Friday, April 29, 2011

ಜನಶ್ರೀಯ ಇತಿಶ್ರೀಗೆ ಕ್ಷಣಗಣನೆ


ಒಂದು ಹೊಸ ಆಶಾಕಿರಣ ಎಂಬ ಅಡಿ ಬರಹ ಹೊತ್ತು ಕನ್ನಡ ಮೀಡಿಯಾ ಲೋಕಕ್ಕೆ ಎಂಟ್ರಿಕೊಟ್ಟ 'ಜನಶ್ರೀ' ಚಾನೆಲ್ ಈಗ ಇತಿಶ್ರೀ ಆಗೋ ಹಂತಕ್ಕೆ ಬಂದಿದೆ. ರವಿ ಬೆಳಗೆರೆ ಚಾನೆಲ್ ನೇತೃತ್ವ ವಹಿಸಿಕೊಂಡಿದ್ದಾರೆ ಎಂದಾಗ ಆ ಬಗ್ಗೆ ಕೆಲ ನಿರೀಕ್ಷೆಗಳಿದ್ದವು. ಆದರೆ ರವಿ ಬೆಳಗೆರೆಗೆ ಒಂದು ಟ್ಯಾಬ್ಲಾಯ್ಡ್ ನಡೆಸುವುದಕ್ಕೂ, ಒಂದು ಚಾನೆಲ್ ಕಟ್ಟುವುದಕ್ಕೂ ಇರುವ ವ್ಯತ್ಯಾಸಗಳು ಗೊತ್ತಿರಲಿಲ್ಲ. ಹೀಗಾಗಿ, ಆರಂಭದಲ್ಲೇ ತಮ್ಮ ಲಿಮಿಟೇಷನ್ ಅರ್ಥಮಾಡಿಕೊಂಡ ರವಿ ಬೆಳಗೆರೆ, ಆಗೊಮ್ಮೆ, ಈಗೊಮ್ಮೆ ಚಾನೆಲ್ನಲ್ಲಿ ಮುಖ ತೋರಿಸಿದ್ದು ಬಿಟ್ಟರೆ, ಮತ್ತೆ ಅದರ ಉಸಾಬರಿಗೆ ಹೋಗಲಿಲ್ಲ. ಹಿಂಗಾಗಿ ಜನಶ್ರೀ ಆರಂಭದಲ್ಲೇ ಅನಾಥವಾಗಿತ್ತು.
ಅನಂತ್ ಚಿನಿವಾರ್ ಒಳ್ಳೆಯ ಬರಹಗಾರ. ಚಂದಾಗಿ ಬರೆಯುತ್ತಾರೆ ಎಂಬುದರಲ್ಲಿ ಎರಡು ಅನುಮಾನವಿಲ್ಲ. ಆದರೆ ಅದನ್ನೇ ಚಾನೆಲ್ ನಡೆಸಲು ಇರುವ ಯೋಗ್ಯತೆ ಎಂದು ಅರಿತುಕೊಂಡು, ಚಾನೆಲ್ ಉಸ್ತುವಾರಿ ವಹಿಸಿಕೊಳ್ಳಲು ಹೊರಟದ್ದು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಠಿ ಮಾಡಿತ್ತು. ಅಬ್ಬಬ್ಬಾ ಎಂದರೆ ಒಂದು ಡೆಸ್ಕ್ ಚೀಫ್ ಅಥವಾ ವಿಶೇಷ ಕಾರ್ಯಕ್ರಮಗಳ, ಟೆನ್ಷನ್ ಇಲ್ಲದೆ ಯಾವಾಗ ಕೊಟ್ಟರೂ ನಡೆಯುತ್ತೆ ಎನ್ನುವಂತಹ ಕಾರ್ಯಕ್ರಮಗಳ ಸ್ಕ್ರಿಪ್ಟ್ ವಿಭಾಗವನ್ನು ಚನ್ನಾಗಿ ನೋಡಿಕೊಳ್ಳಬಲ್ಲರು. ಅದಕ್ಕಿಂತ ಹೆಚ್ಚು ಏಗುವುದು ಚಿನಿವಾರ್ ಗೆ ಹೈಲಿ ಇಂಪಾಸಿಬಲ್. ಚಾನೆಲ್ ಹಳ್ಳ ಹಿಡಿದು ಹೋಗಲು ಅಷ್ಟು ಸಾಕಾಗಿತ್ತು. ಅನಂತ್ ಚಿನಿವಾರ್ ಕೈಹಾಕಿದ ಯಾವ ಪ್ರಾಜೆಕ್ಟೂ ಮೇಲೆದ್ದಿಲ್ಲ. ಎಲ್ಲವೂ ಮಕಾಡೆ ಮಲಗಿದವೆ ಹೊರತು, ಚೂರೂ ಮೇಲೇಳಲಿಲ್ಲ. ಓ ಮನಸೇ, ರಾಜ್ ಟಿವಿ, ಜನಶ್ರೀ...ಹೀಗೆ ಎಲ್ಲವೂ ಇತಿಶ್ರೀ ಇತಿಹಾಸಗಳೇ! ಮೇಲಾಗಿ ಕೇಬಲ್ ಡಾನ್ ಮೂತರ್ಿ ಎಂಬಾತನ ದೂರದ ಸಂಬಂಧಿ ಈ ಚಿನಿವಾರ್ ಎಂಬ ಮಾತುಗಳೂ ಇವೆ. ಅದೇ ಲಿಂಕ್ ಮೇಲೆೆ ಚಾನೆಲ್ ಮುಖ್ಯಸ್ಥನಾಗಿ ಬಂದು ಕೂತದ್ದು ಎಂಬ ಮಾತುಗಳು ಎಷ್ಟು ನಿಜವೋ ಜನಾರ್ಧದನನೇ ಬಲ್ಲ.
ಜನಾರ್ಧನರೆಡ್ಡಿಗೆ ದುಡ್ಡು ಹಾಕೋದು ಗೊತ್ತಿತ್ತೇ ಹೊರತು, ಯಾವ ಸ್ಥಾನಕ್ಕೆ ಯಾರನ್ನು ತಂದು ಕೂರಿಸಬೇಕು ಎಂಬ ಪ್ರಜ್ಞೆ ಇರಲಿಲ್ಲ. ಸೂಕ್ತ ವ್ಯಕ್ತಿಯನ್ನು ತಂದು ಕೂರಿಸಿ, ಅವರಿಗೆ ಪೂತರ್ಿ ಸ್ವಾತಂತ್ರ ಕೊಟ್ಟಿದ್ದರೆ ಸರಿ ಹೋಗ್ತಿತ್ತು. ಆದರೆ ಮೂತರ್ಿ ಹೇಳಿದ್ದು ಅಥವಾ ರವಿ ಬೆಳಗೆರೆ ಹೇಳಿದ್ದು ಅಂತ ಚಿನಿವಾರ್ ನನ್ನು ತಂದು ಕೂರಿಸಿಕೊಂಡರು. ಹೋಗಲಿ ಅವರಿಗಾದರೂ ಫುಲ್ ಫ್ರೀಡಂ ಕೊಟ್ಟರಾ? ಅದೂ ಇಲ್ಲ. ಏಕೆಂದರೆ ಅವರ ತಲೆ ಮೇಲೆ ನಾವೇ ಚಾನೆಲ್ ಮುಖ್ಯಸ್ಥರು, ನಾವೇ ಚಾನೆಲ್ ನ ಡೈರೆಕ್ಟರ್ ಗಳು ಎಂದು ಜಾಗಟೆ ಬಾರಿಸಿಕೊಳ್ಳುವ ಕರಟಕ, ಧಮನಕರನ್ನೂ ಮೇಳೆ ಕೂರಿಸಿದರು. ಸಂಜಯ್ ಬೆಟಗೇರಿ ಹಾಗೂ ಮೂತರ್ಿ. ಇಬ್ಬರೂ ಅದ್ಯಾವ ಆಕ್ಸ್ಫರ್ಡ್ ನಲ್ಲಿ ಪತ್ರಿಕೋದ್ಯಮ ಕಲಿತು ಬಂದವರೋ ಏನೋ? ಅಸಲಿಗೆ 2 ಸಾವಿರ ಸಂಬಳಕ್ಕೆ ಸೇರಿಕೊಂಡಿದ್ದ ಸಂಜಯ್ ಬೆಟಗೇರಿ ನಾನೂ ಅಂದಕಾಲೆತ್ತಿಲೆ ಪತ್ರಕರ್ತನಾಗಿದ್ದೆ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಜನಶ್ರೀಗೆ ಈತನನ್ನು, ಕೇಬಲ್ ಮಾಫಿಯಾ ಡಾನ್ ಮೂತರ್ಿಯನ್ನು ಉಸ್ತುವಾರಿಗೆ ಜನಾರ್ಧನ ರೆಡ್ಡಿ ತಂದು ಕೂರಿಸಿದ್ದಾರೆ.
ಈ ಇಬ್ಬರಿಗೂ ಪತ್ರಿಕೋದ್ಯಮದ ಓನಾಮ ಗೊತ್ತಿಲ್ಲ. ಕೇಬಲ್ ಹೆಸರಲ್ಲಿ, ಚಾನೆಲ್ ಹೆಸರಿನಲ್ಲಿ ಸಿಕ್ಕ ಸಿಕ್ಕಲ್ಲಿ ತಿಂದು ತೇಗಿದ್ದಾರೆ. ಜನಾರ್ಧನ ರೆಡ್ಡಿ ಒಮ್ಮೆ ಕೂತು ಸರಿಯಾಗಿ ಅಕೌಂಟ್ಸ್ ಗಮನಿಸಿದ್ದೇ ಆದರೆ, ಈ ಇಬ್ಬರನ್ನು ನೇರ ಜೈಲಿಗೆ ಕಳುಹಿಸುವುದು ಗ್ಯಾರಂಟಿ! ಇನ್ನು ಈ ಇಬ್ಬರಿಗೂ ಬಕೆಟ್ ಹಿಡಿಯುತ್ತಲೇ ಸಿಓಓ ಆಗಿ ಬಂದು ಕೂತದ್ದು ಟಿವಿ9 ನ ತಿರುಮಲೇಶ ದೇಸಾಯಿಯವರು. ಇವರು ಕಡಿದು ಕಟ್ಟೆ ಹಾಕಿದ್ದು ಏನೇನು ಅಂತ ಇಡೀ ಟಿವಿ9 ಗೆ ಗೊತ್ತು. ರಿಸೆಪ್ಷನ್ ಒಬ್ಬಳು ಚಂದಗಿದ್ದಾಳೆ. ಬೆಳ್ಳಗಿದ್ದಾಳೆ. ತೆಳ್ಳಗಿದ್ದಾಳೆ ಎಂದು ನೋಡಿದ ಈ ದೇಸಾಯಿಯವರು ಆಕೆಯನ್ನು ತಾನು ಕೂರುವ ಕುಚರ್ಿಯ ಹಿಂದೇ ಮತ್ತೊಂದು ಕುಚರ್ಿ ಹಾಕಿಸಿಕೊಂಡು ದಿನದ 24 ಗಂಟೆಯೂ ಆಕೆ ತನ್ನ ಮುಂದೆ ಇರುವಂತೆ ಮಾಡಿದ್ದು ತಿಳಿಯದ್ದೇನಲ್ಲ. ಇದರಿಂದ ರೋಸಿಹೋಗಿದ್ದ ಆ ಶ್ವೇತವರ್ಣದ ಬಾಲೆ ಸೀದಾ ಹೋಗಿ ಮಹೇಂದ್ರ ಮಿಶ್ರಾಅವರ ಮುಂದೆ ದೂರು ಹೇಳಿದ್ದಳು. ಇದಾದ ನಂತರವೂ ದೇಸಾಯಿಯವರು ಕಾಡಬಾರದ ಕಾಟ ಕೊಟ್ಟಿದ್ದರು. ಕೊನೆಗೆ ಮಿಶ್ರಾ ದೇಸಾಯಿಯನ್ನು ತನ್ನ ಅಂತರಂಗದಿಂದ ದೂರ ಮಾಡಿದ್ದು ಎಲ್ಲರಿಗೂ ಗೊತ್ತು. ಆಗಲೇ ಪನಿಷ್ ಮೆಂಟ್ ಎಂಬಂತೆ ದೇಸಾಯಿಯನ್ನು ಕೇಬಲ್ ಸಮಸ್ಯೆ ನೋಡಿಕೋ ಎಂದು ಬಿಡಲಾಯಿತು. ಆಗಲೇ ಈತನಿಗೆ ಸಂಜಯ್, ಮೂತರ್ಿ ಪರಿಚಯವಾಗಿದ್ದು. ಇವರನ್ನು ಮುಂದಿಟ್ಟುಕೊಂಡು ಕೇಬಲ್ ಆಪರೇಟರ್ ಗಳಿಗೆ ಹೇಳಿ ದೇಸಾಯಿ ರಾತ್ರೋರಾತ್ರಿ ಟಿವಿ9 ಕಟ್ ಮಾಡಿಸುತ್ತಿದ್ದ. ಬೆಳಿಗ್ಗೆ ಮೀಟಿಂಗ್ ನಲ್ಲಿ ಕೇಬಲ್ನವರು ಮತ್ತೆ ಚಾನೆಲ್ ಹಾಕಲು ಇಷ್ಟು ಲಕ್ಷ ಕೇಳ್ತಿದ್ದಾರೆ ಎಂದು ಹೇಳ್ತಿದ್ದ. ಇದನ್ನು ನಂಬಿದ ಮ್ಯಾನೇಜ್ ಮೆಂಟ್ ಕೋಟಿ ಗಟ್ಟಲೇ ಹಣ ನೀಡಿತು. ಆದರೆ ಅದೆಲ್ಲ ಸೇರಿದ್ದು ದೇಸಾಯಿ ಸಾಹೇಬರ ಜೇಬು! ಇನ್ನು ಈಟಿವಿಯಲ್ಲಿದ್ದಾಗ ದೇಸಾಯಿ ಆಡಿದ ಆಟಗಳು ರಾಮೋಜಿ ಫಿಲಂಸಿಟಿಯಲ್ಲೇ ಜಗದ್ವಿಖ್ಯಾತವಾಗಿದ್ದವು. ಬಳ್ಳಾರಿ, ರಾಯಚೂರು ಭಾಗದ ಅಮಾಯಕರನ್ನು ನೌಕರಿ ಕೊಡಿಸುತ್ತೇನೆ ಎಂದು ಹೈದರಾಬಾದ್ಗೆ ಕರೆಸಿಕೊಂಡು, ಅವರಿಂದ ಹಣ ಪೀಕುತ್ತಿದ್ದ ಕಿರಾತಕನೀತ! ಇದು ತಿಳಿಯುತ್ತಲೇ ದೇಸಾಯಿಯವರ ಆಪ್ತರಾಗಿದ್ದವರೇ ಆತನ ಮಾನ ಹರಾಜು ಹಾಕಿದ್ದರು. ಆಗಲೇ ದೇಸಾಯಿ ಸಾಹೇಬರನ್ನು ಈಟಿವಿ ಕಿತ್ತು ಮನೆಗೆ ಓಡಿಸಿತ್ತು. ಆದರೆ ನಯಮಾತಿನ ಈ ವಂಚಕ ಸೇರಿದ್ದು ಮಾ ಟಿವಿ. ಅಲ್ಲಲ್ಲಿ ಸುತ್ತಾಡಿ ಈಗ ಜನಶ್ರೀಯಲ್ಲಿ ಮೇಯುತ್ತಿದ್ದಾನೆ. ತಾನೇ ಎಲ್ಲದ್ದಕ್ಕೂ ಚೀಫ್ ಎಂಬಂತೆ ಪೋಸ್ ನೀಡುತ್ತಿದ್ದಾನೆ. ತಾನೇ ಇಂಟರ್ ವ್ಯೂ ಮಾಡಲು ಮುಂದಾಗುತ್ತಾನೆ. ಈತ ತನಗೆ ಚೊಂಬು ಹಿಡಿಯುವ, ತಾನು ಹೇಳಿದಂತೆ ಕೇಳುವ ಮೇಲ್- ಫೀಮೇಲ್ ಆಂಕರ್ ಗಳನ್ನು ಟಿವಿ9 ನಿಂದ ಹೊತ್ತು ತಂದ. ಇಂಥವನು ಸಿಓಓ ಆದ ಚಾನೆಲ್ ಇನ್ನೇನು ಉದ್ದಾರವಾದೀತು?
ಇನ್ನು ಹೀರೋ ರೀತಿ ಎಂಟ್ರಿ ಕೊಡಲು ಹೋಗಿ ಮುಗ್ಗರಿಸಿ ಬಿದ್ದು ವಿಲನ್ ಆಗಿರೋ ಮತ್ತೊಬ್ಬ ಸೈಡ್ ಆಕ್ಟರ್ ಚೇತನ್. ಈತ ಟಿವಿ9 ನಲ್ಲಿದ್ದಾಗ ಚಕ್ರವ್ಯೂಹದಲ್ಲಿ ಮಿಂಚಿದ್ದ. ಆದರೆ ಆಗ ಈತ ಕೇಳುವ ಪ್ರಶ್ನೆ ರೆಡಿ ಮಾಡಿಕೊಡಲು ಒಂದು ತಂಡವೇ ಇತ್ತು. ರವೀಂದ್ರ, ಮಾರುತಿ, ರಾಘವೇಂದ್ರ ಎಂ.ಎಸ್., ನಂತರ ಹೊರಗಿನಿಂದ ಮಿಡ್ಡೇ ಯಲ್ಲಿದ್ದ ಈತನ ಗುರು ಶಿವಶಂಕರ್, ಹೀಗೆ ಎಲ್ಲರೂ ಈತನಿಗೆ ನೆರವಾಗುತ್ತಿದ್ದರು. ಅದನ್ನೇ ಬಳಸಿಕೊಂಡು, ದಿನಗಟ್ಟಲೇ ಯಾವ ಪ್ರಶ್ನೆ ಕೇಳಬೇಕು ಎಂದು ರೆಡಿ ಮಾಡಿಟ್ಟುಕೊಂಡು, ಪ್ರಶ್ನೆ ಕೇಳುತ್ತಿದ್ದ. ಆದರೆ ತಾನು ಪರಾವಲಂಬಿ ಎಂಬುದನ್ನು ಮರೆತೇ ಬಿಟ್ಟಿದ್ದ. ಚಕ್ರವ್ಯೂಹದ ಯಶಸ್ಸು ಈತನ ತಲೆ ಏರಿದ್ದೇ ಯಡವಟ್ಟಾಯ್ತು! ಮಿಶ್ರಾ ಸಹ ಈತನನ್ನು ತಲೆ ಮೇಲೆ ಹೊತ್ತುಕೊಂಡ, ಮೈಮೇಲೇ ದೇವರು ಬಂದಂತೆ ಕುಣಿದುಬಿಟ್ಟಿದ್ದರು. ನಾಯಿ ಯಾವತ್ತಿದ್ದರೂ ನಾಯಿ ಎಂಬುದು ಅವರಿಗೆ ಗೊತ್ತಿರಲಿಲ್ಲ. ಚೇತನ್ ಹೇಸಿಗೆ ಕಂಡ ತಕ್ಷಣ ಹಾರಿ ಹೋಗಿದ್ದ. ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈತ ಹಾಗೂ ಮತ್ತೊಬ್ಬ ವರದಿಗಾರ ಅವಿನಾಶ್ ಜೊತೆ ಸೇರಿ ಕಂಡ ಕಂಡಲ್ಲಿ ಎತ್ತುವಳಿ ಮಾಡಿದ್ದರು. ಕುಪೇಂದ್ರ ರೆಡ್ಡಿಯಿಂದ ಆತನ ಪರ ಸುದ್ದಿ ಮಾಡಲು ಸೈಟ್ ಗಳನ್ನೂ ಬಳುವಳಿಯಾಗಿ ಪಡೆದಿದ್ದರು. ಚುನಾವಣೆ ಸಂದರ್ಭದಲ್ಲಿ ಚೇತನ್ ಕಾಂಗ್ರೆಸ್ ನಿಂದ ಸೆಗಣಿ ತಿಂದು ಶಿಕಾರಿಪುರದಲ್ಲಿ ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದದ್ದು ಮಾತನಾಡಿದ್ದ. ಆಗ ರೊಚ್ಚಿಗೆದ್ದ ಜನರು ಟಿವಿ9 ವಾಹನವನ್ನೇ ಸುಡಲು ಮುಂದಾಗಿದ್ದರು. ಆಗ ಅಲ್ಲಿಂದ ಎದ್ದೆನೋ ಬಿದ್ದೆನೋ ಎಂಬಂತೆ ಚೇತನ್ ಓಡಿ ಎಸ್ಕೇಪ್ ಆಗಿದ್ದ. ಕುಪೇಂದ್ರ ರೆಡ್ಡಿ ಪತ್ರಿಕೋಗೋಷ್ಠಿಯಲ್ಲಿ ಚೇತನ್ ಹಾಗೂ ಅವಿನಾಶ್ ಇಬ್ಬರೂ ಸೈಟ್ ಪಡೆದುಕೊಂಡದ್ದನ್ನು ನೇರವಾಗಿಯೇ ಹೇಳಿ ಝಾಡಿಸಿದ್ದ. ಈ ಹೊಡೆತಕ್ಕೇ ತತ್ತರಗುಟ್ಟಿದ ಮಿಶ್ರಾ, ತಕ್ಷಣ ಚೇತನ್, ಅವಿನಾಶ್ ಇಬ್ಬರನ್ನೂ ಮನೆಗೆ ಕಳುಹಿಸಿದರು.
ಆಗ ಈತನ ಕೈ ಹಿಡಿದದ್ದು ಶಿವಶಂಕರ್. ಕೆಲವ ವರ್ಷ ಅವರ ಜೊತೆ ಇತ್ತು, ಮತ್ತೆ ಏನೋ ಮಾಡಿ ಬಿಡ್ತೇನೆ. ನಾನು ಕನ್ನಡದ ಕರಣ್ ಥಾಪರ್ ಎಂದು ಹೇಳಿಕೊಳ್ಳುತ್ತ ಜನಶ್ರೀ ಸೇರಿದ ಚೇತನ್, ಎರಡೇ ತಿಂಗಳಲ್ಲಿ ಎಕ್ಸ್ಪೋಸ್ ಆಗಿದ್ದ. ಮರುಳಸಿದ್ದಯ್ಯನವರ ಸಂದರ್ಶನ ಮಾಡುವಾಗ, ಈತ ಅವರಿಂದ ಬೈಸಿಕೊಂಡ ಪರಿ ಹೇಗಿತ್ತು ಎಂದರೆ, ಆಗ ಜನಶ್ರೀ ಸಿಬ್ಬಂದಿ ಹಾಗೂ ಕನ್ನಡಿಗರಿಗೆ ಚೇತನ್ ಎಷ್ಟು ಮೂರ್ಖ ಎಂಬುದರ ಸಾಕ್ಷಾತ್ ದರ್ಶನವಾಗಿತ್ತು. ಏಕೆಂದರೆ ಅಲ್ಲಿ ಈತನಿಗೆ ಪ್ರಶ್ನೆ ರೆಡಿ ಮಾಡಿಕೊಡಲು ಯಾರೂ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಶಸ್ಸಿನ ಅಮಲು ತಲೆಗೇರಿಸಿಕೊಂಡ ಈತ ದೇಸಾಯಿಯವರ ಹಾದಿಯಲ್ಲೇ ಸಾಗಿದ್ದ. ಹುಡುಗಿಯೋರ್ವಳ ಜೊತೆ ಲಲ್ಲೆ ಹೊಡೆಯಲು ಆರಂಭಿಸಿದ್ದ. ಆಕೆಗೆ ಕೊಡ ಬಾರದ ಕಾಟ ಕೊಡಲು ಆರಂಭಿಸಿದ್ದ. ಆಕೆ ನೇರ ಹೋಗಿ ದೂರು ನಿಡಿದ್ದಾಳೆ. ಮ್ಯಾನೇಜ್ ಮೆಂಟ್ ತಕ್ಷಣ ಚೇತನ್ ನನ್ನು ಒದ್ದು ಹೊರ ಹಾಕಿದೆ. ಅದಾದ ನಂತರ ಈಗ ಚೇತನ್ ಬೆಂಗಳೂರು ಮಿರರ್ ನಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾನೆ ಎಂಬ ಸುದ್ದಿ. ಆದರೆ ಆತ ಬರೆದದ್ದನ್ನು ನೋಡಿದವರಿಲ್ಲ.
ಇನ್ನು ಟಿವಿ9 ನಿಂದ ನಾನೇ 'ಚೀಪ್' ಆಂಕರ್ ಎಂದು ಬಂದ ರಮಾಕಾಂತ್ ನನ್ನು ನೋಡಿ, ಯಾವ ಕಡೆಯಿಂದ ನಗಬೇಕೋ ಅರ್ಥವಾಗುತ್ತಿಲ್ಲ. ಈತ ಯಾವ ಸೀಮೆ ಚೀಪು... ಎಂದು ಜನಶ್ರೀ ಆಂಕರ್ ಗಳೇ ರೆಬೆಲ್ ಆಗಿದ್ದರು. ಟಿವಿ9 ನಲ್ಲಿದ್ದಾಗಲೇ ಗಂಡು ಸ್ವರೂಪಿಣಿಯಾದ ಆಂಕರ್ ಸೌಮ್ಯ ಜೊತೆ ಲವಿ ಡವಿ ಶುರುವಿಟ್ಟುಕೊಂಡಿದ್ದ ಈತ ಆಕೆಯನ್ನೂ ತನ್ನ ಜೊತೆ ಜನಶ್ರೀ ಗೆ ಕರೆತಂದಿದ್ದ. ಆಕೆಯ ತಲೆಯಲ್ಲಿ ಏನೂ ಇಲ್ಲದಿದ್ದರೂ, ರಮಾಕಾಂತ ಆಕೆಯನ್ನು ಮಿಂಚಿಸಲು ನೋಡಿದ. ಆದರೆ ಈತನ ತಲೆಯೂ ಅಷ್ಟೇ ಖಾಲಿ! ಈತ ನಡೆಸುಕೊಡುವ ಕಾರ್ಯಕ್ರಮಗಳನ್ನು ನೋಡಿದ್ರೆ ಈತ ಎಷ್ಟು ಜೊಳ್ಳು....ಕೇವಲ್ ಬೈಸೆಪ್ಸ್ ತೋರಿಸಿ, ಸ್ಮಾಟರ್ಾಗಿ ಇದ್ದು ಬಿಟ್ಟರೆ ಆಂಕರ್ ಆಗಬಹುದು ಎಂದುಕೊಂಡಿರುವ ಈತ ಮೂರ್ಖರಲ್ಲಿ ಮೂರ್ಖ ಎಂಬುದು ಈತನ ಜೊತೆ ಮಾತನಾಡಿದ ಐದೇ ನಿಮಿಷದಲ್ಲಿ ತಿಳಿದುಬಿಡುತ್ತದೆ.
ಉಳಿದ ಆಂಕರ್ ಗಳ ಬಗ್ಗೆ, ಜನಶ್ರೀ ಕಾರ್ಯಕ್ರಮಗಳ ಬಗ್ಗೆ ಹೇಳದಿರೋದೇ ವಾಸಿ. ಅಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ. ಸಂಜಯ್, ದೇಸಾಯಿ, ಮೂತರ್ಿ, ಇವರನ್ನೆಲ್ಲ ಹೊರಗಟ್ಟಿದಿದ್ದರೆ ಜನಶ್ರೀ ಇತಿಶ್ರೀ ಆಗುವ ದಿನಗಳು ದೂರ ಇಲ್ಲ.