Thursday, May 5, 2011

ರವಿ ಬೆಳಗೆರೆಯನ್ನು ಜನಶ್ರೀಯಿಂದ ಕಿತ್ತು ಹಾಕಿದ್ದಾರಾ?


Ravi Belagere:
Hi all
I joined JANASHREE news channel today and will be hosting a daily show late evening. Need your support and best wishes. I will also host a morning breakfast programme show which will be unique.
ಇದು ರವಿ ಬೆಳಗೆರೆ ದಿನಾಂಕ 03 February, 2011 ರಂದು ಸಮಯ  23:54ಕ್ಕೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿಕೊಂಡ ಸ್ಟೇಟಸ್. ಇದರಲ್ಲಿ ರವಿ ಬೆಳಗೆರೆ ಮೂರು ಅಂಶ ಪ್ರಸ್ತಾಪಿಸಿದ್ದಾರೆ.
1. ಜನಶ್ರೀ ಚಾನೆಲ್ ಸೇರಿದ್ದೇನೆ
2. ನಿತ್ಯ ಸಂಜೆ ಒಂದು ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತೇನೆ
3. ನಿತ್ಯ ಬೆಳಿಗ್ಗೆ ತುಂಬಾ ಭಿನ್ನವಾಗಿರುವ ಮತ್ತೊಂದು ಬ್ರೇಕ್ ಫಾಸ್ಟ್ ಶೋ ನಡೆಸಿಕೊಡುತ್ತೇನೆ.
ಆದರೆ ಈಗ ಮೂರು ತಿಂಗಳ ನಂತರ ಆಗಿರುವುದೇನು?
ಅತ್ತ ಬೆಳಗಿನ ಬ್ರೇಕ್ ಫಾಸ್ಟ್ ಶೋ ನೂ ಇಲ್ಲ… ಲೇಟ್ ಈವನಿಂಗ್ ನಡೆಸಿಕೊಡ್ತೀನಿ ಅಂತ ಹೇಳಿದ್ದ  ಪ್ರೋಗ್ರಾಂ ಕೂಡಾ ಇಲ್ಲ. (ಯಾವ ಪ್ರೋಗ್ರಾಂ ಅಂತ ನೀವೇ ‘ಕೇಳಿ’).
ಇಲ್ಲಿ ಮೂರು ಸಾಧ್ಯತೆಗಳಿವೆ.
1. ರವಿ ಬೆಳಗೆರೆಯನ್ನು ಜನಶ್ರೀಯಿಂದ ಕಿತ್ತು ಹಾಕಿದ್ದಾರೆ.
2. ರವಿ ಬೆಳಗೆರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
3. ರೆಡ್ಡಿ ಬ್ರದರ್ಸ್ ಜೊತೆ ಅವರ ಸಂಬಂಧ ಹಳಸಿದೆ.
ಇದೆಲ್ಲಾ ರವಿ ಬೆಳಗೆರೆ ವರ್ತನೆಯಿಂದಲೇ ಬರುತ್ತಿರುವ ಅನುಮಾನಗಳು. ಏಕೆಂದರೆ ಅವರು ಫೇಸ್ ಬುಕ್   ನಲ್ಲಿ ಬರೆದುಕೊಂಡಿದ್ದಂತೆ ಜನಶ್ರೀ ಸೇರಿದ್ದೇ ಆಗಿದ್ದಲ್ಲಿ, ಅವರ ಕಾರ್ಯಕ್ರಮಗಳು ಆರಂಭವಾಗಬೇಕಿದ್ದವು. ಜನಶ್ರೀ ಕಚೇರಿಗೆ ಹೋಗಿ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಆದರೆ ಅದಾವುದೂ ಆಗಿಲ್ಲ. ರವಿ ಒಂದು ದಿನವೂ ಜನಶ್ರೀ ಮುಖ್ಯಸ್ಥನಂತೆ ವರ್ತಿಸಲೇ ಇಲ್ಲ.
ಇದಕ್ಕೆ ಮತ್ತೊಂದು ಸಾಕ್ಷಿ ಎಂದರೆ ಒಸಾಮಾ ಬಿನ್ ಲಾಡೆನ್ ಹತ್ಯೆಯಾದಾಗ ರವಿ ಬೆಳೆಗೆರೆ ನಡೆದುಕೊಂಡ ರೀತಿ! ನಿಜಕ್ಕೂ ರವಿ ಬೆಳಗೆರೆ ಜನಶ್ರೀ ಜೊತೆ ಸಂಬಂಧ ಇದ್ದರೆ, ಜನಶ್ರೀ ಉಸ್ತುವಾರಿ ವಹಿಸಿಕೊಂಡಿದ್ದರೆ ಅವತ್ತು ಜನಶ್ರೀಯಲ್ಲಿ ಕಾರ್ಯಕ್ರಮ ನಡೆಸಿಕೊಡಬೇಕಿತ್ತು. ಆದರೆ ರವಿ ಕಾಣಿಸಿಕೊಂಡದ್ದು ಸುವರ್ಣ ಟೀವಿಯಲ್ಲಿ. ತಾವೇ ಮುಖ್ಯಸ್ಥರಾಗಿರುವ ಚಾನೆಲ್ ಬಿಟ್ಟು ರವಿ ಏಕೆ ಬೇರೆ ಚಾನೆಲ್ ನಲ್ಲಿ ಕಾಣಿಸಿಕೊಂಡರೋ? ಇಲ್ಲೂ ಎರಡು ಮೂರು ಸಾಧ್ಯತೆಗಳಿವೆ.
1. ಟಿವಿ9 ರವಿಯನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ರವಿಯ ಮನೋಭಾವ, ಗುಣ ಎಲ್ಲವೂ ಟಿವಿ9 ನಲ್ಲಿ ಇರುವವರಿಗೆ ಚಿರಪರಿಚಿತ. ರವಿ ಏನೇ ಭಾಷಣ ಹೊಡೆದರೂ ಅದೆಲ್ಲಾ ಸುಳ್ಳೇ ಸುಳ್ಳು ಎಂದು ಎಲ್ಲರಿಗೂ ಗೊತ್ತು.
2. ಜನಶ್ರೀಗೆ ಹೋದರೆ ಅದನ್ನು ನೋಡುವವರೇ ಇಲ್ಲ. ರವಿ ಬೆಳಗೆರೆ ಅಲ್ಲಿ ಇದ್ದಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ರವಿ ಬೆಳಗೆರೆಯನ್ನು ಕಿತ್ತು ಹಾಕಿದ್ದಾರೋ, ಅಥವಾ ರವೀನೇ ರಾಜೀನಾಮೆ ನೀಡಿದ್ದಾರೋ ಎಂಬುದೂ ತಿಳಿದಿಲ್ಲ.
3. ಇನ್ನು ಹಾಳು ಊರಿಗೆ ಉಳಿದವನೇ ಗೌಡ ಎಂಬಂತೆ ಇರುವುದು ಸುವರ್ಣ! ಅದೇನೋ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಗಾದೆ ಇದೆಯಲ್ಲ, ಆ ಪರಿಸ್ಥಿತಿ. ದಿನೇದಿನೇ ಸುವರ್ಣದ ಟಿಆರ್ಪಿ ಕುಸಿಯುತ್ತಿದೆ. ನಾನೇ ಚೀಫ್ ಎಂಬ ಭ್ರಮೆಯಲ್ಲಿರುವ ಹಮೀದ್ ಹೈರಾಣಾಗಿ ತಮ್ಮ ಕುರ್ಚಿಗೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಏನೋ ಮಾಡಿದ್ದೇನೆ ಎಂದು ತೋರಿಸಿಕೊಳ್ಳುವ ಉಮೇದಿ ಇತ್ತು. ರವಿ ಬೆಳಗೆರೆಗೂ ಆ ಕ್ಷಣಕ್ಕೆ ಒಂದು ಚಾನೆಲ್ ನಲ್ಲಿ ಮುಖ ತೋರಿಸಬೇಕಿತ್ತು. ಎರಡೂ ಈಡೇರಿದವು.
ಆದರೆ ಅಸಲಿ ಸಂಗತಿ ಎಂದರೆ ರವಿ ಬೆಳಗೆರೆ ಜನಶ್ರೀ ಚಾನೆಲ್ ಸೇರಿಯೇ ಇಲ್ಲ! ಬಂದು ಸೇರಿಕೊಳ್ಳಿ ಎಂದು ಯಾರೂ ಅವರನ್ನು ಕರೆದೂ ಇಲ್ಲ. ಜನಶ್ರೀ ಸೇರಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಳ್ಳುವ ಹೊತ್ತಿಗೆ ರವಿ ಬೆಳಗೆರೆ - ವಿಶ್ವೇಶ್ವರ ಭಟ್ಟರು ಹಾಗೂ ಅವರ ಪ್ಯಾರಾಸೈಟ್ ಗಳ ವಿರುದ್ಧ ಬೀದಿ ಜಗಳಕ್ಕೆ ಬಿದ್ದಿದ್ದರು. ರವಿ ಬೆಳಗೆರೆಯ ಎರಡನೇ ಅನಧಿಕೃತ ಪತ್ನಿ ಯಶೋಮತಿ, ಪುತ್ರ ರತ್ನ ಹಿಮವಂತ್, ರವಿ ಬೆಳಗೆರೆ ಮಹಿಳೆಯರಿಗೆ ಬರೆದ ಪ್ರೇಮ ಪತ್ರಗಳನ್ನು ಪ್ರತಾಪ್ ಸಿಂಹ ಎಕ್ಸ್ಪೋಸ್ ಮಾಡುತ್ತಿದ್ದರು. ಇದೆಲ್ಲದರಿಂದ ನಾನು ಡಿಸ್ಟರ್ಬ ಆಗಿಲ್ಲ. ನಾನು ಯಶಸ್ಸಿನ ಶಿಖರ ಏರುತ್ತಿದ್ದೇನೆ ಎಂದು ತೋರಿಸಿಕೊಳ್ಳಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಗಮನ ಬೇರೆ ಕಡೆ ಸೆಳೆದು, ಸುದ್ದಿ ಮಾಡಬೇಕಿತ್ತು. ಬೋ ಪರಾಕ್ ಎನಿಸಿಕೊಳ್ಳಬೇಕಿತ್ತು. ಹೀಗಾಗಿ ನಾನು ಜನಶ್ರೀ ಸೇರಿದ್ದೇನೆ ಎಂದು ಬರೆದುಕೊಂಡಿದ್ದು. 
ನಿಜ ಹೇಳಬೇಕೆಂದರೆ, ಕುಡಿತ ಸಿಗರೇಟ್ ಗಳಿಂದ ಆರೋಗ್ಯ ಹಾಳು ಮಾಡಿಕೊಂಡು ಹೈರಾಣಾಗಿರುವ ಬೆಳಗೆರೆಗೆ ನಿಜಕ್ಕೂ ಒಂದು ಚಾನೆಲ್ಲಿಗೋಸ್ಕರ ನಿಂತು ಬಡಿದಾಡುವ ಶಕ್ತಿ ಇಲ್ಲ. ಅವರೇ ಕಟ್ಟಿಕೊಂಡ ಹಾಯ್ ಬೆಂಗಳೂರು ಎಂಬ ಕೋಟೆ ಕುಸಿದು ಹೋಗುತ್ತಿದೆ. ಸಕ್ಯರ್ೂಲೇಷನ್ ಪಾತಾಳಕ್ಕೆ ಕುಸಿದಿದೆ. ಏನೇ ಕಸರತ್ತು, ಗಿಮಿಕ್ ಮಾಡಿದರೂ ಸಕ್ಯರ್ೂಲೇಷನ್ ಏರುತ್ತಿಲ್ಲ. ರವಿ ಬೆಳಗೆರೆ ಮ್ಯಾಜಿಕ್ ಕಡಿಮೆಯಾಗುತ್ತಿದೆ. ಮೇಲಾಗಿ ರವಿ ಬೆಳಗೆರೆ ಬಗ್ಗೆ ಇದ್ದ ಭಾವನೆಯೂ ಈಗ ಜನರಲ್ಲಿ ಬದಲಾಗಿದೆ. ಮೊದಲಿನಷ್ಟು ಆಪ್ತ ಭಾವದಿಂದ ಹಾಯ್ ಬೆಂಗಳೂರು ಓದುವ ಓದುಗ ದೊರೆಗಳು ಈಗಿಲ್ಲ. ಹೀಗಾಗಿ ರವಿ ಬೆಳಗೆರೆಗೆ ತಾವು ಏರಿ ಕೂತ ಹುಲಿಯನ್ನೇ ಸಂಭಾಳಿಸಿಕೊಂಡರೆ ಸಾಕು ಎನ್ನುವಂತಾಗಿದೆ. ಇನ್ನು ಜನಶ್ರೀ ಉಸ್ತುವಾರಿ ಹೇಗೆ ಹೊತ್ತುಕೊಂಡಾರು?
ಇದು ಸುಳ್ಳು ಎಂದಾದರೆ ದಯವಿಟ್ಟು ರವಿ ಬೆಳಗೆರೆ ಜನಶ್ರೀ ಸೇರಲು ತಮಗೆ ಬಂದ ಆಫರ್ ಲೆಟರ್ ಪ್ರಕಟಿಸಲಿ. ಜನಶ್ರೀಯಲ್ಲಿ ರಿಪೋರ್ಟರ್, ಆಂಕರ್, ಡೆಸ್ಕ್ ಚೀಫ್ ಹೀಗೆ ಏನು ಆಗಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದಾರೆ ಎಂದಾದರೂ ತಿಳಿಸಲಿ. ಆಗ ನಾವು ಬರೆದದ್ದು ಸುಳ್ಳು ಎಂದು ಈ ಪೋಸ್ಟ್ ತೆಗೆದುಬಿಡುತ್ತೇವೆ.


 

No comments:

Post a Comment