ಆ ಸ್ಥಾನಕ್ಕೇರಿದ್ದಾನೆಯೇ ಹೊರತು, ಬರವಣಿಗೆ ಬಲದಿಂದ ಅಲ್ಲ. ಇಂದಿಗೂ ಆತನ ವಿಶ್ಲೇಷಣೆ, ಬರಹ ಎಷ್ಟು ಜಾಳು ಜಾಳು ಎಂದು ನಾಲ್ಕು ಜನ ರಾಜಕೀಯ ವಿಶ್ಲೇಷಕರನ್ನು ಕೇಳಿ. ನಿಮಗೇ ತಿಳಿಯುತ್ತೆ.
ಇನ್ನು ಬಡ್ತಿ ಮಹಾಶಯರೂ! ಇವರು ಜಗತ್ತಿನ ಏಕೈಕ್ ನೀರ್ ಸಾಧಕರು! ಎ.ಸಿ.ರೂಂನಲ್ಲೇ ಕುಳಿತು ತಣ್ಣನೆ ಕೋಕ್, ನೀರು ಕುಡಿಯುತ್ತಲೇ ಜಗತ್ತಿನ ನೀರಿನ ಸಮಸ್ಯೆ ಬರೆಯುವ ಮಹಾನ್ ಪತ್ರಕರ್ತನೀತ. ಈತನಿಗೋಸ್ಕರ ನೀವು ಶ್ರೀಪಡ್ರೆಯವರ ನೀರಿನ ಅಂಕಣಕ್ಕೆ ಕತ್ತರಿ ಹಾಕಿದ್ದು ನಿಜವಲ್ಲವೇ? ಇಂದಿಗೂ ನೀರಿನ ಬಗ್ಗೆ ಅಪಾರ ಸಾಧನೆ ಮಾಡಿದ, ಇದಕ್ಕಾಗಿ ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರತ್ಯಕ್ಷ ನೋಡಿಯೇ ಬರೆಯುವ ಶ್ರೀ ಪಡ್ರೆಯವರ ಅನುಭವ ದೊಡ್ಡದೋ, ಅಥವಾ ಎ ಸಿರೂಂನಲ್ಲಿ ಕುಳಿತು ಅಲ್ಲಲ್ಲಿ ಮಾಹಿತಿ ಸಂಗ್ರಹಿಸಿ ನೀರಿನ ಸಮಸ್ಯೆ ಬಗ್ಗೆ ಬರೆಯುವ ಈತನ ಅನುಭವ ದೊಡ್ಡದೋ ನೀವೇ ನಿರ್ಧರಿಸಿ. ನಿಮಗೆ ಬಕೆಟ್ ಹಿಡಿಯುತ್ತಾನೆ ಎಂಬ ಒಂದೇ ಕಾರಣಕ್ಕೆ ನೀವು ಈತನನ್ನು ದೊಡ್ಡ ಅಂಕಣಕಾರ ಎಂಬಂತೆ, ಬರಹಗಾರ ಎಂಬಂತೆ ಬಿಂಬಿಸ್ತಿದ್ದೀರಿ. ಸುವರ್ಣದಲ್ಲಿ ಜಾಹೀರಾತು ನೀಡ್ತಿದ್ದೀರಿ.
ನಿಮಗೆ ಸಂಬಂಧಿಕರು, ಬಕೆಟ್ ಹಿಡಿಯುವವರು ಆದರೆ ಅವರ ಅಂಡು ಎತ್ತೆತ್ತಿ ಮೇಲೆ ಕೂರಿಸುತ್ತೀರಿ. ನಿಮ್ಮ ತಮ್ಮನ ಮಗ ವಿನಾಯಕ್ಭಟ್ಗೆ ಮಂಗಳೂರಿನಲ್ಲಿ ಇದ್ದಾಗ ಏನು ಬರುತ್ತಿತ್ತು? ಆತನಿಗೆ ಮಂಗಳೂರು ಬಿಟ್ಟರೆ ಬೇರೆ ಜಿಲ್ಲೆ ಗೊತ್ತಿರಲಲಿಲ್ಲ. 10 ಪೋಲೀಸರ ಹೆಸರು ಬಿಟ್ಟರೆ ಬೇರೆಯವರು ಗೊತ್ತಿರಲಿಲ್ಲ. ವಿಕ.ಬಿಟ್ಟರೆ ಬೇರೆ ಇದೆ ಎಂಬುದು ಗೊತ್ತಿರಲಿಲ್ಲ. ಇಷ್ಟೆಲ್ಲಾ ಯಾಕೆ ಸ್ವಾಮಿ? ದೆಹಲಿ ಭಾರತದ ರಾಜದಾನಿ ಎಂಬುದೂ ಗೊತ್ತಿರಲಿಲ್ಲ. ಅಂಥಹವನ್ನು ನಿವು ದೆಹಲಿ ಪ್ರತನಿಧಿಯನ್ನಾಗಿ ಕಳಿಸಿದಿರಿ. 4 ವರ್ಷ ದೆಹಲಿಯಲ್ಲಿ ಕೂತು ಆತ ಏನು ಬರೆದನೋ ಗೊತ್ತಿಲ್ಲ. ಆದರೆ ಕನ್ನಡಿಗರು ವಿ.ಕ.ಕ್ಕೆ ಒಬ್ಬ ದೆಹಲಿ ಪ್ರತಿನಿಧಿ ಇದ್ದಾನೆ ಎಂಬುದನ್ನೇ ಮರೆತು ಬಿಟ್ಟಿದ್ದರು. ಅದಕ್ಕೆ ನಿಜಕ್ಕೂ ಅರ್ಹರಾದವರನ್ನು ನೀವು ಮೂಲೆಗುಂಪು ಮಾಡಿಬಿಟ್ಟಿದ್ದಿರಿ.
ಇನ್ನು ನಿಮ್ಮ ವಿಷಯಕ್ಕೆ ಬರೋದಾದರೆ ಭಟ್ರೆ, ನೀವು ಒಂದು ಥರಾ ಪಾಕಡಿ! ಜಗತ್ತಿಗೆ ಪ್ರಾಮಾಣಿಕತೆ ಬಗ್ಗೆ ಬಾಷಣ ಹೊಡೆಯುವ ನೀವು, ಬೆಂಗಳೂರಿನ ನಿಮ್ಮ ಮನೆಯ ನಿವೇಶನದ ಉದ್ದ ಅಗಲ, ಅದರ ಮೌಲ್ಯಗಳನ್ನು ಜಗತ್ತಿಗೆ ತಿಳಿಸ್ತೀರಾ? ಆ ನಿವೇಶನದಲ್ಲಿ ಕಟ್ಟಿಸ್ತಿರುವ ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ಫ್ಲೋರ್ ಗಳಿವೆ, ಸ್ವ್ವಿಮ್ಮಿಂಗ್ ಪೂಲ್ ಯಾವ ಮೂಲೆಗಿದೆ, ಲಿಫ್ಟ್ ಯಾವ ಕಂಪೆನಿಯದ್ದು, ಇಡೀ ಮನೆಗೆ ಖಚರ್ು ಮಾಡುತ್ತಿರುವುದೆಷ್ಟು? ವಿ.ಕ. ಸೇರಿದಾಗಿನಿಂದ ಇಂದಿನವರೆಗೆ ನೀವು ತಿಂಗಳ ಸಂಬಳದ ಲೆಕ್ಕದಲ್ಲಿ ಗಳಿಸಿದ್ದೆಷ್ಟು? ನಿಮ್ಮ ಒಟ್ಟು ಆಸ್ತಿ ಎಷ್ಟು? ಸ್ವಲ್ಪ ಎಕ್ಸ್ಪ್ಲೇನ್ ಮಾಡ್ತೀರಾ? ನೀವು ಬರೆಯುದನ್ನೇ ನಂಬಿಕೊಳ್ಳುವ ಅಮಾಯಕರು, ನೀವು ನೌಕರಿ ಕಳೆದುಕೊಂಡಾಗ ಮನೆ ಬಾಗಲಿಗೆ ಬಂದು 50 ಸಾವಿರ ಕೊಟ್ಟು ಹೋದರು ಎಂದು ನಾಚಿಕೆ ಇಲ್ಲದೆ ಬರೆದುಕೊಳ್ತೀರಲ್ಲ... ನಿಮ್ಮ ನಿಜ ಬಂಡವಾಳ ಗೊತ್ತಾದರೆ ಆ ವ್ಯಕ್ತಿಗೆ ಎಂತಹ ಆಘಾತವಾಗಬಹುದು ಗೊತ್ತಾ??? ಪ್ರಾಮಾಣಿಕತೆಗೆ ಬೆಲೆಯೇ ಇಲ್ಲವೇ ಭಟ್ಟರೆ?
ವಿಧಾನಪರಿಷತ್ ಗೆ ನಿಮ್ಮನ್ನು ನೇಮಕ ಮಾಡಲು ಬಿಜೆಪಿ ಮುಂದಾಗದಾಗ ನೀವು ಅವರ ಮೇಲೆ ದಾಳಿ ಮಾಡಲು ಶುರು ಮಾಡಿದ್ದು ಸುಳ್ಳ್ಳಾ? ಜೆಡಿಎಸ್ ನಿಮ್ಮನ್ನು ವಿಧಾನ ಪರಿಷತ್ ಗೆ ನೇಮಕ ಮಾಡ್ತೀವಿ ಎಂದ ವೇಳೆ ಕುಮ್ಮಿ, ದೇವೇಗೌಡರ ಜೊತೆ ಸೇರಿ ಪತ್ರಿಕೆಯ ಮೂಲಕ ಯುದ್ಧ ಸಾರಿದ್ದು ಸುಳ್ಳಾ? ಇದೇ ಸಿಎಂ. ಯಡಿಯೂರಪ್ಪ ಮೂಲಕ ನೀವು ಟೈಂಸ್ ಕಂಪೆನಿಗೆ 300 ಕೋಟಿಗೂ ಹೆಚ್ಚು ಬೆಲೆ ಬಾಳುವ ನಿವೇಶನವನ್ನು ಕೆಲವೇ ಕೋಟಿ ರೂಪಾಯಿಗಳಿಗೆ ಬರೆಸಿಕೊಂಡದ್ದು ಸುಳ್ಳಾ? ಮೈನಿಂಗ್ ಕಂಪೆನಿ ವ್ಯವಹಾರಕ್ಕೆ ಇಳಿಯಲು ಬಯಸಿದ್ದ ನೀವು ಅದಕ್ಕಾಗಿ ಮುಖ್ಯಮಂತ್ರಿಗಳ ಮನೆ ಎಡತಾಕಿದ್ದು ಸುಳ್ಳಾ? ಅರವಿಂದ ಲಿಂಬೇಹುಳಿಯ ಸಚಿವ ಸ್ಥಾನ ಉಳಿಸಲು ನೀವು ಮುಖ್ಯಮಂತ್ರಿವರೆಗೆ ಹೋಗಿ ಶಿಫಾರಸು ಮಾಡಲು ಯತ್ನಿಸಿದ್ದು ಸುಳ್ಳಾ? ನಿಮ್ಮ ಈ ಅತಿ ಆಸೆಗೆ ಯಡಿಯೂರಪ್ಪ ಸೊಪ್ಪು  ಹಾಕಲೆ ಇಲ್ಲ. ಆಗಲೇ ಅಲ್ಲವೇ ನೀವು ಸಿಎಂ ವಿರುದ್ಧ ದಾಳಿ ಆರಂಭಿಸಿದ್ದು???
ಇದರ ನಡುವೆಯೂ ವಿ.ಕದಿಂಧ ಕ.ಪ್ರ,ಕ್ಕೆ ಬಂದ ಮೇಲೆ ನೀವು ನಡೆದುಕೊಂಡ ರೀತಿ ಹೇಗಿತ್ತು? ನಿಮ್ಮ ಇಂತಹ ಅಂಧಾ ದಭರ್ಾರ್ ಊಹಿಸಿಯೇ ಉಮಾಪತಿಯಂತಹ ಹಿರಿಯರು ಕ.ಪ್ರ.ಬಿಟ್ಟು ಹೊರ ನಡೆದರು. ಶಿವು ರಾಜೀನಾಮೆ ಬೀಸಾಡಿ ಎದ್ದು ಹೋದ. ನಿಮಗೆ ಹೇಳುವವರು ಕೇಳುವವರು ಇಲ್ಲದಂತಾಗಿಬಿಟ್ಟಿದೆ. ಈಗ ನಿಮ್ಮ ನಾಲ್ಕು ಜನರ ಜಾಹೀರಾತುಗಳು, ನೀವು ಅಸಡ್ಡಾಳಾಗಿ ಮಾತನಾಡುವ ಶೈಲಿಯ ಸಂಭಾಷಣೆಗಳ ತುಣುಕುಗಳು ಪ್ರತಿ ಅರ್ಧಗಂಟೆಗೊಮ್ಮೆ ಸುವರ್ಣದಲ್ಲಿ ಬಂದು ನೋಡುಗರು ಟಿವಿ ಬಂದ್ ಮಾಡುವಂತೆ ಮಾಡಿ, ಟಿ ಆರ್ ಪಿ ಕುಸಿಯಲು ಸಹಾಯ ಮಾಡುತ್ತಿವೆ. ಯಾಕೆ ನಿಮಗೆ ಕ.ಪ್ರ.ದಲ್ಲೇ ಇದ್ದ ಹಿರಿಯ ಪತ್ರಕರ್ತರನ್ನು ಪ್ರೋಮೋ ಮಾಡಬೇಕು ಎನ್ನಿಸಲಿಲ್ಲವೇ? ಕ.ಪ್ರ.ಕ್ಕಾಗಿ ಜೀವನವನ್ನೇ ಸವೆಸಿದ ಹಿರಿಯರಾದ ಸತ್ಯ ಅವರ ಪ್ರೋಮೋ ಮಾಡಬೇಕು ಎನ್ನಿಸಲಿಲ್ಲವೇ? ಅವರಿಗಾಗಿ ಒಂದು ಒಳ್ಳೆಯ ಕಾಲಂ ಕೊಡಬೇಕು ಎನಿಸಲಿಲ್ಲವೇ? ಬದಲಿಗೆ ನಿಮಗೆ ಬಕೆಟ್ ಹಿಡಿಯುವವರದ್ದಷ್ಟೇ ಪ್ರೋಮೋ ಮಾಡಿದ್ದೀರಿ. ಇದರಲ್ಲಿ ಕನ್ನಡಪ್ರಭ ಪ್ರಮೋಟ್ ಆಗುವುದಕ್ಕಿಂತ ನಿಮ್ಮ ಪ್ರಮೋಷನ್ ಉದ್ದೇಶವೇ ಎದ್ದು ಕಾಣುತ್ತದೆ.
ಇನ್ನು ಸಂಬಳದ ವಿಷಯಕ್ಕೆ ಬಂದರೆ, ನಿಮಗೆ ತಿಂಗಳಿಗೆ ಸುಮಾರು 6 ರಿಂದ 8 ಲಕ್ಷ ರೂಪಾಯಿ. ತ್ಯಾಗರಾಜ್, ಬಡ್ತಿ, ಪ್ರತಾಪ್ ಗೆ ಹತ್ತಿರ ಹತ್ತಿರ ಒಂದು ಲಕ್ಷ! ನಿಮ್ಮ ತಮ್ಮನ ಮಗ ಎಂಬ ಕಾರಣಕ್ಕೆ ವಿನಾಯಕ ಭಟ್ಟನಿಗೆ 80 ಸಾವಿರ ಸಂಬಳ! ಅದೇ ದಶಕಗಳಿಂದ ಕ.ಪ್ರ.ದಲ್ಲಿ ಕೆಲಸ ಮಾಡುತ್ತಿರುವ, ನಿಮ್ಮೆಲ್ಲರಿಗಿಂತ ಪ್ರಾಮಾಣಿಕರಾಗಿರುವ, ಇವತ್ತಿಗೂ ಹವಾಯಿ ಚಪ್ಪಲಿಯಲ್ಲಿ ಬರುವ, ಸಿಟಿ ಬಸ್ ನಲ್ಲಿ, ಆಟೋದಲ್ಲಿ ಓಡಾಡುವ ಹಿರಿಯ ಪತ್ರಕರ್ತ ಸತ್ಯ ಅವರ ಸಂಬಳ ಎಷ್ಟು ನೀವೇ ಹೇಳಿ! ಅಥವಾ ಅದನ್ನೂ ನಾವೇ ಹೇಳಬೇಕೋ?
ರವಿ ಬೆಳಗೆರೆಯನ್ನು ಅಣ್ಣಾ ಎನ್ನುತ್ತಿದ್ದ ನೀವು ಆತನ ಅದೆಷ್ಟು ಪಾಪ ಕಾರ್ಯಗಳಲ್ಲಿ ಭಾಗಿಯಾಗಿಲ್ಲ. ಏನೇನನ್ನು ನೀವು ಹಂಚಿಕೊಂಡು ಮಾಡಿಲ್ಲ??? ತಿಂದಿಲ್ಲ??? ಈಗ ಆತನೇ ನಿಮ್ಮ ಶತ್ರು. ಅಂದರೆ ಕೆಲಸ ಆಗಬೇಕಿದ್ದರೆ ಯಾರನ್ನು ಬೇಕಿದ್ದರೂ ನಿಮ್ಮ ಮಿತ್ರರನ್ನಾಗಿ ಮಾಡ್ಕೋತೀರಿ. ಬೇಡದಿದ್ರೆ ಬಿಟ್ಟು ಬಿಡ್ತೀರಿ.
ಇದೆಲ್ಲ ನಿಮ್ಮ ಆತ್ಮ ರತಿ ಸೂಚಿಸುವುದಿಲ್ಲವೇ? ನೀವು ನಿಜಕ್ಕೂ ಪ್ರಾಮಾಣಿಕರೆ ಆಗಿದ್ದರೆ ನೀವೆಲ್ಲ ನಿಮ್ಮ ಆಸ್ತಿ ಇಷ್ಟಿಷ್ಟು ಎಂದು ಘೋಷಿಸಿ ನೋಡೋಣ. ಇನ್ನೂ ಪತ್ರಿಕೋದ್ಯಮದ ಅ ಆ ಇ ಈ ಕೂಡಾ ಕಲಿಯದ ನಿಮ್ಮ ತಮ್ಮನ ಮಗ ವಿನಾಯಕ ಭಟ್ಟ ಕೂಡಾ ಕೋಟಿಗೆ ಬಾಳುತ್ತಾನೆ ಅಂದರೆ ನಿಮ್ಮ ಗ್ಯಾಂಗ್ ಎಷ್ಟು ನಟೋರಿಯಸ್ ಇರಬಹುದು???
ನಿಮಗೆಲ್ಲಾ ಒಳ್ಳೆಯದಾಗಲಿ. ಪ್ರೆತಿ ಅರ್ಧಗಂಟೆ ಅಲ್ಲ, ಪ್ರತಿ ನಿಮಿಷವೂ ನಿಮ್ಮದೇ, ನಿಮ್ಮ ಗ್ಯಾಂಗಿನದ್ದೇ ಜಾಹೀರಾತು ಬರುವಂತಾಗಲಿ.

No comments:

Post a Comment