Tuesday, February 15, 2011

ಎಚ್.ಆರ್.ರಂಗನಾಥ ಮತ್ತು ಕುಮಾರಸ್ವಾಮಿ ಸಮಯ ಕೊಂಡ್ರಾ?

ಸಮಯ ಫಾರ್ ಸೇಲ್ ಅನ್ನೋ ಸುದ್ದಿ ಕಳೆದ 4 ತಿಂಗಳಿನಿಂದಲೂ ಮೀಡಿಯಾ ಲೋಕದಲ್ಲಿ ಹರಿದಾಡ್ತಾ ಇತ್ತು. ಎಲ್ಲಾ ರಾಜಕಾರಿಣಿಗಳ ಹೆಸರು ಇದ್ರಲ್ಲಿ ಕೇಳಿ ಬಂದು, ಅವರು ಖರೀದಿ ಮಾಡಿದ್ದಾರೆ. ಇವರು ಖರೀದಿ ಮಾಡಿದ್ದಾರೆ ಎಂಬಂತೆಲ್ಲಾ ಸುದ್ದಿಗಳು ಹರಿದಾಡಿದ್ವು. ಸಂತೋಷ್ ಲಾಡ್, ಅನಿಲ್ ಲಾಡ್, ಖೇಣಿ, ಬಿ.ವೈ.ರಾಘವೇಂದ್ರ, ವಿಜಯೇಂದ್ರ, ವಿಆರ್ ಎಲ್ ಹೀಗೆ ಬಹುತೇಕರ ಹೆಸರುಗಳು ಹಾದು ಹೋದವು. ಈಗ ಮತ್ತೊಂದು ಹೆಸರು ಕೇಳಿ ಬರ್ತಿದೆ. ಆ ಹೆಸರೇ ಎಚ್.ಆರ್.ರಂಗನಾಥ್.
ಎಚ್.ಆರ್.ರಂಗನಾಥ ಸಮಯ ಟಿವಿ ಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಹೆಚ್ಚು ಪುಷ್ಠಿ ಪಡೆಯುತ್ತಿದೆ. ಕೆಲವರ ಪ್ರಕಾರ ಈಗಾಗಲೇ ಎಚ್.ಆರ್.ರಂಗನಾಥ್ ಸುಮಾರು 30 ಕೋಟಿಗೆ ವ್ಯವಹಾರ ಕುದುರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಸ್ವತ: ಎಚ್.ಡಿ.ಕುಮಾರಸ್ವಾಮಿ ಇದಕ್ಕೆ ಕೈಹಾಕಿದ್ದಾರೆ. ಅವರಿಗೂ 24 ಗಂಟೆ ಸುದ್ದಿ ವಾಹಿನಿ ಮಾಡಬೇಕು ಎಂಬ ಆಸೆ ಇತ್ತು. ಈಗ ಸಮಯದ ಮೂಲಕ ಅದನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಆದರೆ ರಾಜಕಾರಿಣಿಯ ಚಾನೆಲ್ ಅಂದರೆ ಅದಕ್ಕೆ ಜನರು ಬೆಲೆ ನೀಡುವುದಿಲ್ಲ. ಈಗಾಗಲೇ ಕಸ್ತೂರಿ ಚಾನೆಲ್ ಹಣೆ ಬರಹ ನೋಡಿ ಆಗಿದೆ. ಹೀಗಾಗಿ ತೆರೆಯ ಹಿಂದೆ ತಾವಿದ್ದು, ತೆರೆಯ ಮುಂದೆ ಪತ್ರಕರ್ತರನ್ನೆ ಬಿಟ್ಟರೆ ಹೇಗೆ ಎಂಬ ಚಿಂತನೆಯಲ್ಲಿದ್ದಾರೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವುದು ಎಚ್.ಆರ್.ರಂಗನಾಥ್ ಅವರನ್ನ. ಈಗಾಗಲೇ ದುಬೈ ಮೂಲದ ಉದ್ಯಮಿಯೊಬ್ಬರು ಇದಕ್ಕೆ ಬೇಕಾದಷ್ಟು ಹಣ ನೀಡಲು ಮುಂದೆ ಬಂದಿದ್ದಾರೆ. ರಂಗನಾಥ ಸಹ ಸ್ವತ: ಹಣ ನೀಡಿ, ತಾವೂ ಮಾಲಿಕರಾಗುತ್ತಿದ್ದಾರೆ ಎಂಬ ಸುದ್ದಿಗಳಿವೆ. ಇನ್ನು ಕೆಲ ಮೂಲಗಳ ಪ್ರಕಾರ ಪೂತರ್ಿ ಹಣ ರಂಗನಾಥೇ ನೀಡುತ್ತಿದ್ದಾರೆ.
ಇದರ ಪ್ರಕಾರ ಈಗಾಗಲೇ ಡಾಲರ್ಸ್ ಕಾಲನಿಯ ರಂಗನಾಥ್ ಮನೆಯಲ್ಲಿ ಒಂದು ವಾರದ ಹಿಂದಷ್ಟೇ ಕುಮಾರಸ್ವಾಮಿ ಹಾಗೂ ರಂಗನಾಥ್ ಕುಳಿತು ಇದರ ಬಗ್ಗೆ ಚಚರ್ೆ ನಡೆಸಿದಸ್ದಾರೆ. ಇದಾದ ನಂತರ ಎರಡು ದಿನಗಳ ಹಿಂದೆ ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ ಹಾಗೂ ರಂಗನಾಥ ಸಹ ಚಚರ್ಿಸಿದ್ದಾರೆ. ಇನ್ನೇನು ಎಲ್ಲಾ ಫೈನಲ್ ಆಗಿ ಹೋಗಿದೆ. ಕೆಲವೇ ದಿನಗಳ ಮಾತಷ್ಟೇ ಎನ್ನಲಾಗುತ್ತಿದೆ.
ಅಷ್ಟಕ್ಕೂ ಎಚ್.ಆರ್.ರಂಗನಾಥ್ ಸಮಯ ಕೊಳ್ಳಲು ಮುಂದಾಗಿದ್ದು ನಿಜವೇ ಆದಲ್ಲಿ, ಅದಕ್ಕೆ ಕಾರಣ ವಿಶ್ವೇಶ್ವರ ಭಟ್ ಎನ್ನದೇ ಬೇರೆ ವಿಧಿ ಇಲ್ಲ. ಏಕೆಂದರೆ ವಿಶ್ವೇಶ್ವರ ಭಟ್ ಬರ್ತಿದ್ದಂತೆ ಶಿವ ಸುಬ್ರಹ್ಮಣ್ಯ ಎದ್ದು ಹೋಗುವಂತೆ ತಂತ್ರ ರೂಪಿಸಿದ್ದರು. ಮೇಲಾಗಿ ತಮ್ಮ ಭಟ್ಟಂಗಿಗಳ ಮೂಲಕ ಸುವರ್ಣಕ್ಕೂ ವಿಶ್ವೇಶ್ವರ ಭಟ್ ಅವರೇ ಎಡಿಟರ್ ಇನ್ ಚೀಫ್ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ರಂಗನಾಥ್ ಯಾವುದೇ ಕಾರಣಕ್ಕೂ ಭಟ್ಟರ ಕೆಳಗೆ ಕೆಲಸ ಮಾಡಲು ಒಪ್ಪುವುದಿಲ್ಲ. ಮೇಲಾಗಿ ರಾಜೀವ್ ಚಂದ್ರಶೇಖರ್ ಜೊತೆ ಅವರ ಸಂಬಂಧವೂ ಹಳಸಿದೆ. ಹೀಗಾಗಿ ತಮ್ಮ ಹಾದಿ ನೋಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.
ಇದರ ಜೊತೆಗೆ ರವಿ ಹೆಗಡೆ ಇನ್ನೂ ಅಧಿಕೃತವಾಗಿ ಉದಯವಾಣಿ ಸಏರ್ಪಡೆಯಾಗಿಲ್ಲ. ಇದಕ್ಕೆ ಮತ್ತೊಂಧು ಕಾರಣವೂ ಇದೆ. ಕುಮ್ಮಿ ಮತ್ತು ಎಚ್.ಆರ್. ಗ್ಯಾಂಗು ಸೂಯರ್ೋದಯ ಪತ್ರಿಕೆಯನ್ನೂ ಖರೀದಿ ಮಾಡಿದೆ ಎಂಬ ಸುದ್ದಿಗಳು ಒಳಗೇ ಹರಿದಾಡ್ತಿವೆ. ಆಗ ರವಿ ಹೆಗಡೆಯವರನ್ನು ಅದಕ್ಕೆ ತಂದು ಕೂರಿಸಿಕೊಳ್ಳುವುದು ರಂಗನಾಥ್ ಉದ್ದೇಶ. ಹೀಗಾಗಿ ರವಿಹೆಗಡೆ ಉದಯವಾಣಿ ಸೇರುವ ತಮ್ಮ ನಿಧರ್ಾರವನ್ನು ಪೆಂಡಿಂಗ್ ನಲ್ಲಿ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ.
ಈ ರೀತಿ ಸಮಯ, ಸೂಯರ್ೋದಯ ಎರಡೂ ಕೈಗೆ ಸಿಕ್ಕರೆ, ತಾವೂ ಮಾಲಿಕರಾಗಿರುವುದರಿಂದ ಬೇಕಾದಂತೆ ರಾಜಕೀಯ ದಾಳಗಳನ್ನು ಉರುಳಿಸಬಹುದು ಎಂಬುದು ರಂಗನಾಥ್ ಲೆಕ್ಕಾಚಾರ. ಇದಿಷ್ಟೂ ಆದರೆ ಆಗ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭಕ್ಕೆ ಬುದ್ದಿ ಕಲಿಸಲು ಬೇಕಾದಂತ ಸೂಯರ್ೋದಯ, ಸಮಯ ತಮ್ಮ ಕೈಯಲ್ಲೇ ಇರುತ್ತವೆ ಎಂಬುದು ಯೋಜನೆ. ಹೀಗಾಘಿ ಈಗ ಎಚ್.ಆರ್.ಸುವರ್ಣದ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ತೆರೆಯ ಮರೆಯಲ್ಲೇ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ, ಯೋಜನೆ ರೂಪಿಸಿದ್ದಾರೆ.
ಆದರೆ ಇದನ್ನು ಸಾಧಿಸಲು ರಂಗನಾಥಗೆ ನಿಜಕ್ಕೂ ದೃಶ್ಯ ಮಾಧ್ಯಮ ಅರಿತ ಪಂಟರ್ಗಳು ಬೇಕು. ಅದಕ್ಕಾಗಿ ಈಗ ಅವರು ಹುಡುಕಾಟ ನಡೆಸಿದ್ದಾರೆ. ಕೆಲವರನ್ನು ಕರೆಸಿ ಮಾತನಾಡುತ್ತಿದ್ದಾರೆ ಎಂಬ ಸುದ್ದಿಗಳಿವೆ.
ರಂಗನಾಥ ಬಿಟ್ಟದ್ದೇ ಆದಲ್ಲಿ ಸುವರ್ಣವನ್ನು ತಮ್ಮ ಹಿಡಿತಕ್ಕೇ ತೆಗೆದುಕೊಳ್ಳಲು ವಿಶ್ವೇಶ್ವರ ಭಟ್ಟರು ಚಿಂತನೆ ನಡೆಸಿದ್ದಾರೆ. ಆ ಮೂಲಕ ತಮ್ಮ ಕೈಯಲ್ಲೀ ಕನ್ನಡಪ್ರಭ ಹಾಗೂ ಸುವರ್ಣ ಎಂಬ ಎರಡು ಅಸ್ತ್ರಗಳನ್ನು ಇಟ್ಟುಕೊಂಡು ಹೋರಾಟ ಆರಂಭಿಸಲು ಅವರು ಸ್ಕೆಚ್ ಹಾಕಿದ್ದಾರೆ. ಆದರೆ 10 ವರ್ಷಗಳ ಹಿಂದೆ ಎಷ್ಟೇ ವಾತರ್ೆ ಓದಿದ್ದೇನೆ ಎಂದರೂ ವಇಶ್ವೇಶ್ವರ ಭಟ್ಟರ ಗುಣ ದೃಶ್ಯ ಮಾಧ್ಯಮಕ್ಕೆ ಹೊಂದಿಕೆಯಾಗದು.  ಹೀಗಾಗಿ ಹಿಂದೇಟು ಹಾಕುತ್ತಿದ್ದಾರೆ.
ಹಾಗೇನಾದರೂ ಆದರೆ ನಿಜಕ್ಕೂ ಶೋಚನೀಯ ಸ್ಥಿತಿ ಶಶಿಧರ ಭಟ್ಟರದ್ದಾಗುತ್ತದೆ. ವರ್ಷಗಳ ಹಿಂದೆ ಇದೇ ರಂಗನಾಥ ಸುವರ್ಣಕ್ಕೆ ಬಂದಾಗ, ಶಶಿಶರ್ ಭಟ್ಟರನ್ನು ಅಲ್ಲಿಂದ ಎತ್ತಂಗಡಿ ಮಾಡಿಸಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಸಮಯ ಸೇರಿದ ಭಟ್ಟರು ಮತ್ತೆ ಕವಳ ಹಾಕಿಕೊಂಡು, ಬಣ್ಣ ಹಚ್ಚಿಕೊಂಡು ಕುಳಿತಿದ್ದಾರೆ. ಇಂಥಾ ಸಂದರ್ಭದಲ್ಲಿ ರಂಗನಾಥ, ಸಮಯಕ್ಕೆ ಒಕ್ಕರಿಸಿದರೆ ಆಗ ಶಶಿಧರ್ ಮತ್ತೆ ಔಟ್! ಹಾಗೇನಾದರೂ ಆದಲ್ಲಿ ರಂಗನಾಥ ಶಶಿಧರ ಭಟ್ಟರ ಪಾಲಿಕೆ ಶನಿಯಾಗಿ ಕಾಡುವುದರಲ್ಲಿ ಸಂಶಯವಿಲ್ಲ.
ಆದರೆ ಈ ಎಲ್ಲಾ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂದು ತಿಳಿಯಲು ನೀವು ಇನ್ನೂ ಒಂದೆರಡು ತಿಂಗಳಾದರೂ ಕಾಯಲೇಬೇಕು.
ಇನ್ನು ರಂಗ ನಾಥ ಭಾರದ್ವಾಜ್, ಈಗ ನಾವು ಬರೆದಂತೆ ಅತಂತ್ರವಾಗಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕನರ್ಾಟಕದ ಟಾಪ್ ವಿಐಪಿಗಳನ್ನೆಲ್ಲಾ ಭೇಟಿ ಮಾಡಿ, ತನ್ನ ಅಸ್ತತ್ವಿ ತೋರಿಸಿಕೊಳ್ಳಲು ಹೆಣಗಾಡುತ್ತಿದೆ. ಕರೆಯದಿದ್ದರೂ ವಿವಿಧ ಪತ್ರಿಕೆಗಳ ಸಂಪಾದಕರು, ಚಾನೆಲ್ ಮುಖ್ಯಸ್ಥರು,  ಗಣ್ಯ ವ್ಯಕಜ್ತಿಗಳ ಮೆನೆಗೆ ಹೋಗಿ ಮಾತನಾಡಿ ಬರ್ತಿದೆ ಎಂಬ ಮಾಹಿತಿ ಇದೆ. ಆದರೆ ಈಗ ಜನಶ್ರೀಯಿಂದಲೂ ನಾಥಕ್ಕೆ ಭೇಡ ಎಂದು ಹಚಾ ಅಂದಿದ್ದಾರೆ. ಹೀಗಾಘಿ ಹೋಗುವುದಿದ್ದರೆ ಸಮಯಕ್ಕೆ ಹೋಗಬೇಕು. ಆದರೆ ಅಲ್ಲಿಗೆ ಮತ್ತೆ ಎಚ್.ಆರ್.ರಂಗನಾಥ್ ವಕ್ಕರಿಸಿದರೆ? ಎಂಬ ಆತಂಕ ನಾಥದ್ದು.  ಹೀಗಾಗಿ ಈಗ ಕಂಡ ಕಂಡವರ ಮುಂದೆ, ನನಗೆ ಜನಶ್ರೀಯಿಂದ ತುಂಬಾ ಒಳ್ಳೇ ಆಫರ್ ಇದೆ. ಟಿವಿ9ನಿಂದ ಮತ್ತೆ ಆಫರ್ ಇದೆ. ಆದರೆ ಟಿವಿ9 ನಲ್ಲಿ ಸಂಬಳ ಕಡಿಮೆ. ಆನಶ್ರೀಯಲದಲಾದರೆ ಸಿಕ್ಕಾಪಟ್ಟೆ ಕೊಡಲು ಒಪ್ಪಿದ್ದಾರೆ. ನೀವು ಏನು ಸಜೆಸ್ಟ್ ಮಾಡ್ತೀರಿ ಎಂದು ಕಂಡ ಕಂಡವರನ್ನು ಕೇಳಿಕೊಂಡು ಬೀದಿ ತಿರುಗಿತದೆ. ನಾಥದ ರಾಣಿ ರಾಧಿಕಾಕೂಡಾ, ಗಂಡನನ್ನು ಟಿವಿ9 ಕರೆತರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾಳೆ. ಈ ಹುಚ್ಚಾಟ ನೋಡಿದವರೆಲ್ಲರ ಮುಂದೆ ನಾಥ ಮತ್ತು ರಾಣಿ ನಗೆಪಾಟಲಿಗೆ ಈಡಾಗಿದ್ದಾರೆ.

Wednesday, February 2, 2011

ರವಿ ಬೆಳಗೆರೆ ಮಗ, ಫಿಟ್ಟಿಂಗ್ ಮಾಸ್ಟರ್ 'ನಾಥ' ಸುವರ್ಣದಿಂದ ಔಟ್!
ರವಿಬೆಳಗೆರೆಯ ಮಾನಸ ಪುತ್ರ ರಂಗ'ನಾಥ' 'ಭಾರ'ಧ್ವಾಜ (ನಾಥ) ಸುವರ್ಣ ಚಾನೆಲ್ನಿಂದ ಒದೆಸಿಕೊಂಡು ಹೊರ ಬಿದ್ದಿದ್ದಾನೆ. ಹೊರಗೆ ಮಾತ್ರ ಮಾನ ಉಳಿಸಿಕೊಳ್ಳಲು ನಾನು 15 ದಿವ್ಸ ರಜೆೆಯಲ್ಲಿದ್ದೇನೆ. ಏನೋ ಪರ್ಸನಲ್ ಕೆಲ್ಸ್ ಇತ್ತು ಅಂತ ಹೇಳಿಕೊಳ್ತಿದ್ದಾನೆ. ಆದರೆ ಅಸಲಿ ಕಥೆ ಅಂದ್ರೆ, ನಾಥವನ್ನು ಸುವರ್ಣದಿಂದ ಹೊರಗೆ ಕತ್ತು ಹಿಡಿದು ದಬ್ಬಲಾಗಿದೆ. ಸುವರ್ಣವನ್ನು 'ನಾಥ' ಮುಕ್ತ ಮಾಡಲಾಗಿದೆ.
ಈ ನಾಥ ಟಿವಿ9 ನಲ್ಲಿ ಹೊಲಸು ವಾಸನೆ ಮಾಡಿ ಬಂದದ್ದಲ್ಲದೆ, ಸುವರ್ಣದಲ್ಲೂ ಬರು ಬರುತ್ತಲೇ ಎಲ್ಲವನ್ನೂ ನಾಥಮಯ ಮಾಡಲು ಹೊರಟಿದ್ದ. ಬಂದ ತಕ್ಷಣ ಎಚ್.ಆರ್.ರಂಗನಾಥನ ನಂತರ ನಾನೇ ಎಂದು ಪೋಜು ಕೊಡತೊಡಗಿದ್ದ. ತನ್ನ ಜತೆಗಾರ, ತನಗಿಂತ ಚನ್ನಾಗಿ ಆಂಕರಿಂಗ್ ಮಾಡಬಲ್ಲ ಹಮೀದ್ಗೆ ಫಿಟ್ಟಿಂಗ್ ಇಡಲು ಮುಂದಾಗಿದ್ದ. ಅದಕ್ಕೆ ಆತ ಬಳಸಿಕೊಂಡದ್ದು ತನ್ನ ಬ್ರಾಹ್ಮಣತ್ವವನ್ನು! ನಾನು ಬ್ರಾಹ್ಮಣ. ನೀನೂ ಬ್ರಾಹ್ಮಣ. ಬೇರೆ ಜಾತಿಯ ಹಮೀದ್ನನ್ನು ಏಕೆ ಬೆಳೆಸಬೇಕು? ಎಂದು ಹಮೀದ್ ನನ್ನು ಎಷ್ಟಾಗುತ್ತೋ, ಅಷ್ಟು ಮೂಲೆಗುಂಪು ಮಾಡತೊಡಗಿದ್ದ. ಹಮೀದ್ ಇದರಿಂದ ಎಷ್ಟು ಬೇಸರಗೊಂಡಿದ್ದನೆಂದರೆ, ಸುವರ್ಣ ಬಿಟ್ಟು ಹೋಗಲು ಮಾನಸಿಕವಾಗಿ ಸಜ್ಜಾಗಿ ಬಿಟ್ಟಿದ್ದ. ಹಮೀದ್ ಆಪ್ತ ವಲಯದಲ್ಲಿ ಯಾವ ರೀತಿ ತನ್ನನ್ನು ಮೂಲೆಗುಂಪು ಮಾಡುವಲ್ಲಿ ನಾಥದ ಪಾತ್ರ ಇದೆ ಎಂದು ಹೇಳಿಕೊಂಡಿರುವುದು ತೀರಾ ರಹಸ್ಯವಾಗೇನೂ ಉಳಿದಿಲ್ಲ.
ಇದಾದ ನಂತರ ನಾಥದ ದೃಷ್ಠಿ ತಗುಲಿದ್ದು ಶೆಟ್ಟಿಯ ಕಡೆಗೆ. ಶೆಟ್ಟಿಯ ಜೊತೆಗೇ ಇದ್ದು ಎಷ್ಟು ಚನ್ನಾಗಿ ನಾಥ ಆತನಿಗೆ ಫಿಟ್ಟಿಂಗ್ ಇಟ್ಟನೆಂದರೆ, ಶೆಟ್ಟಿಗೆ ತನಗೆ ಫಿಟ್ಟಿಂಗ್ ಇಟ್ಟದ್ದು ನಾಥ ಎಂದು ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿ ತಲುಪಿದ್ದ. ಜೊತೆಗೇ ಇದ್ದು, ಆತನ ತಟ್ಟೆಗೇ ಕೈ ಹಾಕಿ ಉಣ್ಣುತ್ತಿದ್ದ ನಾಥ ಈಗ ಆತನಿಗೇ ಗೂಟ ಬಡಿದಿದ್ದ. ಆದ್ರೆ ನಾಥ ಮಾತ್ರ ಶೆಟ್ಟಿ ಸಿಕ್ಕಾಗಲೆಲ್ಲ, ಲೋ... ಏನೋ ನೀನು... ಹೋಗಿ ಮಾತಾಡೋ ಅವನತ್ರ (ಅಂದರೆ ಎಚ್.ಆರ್.), ಅಂತ ಫಿಟ್ಟಿಂಗ್ ಇಡ್ತಿದ್ದ. ಈಗ ನಾಥ ಔಟಾದ ನಂತರ ಎಚ್.ಆರ್.ಗೆ ನಾಥದ ಮಾತು ಕೇಳಿ ತಪ್ಪು ಮಾಡಿದೆ ಎಂದು ಅರಿವಾಗಿದೆ. ಹೀಗಾಗಿ ಶೆಟ್ಟಿಯನ್ನು ಮತ್ತೆ ಆಂಕರ್ ಸ್ಥಾನಕ್ಕೆ ತಂದು ಕೂರಿಸಿ, ನಾಥಕ್ಕೆ ಸರಿಯಾಗೇ ಬಿಸಿ ಮುಟ್ಟಿಸಿದ್ದಾರೆ.
ಹೀಗೆ ಹಮೀದ್, ಶೆಟ್ಟಿಗೆ ಫಿಟ್ಟಿಂಗ್ ಇಟ್ಟನಂತರ ನಂತರ ನಾಥ ಸುವರ್ಣಕ್ಕೆ ನಾನೇ ಚಕ್ರಾಧಿಪತಿ! ಎಂಬಂತೆ ವತರ್ಿಸತೊಡಗಿದ. ಆಗ ಆತ ಫಿಟ್ಟಿಂಗ್ ಇಡಲು ಕಣ್ಣಿಟ್ಟದ್ದೇ ಸ್ವತ: ಎಚ್.ಆರ್.ರಂಗನಾಥನ ಮೇಲೆ!
ಎಚ್.ಆರ್.ರಂಗನಾಥ ತನ್ನ ಜನಪ್ರಿಯತೆಯನ್ನೂ ಮೀರಿ ಬೆಳೆದದ್ದು, ಯಾರು ಇಲ್ಲದಿದ್ದರೂ ಚಾನೆಲ್ ನಡೆದುಕೊಂಡು ಹೋಗುವ ಮಟ್ಟಿಗೆ ಬೆಳೆಸಿದ್ದು, ನಾಥ ಇಲ್ಲದೆಯೂ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಸಾಬೀತು ಪಡಿಸಿದ್ದು ನಾಥಕ್ಕೆ ನುಂಗಲಾರದ ತುತ್ತಾಗಿತ್ತು. ಆಗಲೇ ಈ ನಾಥ ಎಚ್.ಆರ್. ಗೆ ಟಾಂಗು ಕೊಡಲು ಹಾಗೂ ತನ್ನ ಪಾಪ್ಯೂಲಾರಿಟಿ ಬೆಳೆಸಿಕೊಳ್ಳಲು ಸ್ಕೆಚ್ ಹಾಕಿಬಿಟ್ಟಿದ್ದ. ಅದಕ್ಕಾಗಿ ಟಿವಿ9ನವರು ಆರಂಭಿಸಿದ್ದ ಏಟು ಏದಿರೇಟು ಮಾದರಿಯಲ್ಲೇ ಮೆಗಾಫೈಟ್ ಆರಂಭಿಸಿದ. ಹೆಸರಿಗೆ ತಕ್ಕಂತೆ, ಎಚ್.ಆರ್. ನಡೆಸಿಕೊಡುತ್ತಿದ್ದ ಜುಗಲ್ ಬಂದಿ ಕಾರ್ಯಕ್ರಮಕ್ಕಿಂತ ತಾನು ನಡೆಸೋ ಮೆಗಾಫೈಟ್ ಹೆಚ್ಚು ಪಾಪ್ಯುಲರ್ ಆಗಲಿ ಎಂದು ಇದುವರೆಗೆ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಯಾವುದೇ ಪತ್ರಕರ್ತ ಮಾಡದಂತ ಹೀನ ಕೆಲಸಕ್ಕೆ ಈತ ಕೈಹಾಕಿದ್ದ. ಇದಕ್ಕೋಸ್ಕರ ಬಂದ ಅತಿಥಿಗಳಿಗೆ ಹೇಳಿ ಹೇಳಿ ಜಗಳ ಮಾಡಿಸಿದ. ವೀಕ್ಷಕರಾಗಿ ಗಲಾಟೆ ಮಾಡುವವರನ್ನು ಕರೆದ. ಪ್ರತಿ ಕಾರ್ಯಕ್ರಮದಲ್ಲೂ ಎದ್ದು ಗಲಾಟೆ ಮಾಡಿ, ಮೈಕ್ ಹಿಡಿದು ಎಳೆದಾಡುವ ಅತಿಥಿಗಳ ಮೇಲೆ ಏರಿ ಹೋಗುವಂತಹ ಒಂದು ತಂಡವನ್ನೇ ನಾಥ ಪ್ರತಿ ವಾರ ಕರೆಸುತ್ತಿದ್ದ. ಅವರೆಲ್ಲ ಹೊಡೆದಾಡುವಂತೆ ಮಾಡಿದ. ಕಾರ್ಯಕ್ರಮದ ನಡುವೆ ಪೊಲೀಸರನ್ನು ಕರೆಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಎಂಬಂತೆ ಬಿಂಬಿಸಿದ. ಏನೇ ಆದರೂ ಕಾಯ್ರಕ್ರಮಕ್ಕೆ ರೇಟಿಂಗ್ ಬರಲಿಲ್ಲ. ಒಂದೆರಡು ವಾರಕ್ಕೇ ಜನರಿಗೆ ನಾಥದ ಬಂಡವಾಳ ಅರ್ಥವಾಗಿ ಹೋಗಿತ್ತು. ಈಗ ನಾಥ ಸುವರ್ಣದಿಂದ ತೊಲಗಿದ ನಂತರ ಹಮೀದ್ ಮೆಗಾಫೈಟ್ ನಡೆಸ್ತಿದ್ದಾರೆ. ಹಮೀದ್ ಬಂದ ನಂತರ ಆಶ್ಚರ್ಯ ಎಂಬಂತೆ ಪ್ರತಿ ಎಪಿಸೋಡ್ ನಲ್ಲಿ ನಡೆಯುತ್ತಿದ್ದ ಗಲಾಟೆ, ಮಾರಾಮಾರಿಗಳು ನಿಂತುಬಿಟ್ಟಿವೆ. ನಾಥಕ್ಕಿಂತ ಚನ್ನಾಗಿ ಹಮೀದ್ ಕಾರ್ಯಕ್ರಮ ನಡೆಸಿ ಕೊಡ್ತಿದ್ದಾರೆ. ತನ್ನ ಕಾರ್ಯಕ್ರಮ ಜನ ನೋಡಲಿ ಎಂದು ನಾಥ ಎಂಥ ಹೀನ ಕಾರ್ಯಕ್ಕ ಇಳಿದು ಜಗಳ ಮಾಡಿಸುತ್ತಿದ್ದ ಎಂಬುದಕ್ಕೆ ಹಮೀದ್ ಬಂದ ನಂತರ ಗಲಾಟೆ ನಡೆಯದಿರುವುದೇ ಸಾಕ್ಷಿ.
ಇಷ್ಟಾಗುವಷ್ಟರಲ್ಲಿ ನಾಥಕ್ಕೆ ಸಿನಿಮಾ ಹುಚ್ಚು ಹಿಡಿದಿತ್ತು. ಟಿವಿ9 ನಲ್ಲಿದ್ದಾಗಲೇ 2008 ರಲ್ಲೇ ಸಿನಿಮಾದಲ್ಲಿ ಹೀರೋ ಆಗಲು ಹೊರಟಿದ್ದ ನಾಥಕ್ಕೆ ತಕ್ಕ ಹೀರೋಯಿನ್ ಸಿಗಲಿಲ್ಲ. ಬಂದವರೂ ನಾಥದ ವರ್ತನೆ ನೋಡಿ, ಈತನ ಜೊತೆ ನಟಿಸೋಲ್ಲ ಎಂದು ಹೋದರು. ಮೊದಲ ಸಿನಿಮಾ ಪ್ರಾಜೆಕ್ಟ್ ಢಮಾರ್ ಎಂದಿತ್ತು. ನಂತರ ತಾನು ಹೀರೋ ಆಗಲೇ ಬೇಕು ಎಂದು ರಸಿಕ ಶಿಖಾಮಣಿಯಂತಿದ್ದ ಒಬ್ಬ ಪ್ರೊಡ್ಯೂಸರ್ನನ್ನು ಹಿಡಿದು ತಂದು ಬೊಂಬೆಯಾಟ ಮಾಡಲು ನಿಂತ. ಹಿರೋಯಿನ್ ಮಯೂರಿ, ಯಾಕೋ ನಾಥ ಹೆಚ್ಚೆಚ್ಚು ಮೈಮುಟ್ಟಿ ಮಾತನಾಡೋದು ನೋಡಿ, ನೇರವಾಗಿ ಸೆಟ್ ನಲ್ಲಿ ಝಾಡಿಸಿದ್ದಳು. ವಿಷಯ ತಿಳಿದ ನಾಥದ ಪತ್ನಿ ರಾಣಿ ಸ್ವಲ್ಪ ದಿನ ಮಾತನ್ನೂ ಬಿಟ್ಟಿದ್ದಳಂತೆ ಎಂಬ ಸುದ್ದಿ ಮೀಡಿಯಾಲೋಕದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ನಂತರ ಅದೇನಾಯ್ತೋ. ಬೊಂಬೆಯಾಟ ನಿಂತೇ ಹೋಯ್ತು. ಈಗ ಇನ್ನೂ ಎರಡು ಸಿನಿಮಾ ಕೈಯಲ್ಲಿದೆ. ಅವೆಲ್ಲ ಗ್ಯಾರಂಟಿ ಆಗ್ತವೆ. ಅಷ್ಟರಲ್ಲಿ ನಾನೂ ಪುನೀತ್, ಉಪ್ಪಿ ಲೆವೆಲ್ ದಾಟಿ ಬೆಳೀತೀನಿ ಎಂದೆಲ್ಲ ಭೂಸಿ ಬಿಡ್ತಾ ಇದ್ದಾನೆ. ಸಿನಿಮಾ ಹಾಗೂ ನಟಿಯರ ಹುಚ್ಚಿಗೆ ಬಿದ್ದ ನಂತರ ಟಿವಿಯಲ್ಲಿ ಆಸಕ್ತಿಯೇ ಇರಲಿಲ್ಲ. ಯಾವಾಗ ಸಿನಿಮಾ ಆಗೋಲ್ಲ ಎಂದು ಗೊತ್ತಾಯ್ತೋ, ಆಗ ಮತ್ತೆ ಟಿವಿಗೆ ಬಂದ. ಈ ಬಾರಿ ನೇರ ಎಚ್.ಆರ್. ರಂಗನಾಥ್ ಗೆ ಫಿಟ್ಟಿಂಗ್ ಇಡಲು ಸ್ಕೆಚ್ ಹಾಕತೊಡಗಿದ.
ಇದಕ್ಕೋಸ್ಕರ ನಾಥ ಎಚ್.ಆರ್.ವಿರುದ್ಧ ಎಸ್.ಎಂ.ಎಸ್. ಕ್ಯಾಂಪೀನ್ ಶುರು ಮಾಡಿದ್ದ. ಮ್ಯಾನೇಜ್ ಮೆಂಟ್ಗೆ ಎಚ್.ಆರ್. ಬಗ್ಗೆ ಎಸ್ಎಂಎಸ್ ಕಳಿಸಿ ಫಿಟ್ಟಿಂಗ್ ಇಡತೊಡಗಿದ. ಎಚ್.ಆರ್. ಅತಿರೇಕದ ವರ್ತನೆಯಿಂದ ಬೇಸತ್ತಿದ್ದ ಎಲ್ಲರನ್ನೂ ಬಂಡೇಳಲು ಪ್ರೇರೇಪಿಸುತ್ತಿದ್ದ. ಎಚ್.ಆರ್. ಕಾರ್ಯಕ್ರಮ ಆರಂಭವಾದೊಡನೆ, ನಾಥದ ಮೊಬೈಲ್ನಿಂದ 'ಗ್ರೇಟ್ ಇಂಡಿಯನ್ ತಮಾಷಾ ಆರಂಭವಾಯ್ತು' ಅಂತಲೋ, ಅಥವಾ 'ಜೋಕರ್ ಆನ್ ಸ್ಕ್ರೀನ್' ಎಂದೋ ಕಿಡಿಗೇಡಿತನದ ಎಸ್ಎಂಎಸ್ಗಳು ಹೋಗತೊಡಗಿದ್ದವು. ಕಾರಣ ಏನೆಂದರೆ, ಎಚ್.ಆರ್. ರಂಗನಾಥ್, ನಾಥದ ತಲೇಲಿ ಏನೂ ಇಲ್ಲ ಎಂದು ಅರಿವಾದ ನಂತರ ಮೇಜರ್ ಡಿಬೇಟ್ಗಳಿಂದ ಆತನನ್ನು ದೂರವೇ ಇಟ್ಟಿದ್ದರು. ಹೊಸದಾಗಿ ಜಾಯಿನ್ ಆದ ಹುಡುಗಿಯರೂ ನಾಥದ ಮಟ್ಟಕ್ಕೇ ಡಿಬೇಟ್ ಮಾಡ್ತಿರೋದು ಗಮನಿಸಿ, ಎಚ್.ಆರ್. ಕೆಲ ಪೊಲಿಟಿಕಲ್ ಡಿಬೇಟ್ಗಳನ್ನು ಹುಡುಗಿಯರ ಕೈಯಲ್ಲೇ ಮಾಡಿಸಿದ್ದರು. ಇದೆಲ್ಲ ತನ್ನ ಅಸ್ತಿತ್ವಕ್ಕೆ ಸಂಚಕಾರ ತರ್ತಿದೆ ಎಂದು ಅರಿತ ನಾಥ, ಎಚ್.ಆರ್.ವಿರುದ್ಧ ಎಸ್.ಎಂ.ಎಸ್.ಗಳ ಮೂಲಕವೇ ಬಂಡೆದಿದ್ದ. ಆದ ಯಡವಟ್ಟು ಎಂದರೆ, ಯಾರೋ ಮಹಾತ್ಮರು, ನಾಥ ಕಳುಹಿಸಿದ್ದ ಎಸ್ಎಂಎಸ್ ಅನ್ನು ನೇರವಾಗಿ ಎಚ್.ಆರ್.ಗೆ ಒಯ್ದು ತೋರಿಸಿದ್ದಾರೆ. ಅವರ ಮೂಲಕ ಮ್ಯಾನೇಜ್ಮೆಂಟ್ಗೆ ಹೋಗಿ ಮುಟ್ಟಿದೆ.
ಅಷ್ಟರಲ್ಲೇ ನಾಥದ ವರ್ತನೆ ಬಗ್ಗೆ, ಏನಮ್ಮ ಹೇಗಿದ್ದಿ ಎಂದು ಹೊಸ ಲೇಡಿ ಆಂಕರ್ಗಳ ಮೈ ಕೈ ಮುಟ್ಟಿ ಮಾತನಾಡಿಸುವ ನಾಥದ ವರ್ತನೆ, ಊಟ ಮಾಡುವಾಗಿ ಲೇಡಿ ಆಂಕರ್ಗಳಿಗೆ ತುತ್ತು ತಿನ್ನಿಸುವ ತರಬೇತಿ ಕೊಡಲು ಹೋಗುತ್ತಿದ್ದದ್ದು, ಗಾಡ್ ಬ್ಲೆಸ್ ಮೈ ಚೈಲ್ಡ್ ಎನ್ನುತ್ತ ಮೈ, ತಲೆ ಮುಟ್ಟಿ ಮಾತನಾಡಿಸುತ್ತಿದ್ದರ ಬಗ್ಗೆ ಮ್ಯಾನೇಜ್ ಮೆಂಟ್ಗೆ ದೂರುಗಳು ಹೋಗಿದ್ದವು.
ಇದೆಲ್ಲದರ ನಡುವೆ ನಾಥ, ನನಗೆ ಜನಶ್ರೀಯಿಂದ ಆಫರ್ ಇದೆ. 2 ಲಕ್ಷ ಸಂಬಳ. ಕಾರು. ಫ್ಲಾಟ್. ಅಪ್ಪಾಜಿ (ರವಿ ಬೆಳಗೆರೆ) ಫೋನ್ ಮಾಡಿದ್ರು. ಯಾವಾಗ ಬೇಕಿದ್ರೂ ಬಾ ಅಂದಿದಾರೆ ಎಂದು ಕಂಡ ಕಂಡವರ ಮುಂದೆ ಹೇಳಿಕೊಂಡಿದ್ದ. ರಾಧಿಕಾ ರಾಣಿಯೂ ಸಹ ಕಂಡ ಕಂಡವರ ಬಳಿ, ಅಯ್ಯೋ, ಇವತ್ತು ಅಪ್ಪಾಜಿ ಫೋನ್ ಮಾಡಿ ಅರ್ಧಗಂಟೆ ಮಾತಾಡಿದ್ರು. ನಿವಿಬ್ರೂ ಬಂದು ಬಿಡಿ ಅಂತ ಕರ್ದಿದಾರೆ' ಎಂದೆಲ್ಲ ತನ್ನ ಆಪ್ತರ ಬಳಿ ಎಲ್ಲಾ ಹೇಳಿಕೊಂಡಿದ್ದಳು.
ಈ ಎಲ್ಲಾ ಅಂಶಗಳ ನೇರ ವರದಿ ಬ್ರೇಕಿಂಗ್ ನ್ಯೂಸ್ ರೀತಿಯಲ್ಲಿ ನೇರವಾಗಿ ಎಚ್.ಆರ್.ಗೆ 24*7 ತಲುಪುತ್ತಲೇ ಇದ್ದವು. ನಾಥ ಮಾತ ಎಚ್.ಆರ್.ವಿರುದ್ಧ ಮ್ಯಾನೇಜ್ಮೆಂಟ್ ಲೆವೆಲ್ನಲ್ಲಿ ಅಪಪ್ರಚಾರ, ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದು ನಿಲ್ಲಿಸಲೇ ಇಲ್ಲ.
ಹೀಗಾಗಿ 15 ದಿನಗಳ ಹಿಂದೆ ನಾಥವನ್ನು ಕರೆಸಿದ ಎಚ್.ಆರ್.ರಂಗನಾಥ, 'ಮಿ.ನಾಥ. ನೀವಿಲ್ಲದೆಯೂ ಸುವರ್ಣ ನಡೆಯುತ್ತದೆ. ತಿಂಗಳಿಗೆ 20 ದಿನ ರಜೆ, 1 ಲಕ್ಷ ಸಂಬಳ, ವಿದೇಶ ಪ್ರವಾಸ, ಇನ್ಸೆಂಟೀವ್ ಕೊಟ್ಟು ನಿಮ್ಮಂಥ ಖಾಲಿ ತಲೆಯವರನ್ನು ಇಟ್ಟುಕೊಳ್ಳೋ ಅವಶ್ಯಕತೆ ಇಲ್ಲ. ನೀವು ಮಾಡಿದಷ್ಟೇ ಕೆಲಸವನ್ನು 15 ಸಾವಿರ ಸಂಬಳ ಪಡೆಯೋ ಹೊಸ ಹುಡುಗಿಯರೂ ಮಾಡ್ತಿದ್ದಾರೆ. ಮೇಲಾಗಿ ನನ್ನ ಮುಂದೆ ನನ್ನನ್ನು ಇಂದ್ರ-ಚಂದ್ರ ಎಂದು ಹೊಗಳೋ ನೀನು, ನನ್ನ ಬೆನ್ನ ಹಿಂದೆ ಏನೇನು ಮಾತಾಡ್ತಿ ಎಂದು ನನಗೆ ತಿಳಿದಿದೆ. ಅದಕ್ಕೆ ಸಾಕ್ಷಿಯಾಗಿ ನನ್ನ ಬಗ್ಗೆ ನೀನು ಕಳುಹಿಸಿದ್ದ ಎಸ್ಎಂಎಸ್ ನೋಡು. ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬಹುದು' ಎಂದು ಝಾಡಿಸಿ, ರಾಜೀನಾಮೆ ಕೊಡಲು ಹೇಳಿದ್ದಾರೆ. ಯಾವಾಗ ಎಚ್.ಆರ್.ಹಾಗೆ ಹೇಳಿದರೂ, ನಾಥ ತಕ್ಷಣ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ. ತನ್ನ ರಾಣಿಯನ್ನು ಕರೆದುಕೊಂಡು ಸೀದಾ ಅನಂತ್ ಕುಮಾರ್ ಬಳಿ ಹೋಗಿ, ಕಾಲಿಗೆ ಬಿದ್ದು ಅಪ್ಪಾಜಿ, ನೀವೇ ಕಾಪಾಡಿ ಎಂದು ರಾಜೀವ್ ಚಂದ್ರಶೇಖರ್ಗೆ ಹೇಳಿಸಲು ಟ್ರೈ ಮಾಡಿದ್ದಾನೆ. ಕೊನೆಗೆ ಓರ್ವ ವಿಪ್ರೋತ್ರಮ ಸ್ವಾಮೀಜಿಯ ಮೂಲಕ ಹೇಳಿಸಲಯ ಟ್ರೈ ಮಾಡಿದೆ. ಆದರೆ ಯಾವುದೂ ಆಗಿಲ್ಲ. ಹೀಗಾಗಿ ಈಗ ನಾಥ 'ನಾನು 15 ಡೇಸ್ ಲೀವ್ ಮೇಲಿದ್ದೇನೆ. ಮ್ಯಾನೇಜ್ಮೆಂಟ್ನವರು ನೀವೇ ಮುಂದುವರೆಯಿರಿ. ವಿಶ್ವೇಶ್ವರಭಟ್ ಕನ್ನಡಪ್ರಭ ಸೇರುತ್ತಲೇ ಎಚ್.ಆರ್. ಬಿಟ್ಟು ಹೋಗ್ತಾರೆ. ನಂತರ ನೀವೇ ಚಾನೆಲ್ ಚೀಫ್. ನಿಮ್ಮನ್ನು ಬಿಟ್ಟರೆ ಯಾರಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ. ನಾನು ಎಚ್.ಆರ್.ಗೆ ಸಮನಾಗಿದ್ದರಿಂದಲೇ ಆತ ನನ್ನನ್ನು ತುಳಿಯಲು ಯತ್ನಿಸಿದ್ದಾನೆ. ನಾನು ಬಿಟ್ಟ ನಂತರ ಚಾನೆಲ್ ಮುನ್ನಡೆಸಲು ಯಾರೂ ಇರಬಾರದು ಎಂಬುದು ಎಚ್.ಆರ್.ಸ್ಕೆಚ್' ಎಂದು ಇನ್ನೂ ಕಂಡಕಂಡವರಿಗೆ ಮಂಕುಬೂದಿ ಎರಚ್ತಿದ್ದಾನೆ.
ಆದರೆ ಈಗ ಅಸಲಿ ವಿಷಯ ಏನೆಂದರೆ ನಾಥ ಮತ್ತೆ ಟಿವಿ9 ಸೇರುವ ಬಗ್ಗೆ ಟ್ರೈ ಮಾಡ್ತಿದೆ. ಇದಕ್ಕೆ ಬಳಸ್ತಿರೋದು ತನ್ನ ಹೆಂಡ್ತಿ ರಾಧಿಕಾ ರಾಣಿಯನ್ನು! ರಾಣಿಯನ್ನು ಮುಂದೆ ಬಿಟ್ಟಿರುವ ಈ ನಾಥರಾಜ, ಮಿಶ್ರಾಗೆ ಮೆಸೇಜ್ ಕಳುಹಿಸಿದ್ದಾನೆ. ಅದಕ್ಕೆ ತಕ್ಕಂತೆ ಈಗಾಗಾಲೇ ರಾಣಿ ಕಚರ್ೀಫು ಹಿಡಿದು, ಮಿಶ್ರಾ ಮುಂದೆ ಗಳಗಳನೆ ಮೂಗು ಒರೆಸುತ್ತಾ ಲೇಡಿಸ್ ಕ್ಲಬ್ ಸ್ಟೈಲ್ ನಲ್ಲಿ ಅತ್ತಿದೆ. ಅಲ್ಲದೆ ಗಿರಿಧರ ಕಜೆ ಎಂಬ ವಿಪ್ರೋತ್ತಮ ಆಯುವರ್ೇದ ವೈದ್ಯರ ಕಾರ್ಯಕ್ರಮಕ್ಕೆ ತನ್ನನ್ನು, ತನ್ನ ಗಂಡ ನಾಥವನ್ನು ಹಾಗೂ ಮಿಶ್ರಾರನ್ನು 'ಚೀಪ್' ಗೆಸ್ಟ್ ಆಗಿ ಹಾಕಿಸಿಕೊಂಡಿದ್ದ ರಾಣಿ, ಅಲ್ಲಿ ನಾಥ ಹಾಗೂ ಮಿಶ್ರಾ ಕೈ ಕುಲುಕೋ ಹಾಗೆ ಮಾಡಿದ್ದಾಳೆ. ಕಜೆಯಂತಹ ಡಾಕ್ಟರ್ ಅವರ ಆಯುವರ್ೇದ ಕಾರ್ಯಕ್ರಮ ಇವರಿಂದಾಗಿ ಪೂತರ್ಿ 'ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ' ಎಂಬಂತಾಗಿ ಹೋಗಿತ್ತು. ವೇದಿಕೆ ಮೇಲೆ ಬ್ರಾಹ್ಮಣರಲ್ಲದವರು ಒಬ್ಬರೂ ಇರಲಿಲ್ಲ. 
ಇದರ ಮುಂದುವರೆದ ಭಾಗವಾಗಿ ಈಗ ನಾಥ ದಿನಕ್ಕೆರಡು ಭಾರಿ ಟಿವಿ9 ಮುಂದೆ ಕಾರು ಹಾಕಿಕೊಂಡು ಕೂತಿರುತ್ತದೆ ಎಂಬುದು ನೋಡಿದವರ ಅಂಬೋಣ! ಕೇಳಿದರೆ ರಾಧಿಕಾ ಬಿಡಲು ಬಂದಿದ್ದೆ. ಕರೆದುಕೊಂಡು ಹೋಗಲು ಬಂದಿದ್ದೆ ಎಂಬ ಸಬೂಬು! ನೌಕರಿ ಕಳೆದುಕೊಂಡ ಮೇಲೆ ಆಲ್ ಮೋಸ್ಟ್ ಪ್ರತಿದಿನ ನಾಥದ ಆಕೃತಿ ಟಿವಿ9 ಮುಂದೆ ಕಂಡಿದೆಯಂತೆ! ಅತ್ತೂ ಕರೆದು, ಔತಣಕ್ಕೆ ಕರೆಸಿಕೊಳ್ಳುವ ಪ್ರಯತ್ನ ನಾಥದ್ದು.
ಆದರೆ ನಾಥ ಈ ಹಿಂದೆ ಇಟ್ಟಿದ್ದ ಫಿಟ್ಟಿಂಗನ್ನು ಇನ್ನೂ ಮಿಶ್ರಾ ಹಾಗೂ ನಾಥದ ಹಿಂದಿನ ಆಪ್ತ ಮಿತ್ರರಾದ ರವಿಕುಮಾರ್, ಮಾರುತಿ ಮರೆತಿಲ್ಲ. ಈ ಎಲ್ಲರೂ ನೇರವಾಗಿ ಮಿಶ್ರಾ ಅವರನ್ನು ಭೇಟಿ ಮಾಡಿ, ನಾಥದ ರೀ ಎಂಟ್ರಿಯನ್ನು ವಿರೋಧಿಸಿದ್ದಾರಂತೆ. ಆಗ ಮಿಶ್ರಾ, ರಂಗನಾಥ ಆಯೇತೋ ಹಮೆ ಕುಚ್ ಫಾಯ್ದಾ ನಹಿ. ಬದಲೇ ಮೇ ಉಸ್ಕೋ ಹೀ ಫಾಯ್ದಾ ಹೋಗಾ. ಹಮ್ ಕ್ಯಾ ಪಾಗಲ್ ಹೈ ಉಸ್ಕೋ ವಾಪಸ್ ಲೇನೇ ಕೇಲಿಯೇ' ಅಂತ ಟಿವಿ9 ಸೀನಿಯರ್ಸ್ಗೆ ಹೇಳಿದ್ದಾರೆ ಅಂತ ಸುದ್ದಿ! ಸೋ ಟಿವಿ9 ಡೋರ್ಸ್, ರಾಣಿ ಏನೇ ಟ್ರೈ ಮಾಡಿದ್ರೂ ನಾಥಕ್ಕೆ ಓಪನ್ ಆಗದಷ್ಟು ಕ್ಲೋಸ್ ಆಗೋಗಿದೆ.
ಹೀಗಾಗಿ ಅಪ್ಪಾಜಿ ರವಿ ಬೆಳೆಗರೆಯವರು ಕರೆದಿದ್ದಾರೆ ಎಂಬ ಕಹಾನಿಯನ್ನು ಈಗ ಹೆಚ್ಚು ಹೆಚ್ಚು ಹೇಳ್ತಿದ್ದಾರೆ. ರವಿ ಬೆಳೆಗೆರೆಯನ್ನು ಈ ಇಬ್ಬರೂ ಒಂದು ಸಲವಾದರೂ ಭೇಟಿ ಮಾಡಿದ್ದಾರೋ ಇಲ್ಲವೋ! ಆದರೆ ಇಬ್ಬರೂ ಆತನನ್ನು ಕರೆಯೋದೆ ಅಪ್ಪಾಜಿ ಅಂತ! ಕರ್ಣನೂ ಕಿವಿ ಮುಚ್ಚಿಕೊಳ್ಳುವಷ್ಟು ನಯಸ್ಸಾಗಿ, ಇವರಿಬ್ಬರೂ ಅಪ್ಪಾಜಿ ಅಂತಾರೆ. ಆ ಅಪ್ಪಾಜಿ ರವಿ ಬೆಳೆಗೆರೆ ಫೋನ್ ಮಾಡಿ, ಎರಡು ಲಕ್ಷ ಸಂಬಳ. ಕಾರು, ಫ್ಲಾಟ್ ಕೊಡ್ತಾರಂತೆ. ಜನಶ್ರೀ ಬಂದು ಸೇರಲು ಭಯಂಕರ ಪ್ರೇಷರ್ ಅಂತ ಹೇಳಿಕೊಂಡು ತಿರುಗ್ತಿದ್ದಾನೆ. ಆದರೆ ಅಲ್ಲಿ ನಾಥ ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲೂ ನಾಥದಿಂದ ತೊಂದರೆಗೊಳಗಾದವರು, ಈಟಿವಿ, ಟಿವಿ9ನಲ್ಲಿದ್ದಾಗ ಫಿಟ್ಟಿಂಗ್ ಇಡಿಸಿಕೊಂಡ ತಿರುಮಲೇಶ ದೇಸಾಯಿಯಂತವರು ಕೂತಿದ್ದಾರೆ. ಹೀಗಾಗಿ ಅಲ್ಲಿ ಸೇರುವುದೂ ಕಷ್ಟ. ಇನ್ನು ಈತನ ಫಿಟ್ಟಿಂಗ್ ದುಭರ್ುದ್ದಿ ಎಲ್ಲರಿಗೂ ಗೊತ್ತಿರುವುದರಿಂದ ಎಲ್ಲರೂ ಅಷ್ಟಕ್ಕಷ್ಟೇ ಎಂಬಂತಿದ್ದಾರೆ. ರವಿಬೆಳಗೆರೆಯನ್ನು ಅಪ್ಪಾಜಿ ಎಂದು ಹೇಳಿಕೊಂಡು ಓಡಾಡುತ್ತಿರುವುದೇ ಈಗ ಇವರಿಗೆ ಮುಳುವಾಗುತ್ತಿದೆ.
ಹೀಗಾಗಿ ರಂಗನಾಥನ ಕಥೆ, ಹೆಂಡ್ತಿ ರಾಧಿಕಾಗಳ ಲೇಡಿಸ್ ಕ್ಲಬ್ಗೆ ಬರೋ ಹೆಂಗಸರ ಗೋಳಿನ ಕಥೆಗಿಂತಲೂ ಕಡೆಯಾಗಿದೆ.

ಕನ್ನಡದ ಮೀಡಿಯಾದ ನಟ ಹಾಗೂ ನಟಿ ಭಯಂಕರರ ಕತೆ ಇದು.
ಇವರ ಹೆಸರು ರಂಗ'ನಾಥ' 'ಭಾರ'ಧ್ವಾಜ ಹಾಗೂ ರಾಧಿಕಾ 'ರಾಣಿ'ಯರ ಕಥೆ ಇದು.
ಅದು ಮಾಧ್ಯಮ ಲೋಕದ ದುರಂತ ಎಂದರೂ ತಪ್ಪಿಲ್ಲ. ತಲೆಯಲ್ಲಿ ಸೆಗಣಿ ಇದ್ದರೂ ಎಮ್ಮೆ ಸೆಗಣಿ ಹಾಕಿದಂತೆ ಮಾತನಾಡುತ್ತಾನೆ, ಸ್ವಲ್ಪ ಬೆಳ್ಳಗಿದ್ದಾನೆ ಎಂಬ ಅರ್ಹತೆ ಆಧರಿಸಿಯೇ ಮಾಧ್ಯಮ ಲೋಕಕ್ಕೆ ಕಾಲಿರಿಸಿದವನು ರಂಗ 'ನಾಥ' ಭಾರಧ್ವಾಜ. ಮೂಲತ: ದಾವಣಗೆರೆಯವನು. ಎಮ್ಮೆ ಸೆಗಣಿ ಹಾಕಿದಂತೆ, ಕತ್ತೆ ಉಚ್ಚೆ ಹುಯ್ದಂತೆ ಮಾತನಾಡುತ್ತಲೇ ಇರುತ್ತಾನೆ. ಅದೇ ಈತನ ಅರ್ಹತೆ. ಆದರೆ ಆ ಮಾತಿಗೆ ಆಳ, ಅಗಲಗಳು ಇರೋದಿಲ್ಲ. ಅಸಂಬಂಧ್ಧ ಪ್ರಲಾಪವಿದ್ದಂತಿರುತ್ತದೆ. ಇಂತಿಪ್ಪ ನಾಥ ಅದು ಹೇಗೋ ಏನೋ ಈಟಿವಿ ಸೇರಿ, ಆಂಕರ್ ಆಗಿಬಿಟ್ಟ. ಈಟಿವಿಯಲ್ಲಿ ಈತ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಆದರೆ ಆಗಿನ ಕಾಲಕ್ಕೆ ಈಟಿವಿಯಲ್ಲಿ ಕೆಲಸ ಎಂದರೆ ಎಂಥಹವರೂ ಬೆರಗಾಗಿ ನೋಡುತ್ತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಈತ, ಆಗಲೇ ತಾನೊಬ್ಬ ಸೂಪರ್ ಸ್ಟಾರ್ ಎಂಬ ಅಹಂಕಾರ ತಲೆಗೇರಿಸಿಕೊಂಡುಬಿಟ್ಟಿದ್ದ.
ಆದರೆ ಈತನ ಬಂಡವಾಳ, ಖಾಲಿ ತಲೆಯ ಬಗ್ಗೆ, ಹಗ್ಗ ಕಡಿಯುವ ಚಾಳಿಯ ಬಗ್ಗೆ ಈ ಟಿವಿ ಆಡಳಿತ ಮಂಡಳಿಗೆ ತಿಳಿಯಲು ಹೆಚ್ಚು ದಿನಗಳೇನೂ ಬೇಕಾಗಲಿಲ್ಲ. ಆಂಕರ್ ಗಳಾಗಲು ಬಂದಿದ್ದ ಕೆಲವರ ಜೊತೆ ನಾಥನ ಜಿಂಗಚಿಕ್ಕ ನಡೆದೇ ಇತ್ತು. ಎರಡು ಮೂರು ಹುಡುಗಿಯರಿಗೆ ಮದುವೆೆ ಆಗ್ತೀನಿ ಅಂತ ಪ್ರಾಮಿಸ್ ಮಾಡಿ, ಅವರನ್ನೆಲ್ಲ ತನಗೆ ಬೇಕಾದಂತೆ ಬಳಸಿಕೊಂಡ ಮಹಾತ್ಮನೀತ.! ಈತನ ಜೊತೆಗಿದ್ದವರು, ಎಷ್ಟು ಜನರನ್ನು ತಿಂದು ಮುಗಿಸ್ತೀಯ ಸುಮ್ಮನಿರು ಎಂದು ಗದರುತ್ತಿದ್ದರು. ಕಂಡ ಕಂಡವರಿಗೆಲ್ಲ ಮದುವೆಯಾಗುವ ಭರವಸೆ ನೀಡಿ, ಅವರ ಜೊತೆ ಗೆಳೆತನ ಬೆಳೆಸುತ್ತಿದ್ದದ್ದನ್ನು ಈತನ ಹೀನ ಚರಿತ್ರೆ ತೋರಿಸುತ್ತದೆ. ಈತನ ಈಟಿವಿ ಗೆಳೆಯರು ಇಂದಿಗೂ ಖಾಸಗಿಯಾಗಿ ಸೇರಿಕೊಂಡಾಗ ಅದನ್ನೆಲ್ಲಾ ಮೆಲುಕು ಹಾಕ್ತಾರೆ. ಬೇಕೆಂದೇ ಆ ಹುಡುಗಿಯರ ಹೆಸರುಗಳನ್ನು ಇಲ್ಲಿ ಬರೆಯಲು ಹೋಗಿಲ್ಲ.
ಆಗಲೇ ನಾಥ ಯೂಸ್ಲೆಸ್ ಆತನನ್ನು ತೆಗೆಯಬೇಕು ಎಂದು ಈಟಿವಿ ನಿರ್ಧರಿಸಿದ್ದು! ಅದನ್ನು ಕೇಳುತ್ತಿದ್ದಂತೆಯೇ ನಾಥ ಅದುರಿ ಹೋಗಿದ್ದ. ನನ್ನ ಭಾಷೆಯನ್ನು, ನಡೆತೆಯನ್ನು ಇಂಪ್ರೂ ಮಾಡಿಕೊಳ್ತೇನೆ ಎಂದು ಕಂಡ ಕಂಡವರ ಕಾಲಿಗೆ ಬಿದ್ದ. ಆದರೆ ಪರಿಸ್ಥಿತಿ ಸರಿ ಹೋಗಲಿಲ್ಲ. ಯಾವ ಕ್ಷಣದಲ್ಲಿ ಹೇಗೋ ಎನ್ನುತ್ತಾ ದಿನ ದೂಡುತ್ತಿದ್ದ.
ಅಷ್ಟರಲ್ಲೇ ನಾಥನ ಕಣ್ಣಿಗೆ ಬಿದ್ದವಳು ಬೇರೆ ಯಾರೂ ಅಲ್ಲ! ರಾಧಿಕಾ ರಾಣಿ! ಮೊದಲ ಗಂಡ ಕುಡುಕ ಎಂದು ಗ್ಲಾಮರ್ ಜಗತ್ತಿಗೆ ಬರುತ್ತಿದ್ದಂತೆಯೇ ರಾಧಿಕಾ ಮೊದಲ ಗಂಡನ ಬಗ್ಗೆ ವರಾತಾ ತೆಗೆದಿದ್ದಳು. ಥಳುಕು ಬಳಕು ಜಗತ್ತು, ಈಟಿವಿಯ ಮುಕ್ತ ವಾತಾವರಣ, ಹಳ್ಳಿಯ ಹುಡುಗಿ ರಾಧಿಕಾಳನ್ನು ಬದಲಾಯಿಸಿಬಿಟ್ಟಿತ್ತು. ಥೇಟು ಸಿನಿಮಾ ನಟಿ ರಾಧಿಕಾಳಂತೆಯೇ ಈಕೆಯ ಜೀವನವೂ ಬಡತನದಲ್ಲಿ ಆರಂಭವಾಗುತ್ತದೆ. ಅದೇ ರೀತಿ ಟರ್ನ್ ತೆಗೆದುಕೊಳ್ಳುತ್ತದೆ. ನಟಿ ರಾಧಿಕಾ ಸಿನಿಮಾ ಪ್ರವೇಶಿಸುತ್ತಲೇ ಇಲ್ಲದ ನೆಪ ತೆಗೆದು ಮೆಟ್ಟಿಲು ಹತ್ತಲು ಆಸರೆಯಾಗಿದ್ದ ಮೊದಲ ಗಂಡನನ್ನೇ ದೂರ ತಳ್ಳಿದ್ದಳು. ಇಲ್ಲಿ ಈ ರಾಧಿಕಾ ಸಹ ಅದೇ ರೀತಿ ಬದಲಾಗಿದ್ದಳು. ಈ ಟಿವಿ ಸೇರಿ ಗ್ಲಾಮರ್ ಸಿಗುತ್ತಲೇ, ಈಕೆಗೆ ಮೊದಲ ಗಂಡ ಕಳಾಹೀನ ಎನಿಸತೊಡಗಿದ್ದ. ಗಂಡ-ಹೆಂಡಿರ ನಡುವೆ ಇಲ್ಲದ ವಿಷಯಕ್ಕೆ ಜಗಳ ಆರಂಭವಾಗಿದ್ದವು. ಈಟಿವಿ ಸೇರಿ ಸ್ವಲ್ಪೇ ದಿನಕ್ಕೆ ಚಿಗಿತುಕೊಂಡ ರಾಧಿಕಾ ತನ್ನ ದಾಳ ಉರುಳಿಸತೊಡಗಿದಳು. ಮಾತಿನ ಮೂಲಕವೇ ಎಂಥವರನ್ನೂ ಅಟ್ಟಕ್ಕೆ ಏರಿಸುವ ಛಾತಿ. ಅದಕ್ಕೆ ಸ್ವತ: ರಾಮೋಜಿರಾವ್ ರಾಧಿಕಾಳನ್ನು ಹೊಗಳಿದ್ದರು. ಇಂತಹ ರಾಧಿಕಾ ಮೇಲೆ ಕಣ್ಣು ಹಾಕಿದ ರಂಗನಾಥ ಉಪಾಯವಾಗಿ ಆಕೆಗೆ ಹತ್ತಿರವಾಗತೊಡಗಿದ. ಅಷ್ಟರಲ್ಲೇ ರಾಧಿಕಾ ಮೊದಲ ಗಂಡನಿಂದ ಬೇರ್ಪಟ್ಟಿದ್ದಳು. ಇದೇ ಛಾನ್ಸ್ ಎಂದ ರಂಗನಾಥ ರಾಧಿಕಾಗೆ ಕಾಳು ಹಾಕತೊಡಗಿದ. ಆಕೆಯನ್ನು ಮದುವೆಯಾಗುವ ವಿಚಾರ ಮೊದಲೇನೂ ಇರಲಿಲ್ಲ. ಮೊದಲೇ ಬ್ರಾಹ್ಮಣ! ಡೈವೋಸರ್ಿಯನ್ನು ಹೇಗೆ ಮದುವೆಯಾದಾನು? ಸುಮ್ಮನೇ ಟೈಂಪಾಸ್ಗೆ ಎಂದು ಕಾಳು ಹಾಕ ತೊಡಗಿದ್ದ. ಆದರೆ ರಾಧಿಕಾಗೆ ಆಪ್ತರಾದ ಸ್ನೇಹಿತರ ಬಳಗ ಅಲ್ಲೇ ಇತ್ತು. ಅವರೆಲ್ಲ ರಾಧಿಕಾ ಡೈವೋಸರ್ಿ ಎಂದು ಅನುಕಂಪ ತೋರುತ್ತಿದ್ದರು. ಯಾವಾಗ ನಾಥ ವಕ್ರಗಣ್ಣು ಬೀರಿದ್ದನೋ, ಆಗ ಈಟಿವಿ ಸ್ನೇಹಿತರೆಲ್ಲ ಸೇರಿ, 'ಮಗನೇ ಮುಚ್ಕಂಡು ಆಕೀನ್ನ ಮದುವಿಯಾಗು. ಇಲ್ದಿದ್ರೆ ಅಷ್ಟೇ!' ಎಂದು ಕೈ ಎತ್ತಿದ್ದರು. ಅಷ್ಟರಲ್ಲೇ ನಾಥನಿಗೆ ದೊಡ್ಡ ಜ್ಞಾನೋದಯವಾಗಿತ್ತು! ಸ್ವತ: ರಾಮೋಜಿರಾವ್ ರಾಧಿಕಾಳನ್ನು ಹೊಗಳಿದ್ದಾರೆ. ಈಕೆಯ ಕೈ ಹಿಡಿದರೆ ನನಗೆ ಎಂದಿಗೂ ತೋಂದರೆಯಿಲ್ಲ ಎಂದು ಸ್ನೆಚ್ ಹಾಕಿದವನೇ ರಾಧಿಕಾಳ ಕೈ ಹಿಡಿದೇ ಬಿಟ್ಟ! ಆ ಮೂಲಕ ನಾಥ ತನ್ನ ಹೊಸ ಹೆಂಡ್ತಿ ರಾಧಿಕಾಳ ಸೆರಗಿನಲ್ಲಿ ಅವಿತು ತನ್ನ ನೌಕರಿ ಉಳಿಸಿಕೊಂಡಿದ್ದ.
ಅಷ್ಟರಲ್ಲೇ ಟಿವಿ9 ಆರಂಭವಾಗಿ, ಇಬ್ಬರೂ ಟಿವಿ9ಗೆ ವಲಸೆ ಬಂದರು. ಎಲೆಕ್ಟ್ರಾನಿಕ್ ಮೀಡಿಯಾದ ವರಸೆಗಳನ್ನು ಕಲಿತಿದ್ದ ರಾಧಿಕಾ, ರಂಗನಾಥ, ಒಳ್ಳೆ ಬಂಟಿ ಬಬ್ಲಿ ಜೋಡಿಯಂತಾಗಿ ಹೋಗಿದ್ದರು. ಟಿವಿ9ಗೆ ಇವರು ಮಾಡಿದ ಕಾರ್ಯಕ್ರಮಗಳು ರೇಟಿಂಗ್ ತಂದು ಕೊಟ್ಟದ್ದು ಅಷ್ಟ್ರಲ್ಲೇ ಇದೆ! ಆದರೆ ಇವರಿಬ್ಬರೂ ತಮ್ಮ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಗಮನ ಹರಿಸಿದರು. ಮೊದಲೇ ಹೊಸ ಚಾನೆಲ್! ಅನೇಕ ಅತಿಥಿಗಳನ್ನು ಕರೆಸಬೇಕಿತ್ತು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಕನರ್ಾಟಕದ ಬಹುತೇಕ ಗಣ್ಯರ ಸಂಪರ್ಕ ಬೆಳೆಸಿಕೊಂಡರು. ನಾಥ, ಸಾಧ್ಯವಾದ ಎಲ್ಲಾ ಕಡೆ, ನಾನೇ ಟಿವಿ9 ಚೀಫ್ ಎಂದು ಹೇಳಿಕೊಂಡು ಓಡಾಡತೊಡಗಿದ. 
ಹೀಗೆ ಪ್ರಭಾವ ಬೆಳೆಸಿಕೊಂಡ ಈ ಜೋಡಿ, ನಂತರ ಅಕ್ಷರಷ: ಹುಚ್ಚಾಟಗಳಿಗೆ ಇಳಿದುಬಿಟ್ಟಿತ್ತು! ಕನರ್ಾಟಕದ ನಂ.1 ಕಪಲ್ ಎಂಬ ಭ್ರಮೆಗೆ ಬಿದ್ದು ಬಿಟ್ಟಿತ್ತು. ತಮ್ಮ ಕೆಲಸ ಸಾಧನೆಗಾಗಿ, ದಾರಿಯ ಭಿಕ್ಷುಕನಿಗೂ ಈ ಬಂಟಿ ಬಬ್ಲಿ ಜೋಡಿ ಅಪ್ಪಾಜಿ ಅಮ್ಮಾಜಿ ಎಂದು ಕರೆಯಲೂ ಹೇಸುತ್ತಿರಲಿಲ್ಲ. ಇವರ ಅಪ್ಪಾಜಿ, ಅಮ್ಮಾಜಿಗಳ ಪಟ್ಟಿಯನ್ನೊಮ್ಮೆ ನೋಡಿ! ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ, ಹಾಯ್ ಬೆಂಗಳೂರಿನ ರವಿ ಬೆಳಗೆರೆ, ಸಿಎಂ. ಬಿಎಸ್.ಯಡಿಯೂರಪ್ಪ, ಜ್ಯೋತಿಷಿ ಸಚ್ಚಿದಾನಂದ ಬಾಬು ಹಾಗೂ ಅವರ ಪತ್ನಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ. ಮೈನಿಂಗ್ ಮಾಫಿಯಾದ ಜನಾರ್ಧನ ರೆಡ್ಡಿ, ಮೈಸೂರಿನ ಶ್ರೀಕಂಠದತ್ತ ಒಡೆಯರ್ ಹಾಗೂ ಅವರ ಪತ್ನಿ, ದಿವಂಗತ ವಿಷ್ಣುವರ್ಧನ್ ಹಾಗೂ ಭಾರತಿ! ಇವರನ್ನೆಲ್ಲಾ ಈ ಬಂಟಿ ಬಬ್ಲಿ ಕರೆಯೋದೆ ಅಪ್ಪಾಜಿ, ಅಮ್ಮ ಅಂತ.
ದಸರಾ ಸಂದರ್ಭದಲ್ಲಿ ಎರಡು ಬಾರಿ ಮೈಸೂರಿಗೆ ತೆರಳಿ ಶ್ರೀಕಂಠದತ್ತ ಒಡೆಯರ್ ರಾಜ ದಂಪತಿಗಳನ್ನು ಸಂದಶರ್ಿಸಿದ್ದೇ ಬಂತು. ನಂತರ ಎಲ್ಲೆಡೆ ಅವರನ್ನು ಅಪ್ಪಾಜಿ ಎಂದೇ ಕರೀತಾರೆ! ಅಲ್ಲಿಂದ ಇಂದಿನವರೆಗೆ ಅವರನ್ನು ಭೇಟಿ ಮಾಡದಿದ್ದರೂ, ಆ ಸಂದರ್ಶನ ಮೆಲುಕು ಹಾಕಿಕೊಂಡ ಪುಳಕಿತರಾಗುತ್ತಾರೆ. ಇನ್ನೂ ಯಾರ್ಯಾರನ್ನು ಹೀಗೆ ಕರೀತಾರೋ ಗೊತ್ತಿಲ್ಲ. ಯಾರ್ಯಾರಿಂದ ಕೆಲಸವಾಗುತ್ತದೋ, ಅವರನ್ನೆಲ್ಲಾ ಅಪ್ಪಾಜಿ ಅಂತಾನೇ ಕರೆಯೋದು! ಇಷ್ಟು ಅಪ್ಪಂದಿರಿಗೆ ಮಕ್ಕಳಾದ ಇವರೇ ಧನ್ಯರು!
ಇಂಥ ಭಲೆ ಜೋಡಿ, ಸಚಿವ ಅಶೋಕನಿಂದ ಕೆಲವರ ಟ್ರಾನ್ಸ್ ಫರ್ ಮಾಡಿಸಿ, ಹಣ ಮಾಡಿಕೊಂಡದ್ದು, ಕುಮಾರಸ್ವಾಮಿ ಸಿ.ಎಂ.ಆದಾಗ, ಯಡಿಯೂರಪ್ಪ ಸಿ.ಎಂ.ಆದಾಗ ಅವರ ಮಕ್ಕಳೇ ನಾಚುವಂತೆ ಅವರ ಕಾಲಿಗೆ ಅಪ್ಪಾಜಿ ಎಂದು ಅಡ್ಡ ಬಿದ್ದು ಕೆಲಸ ಮಾಡಿಸಿಕೊಂಡದ್ದು, ಅಪ್ಪಾಜಿ ರವಿ ಬೆಳಗೆರೆಯ ಹೆಸರು ಹೇಳುತ್ತಲೇ ತಮ್ಮ ಇಮೇಜ್ ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದದ್ದು, ಎಲ್ಲಾ ನಡೆದೇ ಇತ್ತು.
ಇಂಥಹ ಭ್ರಮೆಗಳಿಗೆ ಬಿದ್ದ ನಾಥ, ಟಿವಿ9ನಲ್ಲಿ ತನಗಿಂತ ಉನ್ನತ ಸ್ಥಾನದಲ್ಲಿದ್ದ ರವಿಕುಮಾರ್, ಮಾರುತಿ ಎಂಬುವರಿಗೆ ಟಾಂಗ್ ಕೊಡಲು ಆರಂಭಿಸಿದ್ದ. ಮೇಲ್ನೋಟಕ್ಕೆ ಆಪ್ತ ಗೆಳೆಯರಾಗಿದ್ದ ಇವರು, ಒಳಗೊಳಗೇ ಕಚ್ಚಾಡುತ್ತಿದ್ದರು. ನಾಥವಂತೂ ಈಟಿವಿಯಲ್ಲಿದ್ದಾಗಲೇ ಇವರ ವಿರುದ್ಧ ಆಪ್ತ ವಲಯದಲ್ಲಿ ಕತ್ತಿ ಮಸೆಯುತ್ತಿದ್ದ. ಪರಿಣಾಮ ರವಿಕುಮಾರ್, ರಂಗನಾಥನನ್ನು ಹಣಿಯಲು ಸ್ಕೆಚ್ ಹಾಕಲಾರಂಭಿಸಿದ್ದರು. ಅವರ ಸ್ಕೆಚ್ ಫಲ ಕೊಟ್ಟಿತ್ತು. ಇದನ್ನು ಸಹಿಸಲಾಗದೇ ರಂಗನಾಥ ಅಂತಿಮ ನಿಧರ್ಾರ ತೆಗೆದುಕೊಂಡಿದ್ದ. ಟಿವಿ9 ಬಿಟ್ಟು, ಅದನ್ನು ಬೀಳಿಸುತ್ತೇನೆ ಎಂದು ಹೇಳಿಕೊಂಡು, ಮತ್ತೊಬ್ಬ ರಂಗನಾಥನ ಕೈ ಕುಲುಕಿದ್ದ. ಅಷ್ಟರಲ್ಲೇ ಟಿವಿ9 ನಿಂದ ಹಮೀದ್, ಗೌರೀಶ್ ಸಹ ಬಿಟ್ಟು ಹೋಗಿದ್ದರು.
ಟಿವಿ9 ಬಿಟ್ಟ ನಂತರ ರಂಗನಾಥ, ರವಿಕುಮಾರ್, ಮಾರುತಿ ವಿರುದ್ಧ ಕಂಡಕಂಡಲ್ಲಿ ಮಾತನಾಡಿದ. ಅವರೇ ಎದುರಿಗೆ ಸಿಕ್ಕಾಗ ಪುಲು ಪುಲು ಮಾತನಾಡುತ್ತಿದ್ದ. ಟಿವಿ9 ಬಿಡುವಾಗ ರಂಗನಾಥ ಮತ್ತೊಂದು ಉಪಾಯ ಕೂಡಾ ಮಾಡಿದ್ದ. ಮುಂದೇನಾದರೂ ಪ್ರಾಬ್ಲಂ ಆದರೆ ಮತ್ತೆ ಟಿವಿ9ಗೆ ಬರಲು ಒಂದು ದಾರಿ ಇರಲಿ ಎಂದು ತನ್ನ ಹೆಂಡತಿ ರಾಧಿಕಾಳನ್ನು ಅಲ್ಲೇ ಬಿಟ್ಟ! ಸುವರ್ಣಕ್ಕೆ ನಾಥ ಸೇರಿಕೊಂಡಾಗ, ಅಲ್ಲಿ ಬಾಸಾಗಿದ್ದ ಎಚ್ ಆರ್ ರಂಗನಾಥ! ಎಚ್.ಆರ್. ರಂಗನಾಥನಿಗೆ ಈ ನಾಥದ ವಾಸನೆ ಇನ್ನೂ ಗೊತ್ತಿರಲಿಲ್ಲ. ಹೀಗಾಗಿ ಸೀದಾ ತಲೆ ಮೇಲೆ ಕೂರಿಸಿಕೊಂಡರು. ನಾಥ ಕಂಡಕಂಡ ಜಿಲ್ಲೆಗಳಿಗೆ ಹೋಗಿ ಟಿವಿ9 ವಿರುದ್ಧ ಭರ್ಜರಿ ಭಾಷಣ ಮಾಡಿದ್ದೇ ಮಾಡಿದ್ದು.
ಕೆಲದಿನಗಳಲ್ಲೇ ನಾಥ, ಎಚ್.ಆರ್. ರಂಗನಾಥಗೆ ತನ್ನ ಮಾತಿನ ಮೋಡಿ ಮೂಲಕ, ಅವರ ಮನೆಗೆ ಹೋಗಿ ಅವರನ್ನು ಹೊಗಳುವ ಮೂಲಕ, ಎಚ್.ಆರ್. ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡುವ ಮೂಲಕ ಮೋಡಿ ಮಾಡಿಬಿಟ್ಟಿದ್ದ. ಆರಂಭದ ಈ ನಂಟನ್ನೇ ಮುಂದಿಟ್ಟುಕೊಂಡು, ಹಮೀದ್, ಶೆಟ್ಟಿಗೆ ಫಿಟ್ಟಿಂಗ್ ಇಟ್ಟು ಎತ್ತಿ ಬೀಸಾಕಿದ್ದ. ಸುಭಾಷ್ ಹೂಗಾರ್ ಗೆ ಏಕ ವಚನದಲ್ಲೇ ಮಾತನಾಡಿಸತೊಡಗಿದ. ಎಲ್ಲರಿಗೂ ತಾನೇ ಬಾಸ್ ಎಂಬಂತೆ ಆಡತೊಡಗಿದ. ವಿಜಯಲಕ್ಷ್ಮಿಗೆ ಏನೂ ಗೊತ್ತೇ ಇಲ್ಲ ಎನ್ನುವಂತೆ ಮೀಟಿಂಗ್ನಲ್ಲಿ ಮಾತನಾಡುತ್ತಿದ್ದ. ಆಕೆಯ ಮುಖ ಟೀವೀಲಿ ಯಾರು ನೋಡ್ತಾರೆ ಎಂದು ರಿಪೋಟರ್ಿಂಗ್ ಹೋಗದಂತೆ ಮಾಡಿದ. ರವಿ ಹೆಗಡೆ, ಜೋಗಿ ಹಾಗೂ ಕನ್ನಡಪ್ರಭದಿಂದ ಬಂದ ಟೀಮ್ಗೆ ಕಿಂಚಿತ್ತೂ ಮಯರ್ಾದೆ ನೀಡುತ್ತಿರಲಿಲ್ಲ. ತನ್ನ ಮುಂದೆ ಅವರೆಲ್ಲ ತೃಣ ಸಮಾನ ಎಂಬಂತೆ ಆಡುತ್ತಿದ್ದ. ಲಕ್ಷ ರೂಪಾಯಿ ಸಂಬಳದ ಅಹಂಕಾರ! ಎಂಟೆಂಟು ಲಕ್ಷದ ಇನ್ಸೆಂಟೀವ್, ಫಾರಿನ ಟೂರ್ಗಳ ಕೊಡುಗೆ ಎಲ್ಲವೂ ನಾನು ಇತರರಿಗಿಂತ ಮೇಲು ಎನ್ನುವಂತೆ ಮಾಡಿಬಿಟ್ಟಿದ್ದವು.
ಈ ನಡುವೆ ಎಚ್.ಆರ್. ರಂಗನಾಥಗೆ, ನಾಥದ ಅಸಲಿ ವಾಸನೆ ಹೊಡೆಯಲಾರಂಭಿಸಿತ್ತು. ನಾಥ ಏನೋ ದೊಡ್ಡ ಘನಾಂದಾರಿ ಕೆಲಸ ಮಾಡುತ್ತೆ. ಸುವರ್ಣದ ವಾಸನೆ ಎಲ್ಲೆಡೆ ಪಸರಿಸುವಂತೆ ಮಾಡುತ್ತೆ ಎಂದುಕೊಂಡಿದ್ದರು. ಆದರೆ ನಾಥಕ್ಕೆ ಅದೇನೂ ಗೊತ್ತಿರಲೇ ಇಲ್ಲ, ಕೇವಲ ಎದುರು ಕುಂತವರಿಗೆ ಅಸಂಬಂಧ, ಕೀಟಲೆ, ಕಿಡಿಗೇಡಿ ಪ್ರಶ್ನೆ ಕೇಳಿ, ಅದನ್ನೇ ಸಂದರ್ಶನ, ಆಂಕರಿಂಕ್ ಎಂದುಕೊಂಡು ಗೊತ್ತಿತ್ತೆ ಹೊರ್ತು, ಒಂದು ಚಾನೆಲ್ ನಡೆಸೋದಿರಲಿ, ಪ್ಲಾನಿಂಗ್ ಮಾಡಲೂ ಬರ್ತಿರಲಿಲ್ಲ. ಅಷ್ಟರಲ್ಲೇ ಎಚ್.ಆರ್. ರಂಗನಾಥ್ಗೆ ಹಮೀದ್, ನಾಥ, ಅಕ್ಕಿಗಳ ಬಂಡವಾಳ ಗೊತ್ತಾಗಿತ್ತು. 10 ಸಾವಿರಕ್ಕೆ ಆಗುವ ಕೆಲಸಕ್ಕೆ ಇವರಿಗೆ ಲಕ್ಷ ಲಕ್ಷ ರೂಪಾಯಿ ಸಂಬಳ ಕೊಡ್ತಿದ್ದೇವಲ್ಲ ಅಂತ ಮ್ಯಾನೇಜ್ಮೆಂಟ್ಗೆ ಪಿಗ್ಗಿ ಬಿದ್ದ ಭಾವನೆ ಉಂಟಾಗಿತ್ತು. ಟಿವಿ9ಗೆ ನಾವೇ ಮುಖ್ಯಸ್ಥರು ಎಂದು ಹೇಳಿಕೊಂಡು ಇವರೆಲ್ಲ ತಮ್ಮನ್ನು ಪಿಗ್ಗಿ ಬೀಳಿಸಿದ್ದು ಅರ್ಥವಾಗುವಷ್ಟರಲ್ಲಿ ಕಾಲ ಮಿಂಚಿತ್ತು. ಲಕ್ಷ ಲಕ್ಷ ಸಂಭಾವನೆ, ಎಂಟೆಂಟು ಲಕ್ಷ ಇನ್ಸೆಂಟಿವ್, ಫಾರಿನ್ ಟೂರ್ ಎಲ್ಲಾ ನೀಡಿಯಾಗಿತ್ತು.
ಅದ್ಕೆಕ ತಕ್ಕಂತೆ ನಾಥಕ್ಕೆ ಚಾನೆಲ್ ರುಚಿಸುತ್ತಿರಲಿಲ್ಲ. ಏಕೆಂದರೆ ನಾಥಕ್ಕೆ ಅಷ್ಟರಲ್ಲೇ ಮತ್ತೊಂದು ಅಮಲು ತಲೆಗೆ ಹತ್ತಿತ್ತು! ಅದೇ ಸಿನಿಮಾ!! ಸಿನಿಮಾ ಲೋಕದಲ್ಲೂ ಮಿಂಚುವ ಜೋಡಿಯಾಗಬೇಕು ಎಂದು ಬಯಸಿದ್ದ ನಾಥ ಮತ್ತು ರಾಣಿ, ಅವಕಾಶ ಸಿಕ್ಕಾಗಲೆಲ್ಲ ಚಿತ್ರದಲ್ಲಿ ಪಾತ್ರ ಹುಡುಕಿ ಹಾಕಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಬಿಡುಗಡೆಯಾದ ವಾರೆವ್ಹಾ ಚಿತ್ರದಲ್ಲಿ ರಾಣಿ ಒಂದು ಸಣ್ಣ ಪಾತ್ರ ಮಾಡಿತ್ತು! ಆದರೆ ಚಿತ್ರ ತೋಪೆದ್ದು ಹೋಗಿತ್ತು. ಆದರೆ ಈ ಅಪಮಾನ ಸಹಿಸದ ರಾಣಿ, 'ಇಲ್ಲ ನನಗೆ ಪ್ರೊಡ್ಯೂಸರ್ ಮೇನ್ ರೋಲೆ ಕೊಡ್ತಿದ್ರು. ಜಗದೀಶ್ ಸರ್ ಅಂತು ವಿಜಯಲಕ್ಷ್ಮಿ ಮೇಡಂಗೆ ಅಯ್ಯೋ! ಈ ರಾಧಿಕಾನಾ?? ನಾನು ಬೇರೆ ಯಾರೋ ಅಂದ್ಕೊಂಡೆ. ಈ ರಾಧಿಕಾ ಆಗಿದ್ರೆ ಹೀರೋಯಿನ್ ರೋಲೆ ಕೊಡಬಹುದಿತ್ತು' ಅಂತ ಹೇಳಿದ್ರು ಅಂತೆಲ್ಲ ತನ್ನ ಆಪ್ತರ ಮುಂದೆ ಹೇಳಿಕೊಂಡು ತಿರುಗಾಡಿದ್ದು ನಗೆಪಾಟಲಿಗೆ ಈಡಾಗಿದೆ. ರಾಣಿಗೇ ಹೀರೋಯಿನ್ ಆಗೋ ಆಸೆ ಇರುವಾಗ ನಾಥನಿಗೆ ಇರೋದ್ರಲ್ಲಿ ಅಚ್ಚರಿಯೇನಿಲ್ಲ.
2008 ರಲ್ಲೇ ನಾಥ ಹೀರೋ ಆಗಿರೋ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಅದು ಆಗಲೇ ಇಲ್ಲ. ಇಂದಿಗೂ ನಾಥ ಹೀರೋ ಆಗುವ ಹಂಬಲದಲ್ಲಿ ಕಂಡ ಕಂಡವರಿಗೆ ನಾನು ಆಕ್ಟ್ ಮಾಡ್ತೀನಿ. ಬೇಕಿದ್ರೆ ಫ್ರೀ ಆಕ್ಟ್ ಮಾಡ್ತೀನಿ. ಎರಡು ಲಕ್ಷ ಸಂಭಾವನೆ ಕೂಡಾ ಕೇಳೋಲ್ಲ. ನೀವು ಫಿಲಂ ಪ್ರಡ್ಯೂಸ್ ಮಾಡಿ ಎಂದು ಗೋಗರೆಯುತ್ತಿದೆ. ಆದರೆ ನಾಥದ ಮೇಲೆ ಬಂಡವಾಳ ಹಾಕಿ ಲಾಸ್ ಮಾಡಿಕೊಳ್ಳಲು ಯಾರೂ ತಯಾರಿಲ್ಲ.
ಈ ನಡುವೆ ನೌಕರಿಗೆ ಬೇರೆ ಎಳ್ಳು ನೀರು ಬಿಟ್ಟಾಗಿದೆ. ಟಿವಿ9ನ ರವಿಕುಮಾರ್, ಮಾರುತಿಗೆ ಫಿಟ್ಟಿಂಗ್ ಇಟ್ಟದ್ದರಿಂದ ಅವರು ಹತ್ತಿರಕ್ಕೆ ಸೇರಿಸುತ್ತಿಲ್ಲ. ಆದರೂ ರಾಣಿ, ಗಂಡನನ್ನು ಮತ್ತೆ ಟಿವಿ9ಗೆ ತಂದು ಸೇರಿಸಲು ಬೇಕಾದ ಎಲ್ಲಾ ಎಫರ್ಟ್ ಹಾಕ್ತಿದೆ. ಮಾರುತಿ, ರವಿಕುಮಾರ್ ಸಹವಾಸವೇ ಬೇಡ ಎಂದು ನೇರ ಮಿಶ್ರಾ ಹತ್ತಿರವವೇ ವ್ಯವಹಾರ ಕುದುರಿಸುವ ಪ್ರಯತ್ನ ನಡೆಯುತ್ತಿದೆ.
ಮತ್ತೊಂದೆಡೆ ಅಪ್ಪಾಜಿ ರವಿ ಬೆಳೆಗೆರೆ ಏನಾದರೂ ನೇರವಾಗಿ ಜನಾರ್ಧನ ರೆಡ್ಡಿ ಸಾಹೇಬರ ಹತ್ತಿರ ಮಾತನಾಡಿ, ನೌಕರಿ, 2 ಲಕ್ಷ ಸಂಬಳ, ಕಾರು, ಬಂಗಲೆ ಕೊಡಿಸಿದರೆ ಸರಿ. ಇಲ್ಲದಿದ್ರೆ ಟಿವಿ ಲೋಕಕ್ಕೆ ಗುಡ್ ಬೈ ಹೇಳಿ, ಯಾವುದಾದರೂ ಸಿನಿಮಾ ಅಥವಾ ನಾಟಕದಲ್ಲಿ ಸಹ ನಟನಾಗಿ, ಪಾಪ್ಯೂಲಾರಿಟಿ ಚಪಲ ತೀರಿಸಿಕೊಳ್ಳಬೇಕಾಗುತ್ತದೆ.
ಈಗ ಇನ್ನೂ ಒಂದು ಹೊಸ ವರಸೆ ಶುರುವಿಟ್ಟುಕೊಂಡಿದೆ ಈ ಜೋಡಿ. 'ಟಿ.ಎನ್.ಸೀತಾರಂ ಸರ್ ಫೋನ್ ಮಾಡಿದ್ರು. ಅಯ್ಯೋ! ಬಾರೋ ಯಾಕೆ ತಲೆಕೆಡಿಸಿಕೊಳ್ತೀಯಾ? ನಮ್ಮ ಸೀರಿಯಲ್ನಲ್ಲೇ ಛಾನ್ಸ್ ಕೊಡ್ತೀನಿ ಅಂದ್ರು. ಟಿವಿಗಿಂತ ಒಳ್ಳೆ ಕಾಸು. ಒಳ್ಳೆ ಪಾತ್ರ ಕೊಡ್ತೀನಿ ಅಂದಿದಾರೆ' ಅಂತ ಹೇಳಿಕೊಂಡು ತಿರುಗ್ತಿದೆ. ಹಾಗೇನಾದರೂ ಆದರೆ ಸೀತಾರಾಂ ಕಥೇ ಮುಕ್ತ...ಮುಕ್ತ....ಮುಕ್ತಾಯ!
ಇನ್ನು ಈ ಜೋಡಿಗೆ ಮತ್ತೊಂದು ಚಟವಿದೆ. ಯಾರಿಂದಲೋ ಕೆಲಸವಾಗುವುದಿದ್ದರೆ ಅವರನ್ನು, ಅವರ ನಡವಳಿಕೆಯನ್ನು, ವ್ಯಕ್ತಿತ್ವವನ್ನು, ಅವರ ಮನೆಯವರನ್ನು, ಅವರ ಮನೆಯ ಇಂಟೀರಿಯರ್ ಅನ್ನು, ಅವರ ಮನೆಯ ನಾಯಿಯನ್ನು, ಮಗುವನ್ನು, ಅವರ ಅಪ್ಪ ಅಮ್ಮಂದಿರನ್ನು, ಅಕ್ಕ ತಂಗಿಯರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿಬಿಡುತ್ತದೆ. ಈ ಜೋಡಿಯ ಖತರ್ನಾಕ್ ಸ್ಟ್ರಾಟಜಿ ತಿಳಿಯದವರು ಮೊದಲ ಸಲವೇನಾದರೂ ಇವರನ್ನು ಭೇಟಿ ಮಾಡಿದರೆ, ಇವರಿಗೆ ಪಿಗ್ಗಿ ಬಿದ್ದರು ಎಂದೇ ಅರ್ಥ. ಆದರೆ ಇವರ ಬಗ್ಗೆ ಗೊತ್ತಿರುವವರಾದರೆ, ಈ ಜೋಡಿಯ ಎಲ್ಲಾ ವರಸೆ ಮಾತುಗಳನ್ನು ಕೇಳಿಕೊಂಡು, ಇವರು ಹೋದ ನಂತರ ನಗಾಡಿ, ಇವರ ಬಗ್ಗೆ ಅನುಕಂಪ ವ್ಯಕ್ತ ಪಡಿಸುತ್ತಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಈ ಜೋಡಿ, ಪ್ರಭಾವಿ ಸ್ಥಾನದಲ್ಲಿರುವವರಿಗೆ ಕೇವಲ ಅಪ್ಪಾಜಿ ಎಂದು ಕರೆಯುವುದಿಲ್ಲ! ನೇರವಾಗಿ ಕಾಲಿಗೇ ಬಿದ್ದು ಬಿಡುತ್ತದೆ. ನೋಡಿದವರು ಎಂಥಾ ಸಂಸ್ಕಾರ ಅಂದುಕೋಬೇಕು. ಆದರೆ ಈ ಸಂಸ್ಕಾರ ಕೇವಲ ಆಯ್ದ ಕೆಲವರ ಮುಂದೆ ಮಾತ್ರ ಬಳಕೆಯಾಗುತ್ತದೆ. 10 ಜನ ನಿಂತಿದ್ದರೆ, ಅದರಲ್ಲಿ ಯಾರಿಂದ ತಮಗೆ ಅನುಕೂಲ! ಯಾರು ಸೆಲೆಬ್ರಿಟಿ ಎಂದು ನೋಡಿ, ಅದಕ್ಕೆ ತಕ್ಕಂತೆ ಮಾತನಾಡುತ್ತೆ. ಉಳಿದವರತ್ತ ತಿರುಗಿಯೂ ನೋಡೋಲ್ಲ. ಈ ಜೋಡಿ ಕೆಲಸ ಆಗುವುದಿದ್ದರೆ, ಅಂಥಹವರ ಹುಟ್ಟುಹಬ್ಬ, ಮದುವೆ, ಮುಂಜಿಗಳ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ತಮ್ಮದೇ ಮದುವೆ ಏನೋ ಎಂಬಂತೆ ಎಲ್ಲರೊಂದಿಗೆ ಪುಲು ಪುಲು ಮಾತನಾಡಿ, ಉಡುಗೊರೆ ನೀಡಿ, ಅವರನ್ನು ಶಾಶ್ವತವಾಗಿ ಪಠಾಯಿಸಿಬಿಡುತ್ತದೆ.
ಈ ಜೋಡಿ ಯಾವುದೇ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆದರೆ, ಅವರ ಸಂಬಂಧ ಅಷ್ಟಕ್ಕೇ ನಿಲ್ಲೋಲ್ಲ. ಬದಲಿಗೆ ಕರೆದ ಅತಿಥಿಗಳಿಂದ ಏನಾದರೂ ಲಾಭವಾಗಬೇಕಲ್ಲ! ಅದು ಆಗೋವರೆಗೂ ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತೆ. ಲೇಡಿಸ್ ಕ್ಲಬ್ಗೆ ಯಾವುದಾದರೂ ಅತಿಥಿಗಳು ಬಂದರೆ, ಮರುದಿನಕ್ಕೆ ಈ ಜೋಡಿ ಅವರ ಮನೆಗೋ, ಕ್ಲಿನಿಕ್ಗೋ ಹಾಜರ್! ಮುಂದೆ ಇವರು ರೆಫರ್ ಮಾಡುವ ಸಂಬಂಧಿಗಳಿಗೆ, ಮಿತ್ರರಿಗೆ ಫ್ರೀ ಟ್ರೀಟ್ಮೆಂಟ್! ಇಲ್ಲದಿದ್ದರೆ ಅವರು ಮತ್ತೊಮ್ಮೆ ಈ ಜೋಡಿ ಕರೆದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವೇ ಇಲ್ಲ. ಲೇಡಿಸ್ ಕ್ಲಬ್ ಶುರುವಾದಾಗಿನಿಂದ, ಈ ನಮ್ಮ ರಾಣಿ, ನಾನು ನಿಮ್ಮ ಮನೆ ಹುಡುಗಿ ರಾಧಿಕಾ ಎಂದು ಲೇಡಿಸ್ ಕ್ಲಬ್ ನಲ್ಲಿ ಮೈಗ್ರೇನ್ ಬಗ್ಗೆ, ಸಂತಾನ ಸಮಸ್ಯೆ ನಿವಾರಣೆ ಬಗ್ಗೆ ಅದೆಷ್ಟು ಪ್ರೋಗ್ರಾಂ ಮಾಡಿದ್ದಾಳೋ! ಲೇಡಿಸ್ ಕ್ಲಬ್ ನೋಡಿ, ಈ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಅಂತಾರೆ ರಾಣಿಯವರು. ಆದರೆ ಈ ದೇಶದ ದುರಂತ ಅಂದ್ರೆ, ಸ್ವತ: ರಾಣಿಗೆ ತನ್ನ ಗಂಡ ನಾಥಕ್ಕಿರುವ ಮೈಗ್ರೇನ್ಗೆ ಸರಿಯಾದ ಟ್ರೀಟ್ಮೆಂಟ್ ಕೊಡಿಸಲು ಸಾಧ್ಯವಾಗಿಲ್ಲ. ಜಗತ್ತಿನ ಎಲ್ಲಾ ಮೈಗ್ರೇನ್ ಎಕ್ಸ್ಪರ್ಟ್ಗಳ ಹತ್ತಿರ ನಾಥ ಹೋಗಿ ಬಂದಿದೆ. ಆದರೆ ಯಾರಿಂದಲೂ ಟ್ರೀಟ್ಮೆಂಟ್ ಕೊಡಲು ಸಾಧ್ಯವಾಗಿಲ್ಲ. ಆದರೆ ವರ್ಷಕ್ಕೊಂದಿಷ್ಟು ಬಾರಿ, ಈ ಜೋಡಿ ಮೈಗ್ರೇನ್ ವೈದ್ಯರನ್ನು ಕರೆದು, ಅವರಿಂದ ಪರಿಹಾರವನ್ನು ವೀಕ್ಷಕರಿಗೆ ಕೊಡಿಸುತ್ತೆ.
ಆರೋಗ್ಯದ ಬಗ್ಗೆ ಪ್ರೋಗ್ರಾಂ ಮಾಡಿಕೊಡುವ ಈ ರಾಣಿಗೆ ಇರುವಷ್ಟು ಆರೋಗ್ಯದ ಸಮಸ್ಯೆಗಳು ಇನ್ನೂ ಯಾರಿಗೂ ಇಲ್ಲ. ಗಂಡನಿಗೆ ಮೈಗ್ರೇನ್. ಶೀತ. ತಲೆನೋವು. ಬೆನ್ನುನೋವು. ತನಗೆ ಹಾಮರ್ೋನ್ ಸಮಸ್ಯೆ. ಹೆವಿವೇಟ್ ಸಮಸ್ಯೆ! ಸಂತಾನ ಸಮಸ್ಯೆ. ರಾಣಿಯ ತೂಕದ ವ್ಯಕ್ತಿತ್ವದ ಬಗ್ಗೆ 2 ವರ್ಷದ ಹಿಂದೆ ವಾರೆಂಟ್ ಮುಖ್ಯಸ್ಥ ರಾಘವೇಂದ್ರ ತಮಾಷೆ ಮಾಡಿದ್ದ. ಅದನ್ಜು ಹಾಸ್ಯವಾಗಿ ಸ್ವೀಕರಿಸದೆ, ನಾಥ ಮತ್ತು ರಾಣಿ ಇಬ್ಬರೂ ಮಿಶ್ರಾ ಎದುರು ಕುಳಿತು ಗಳಗಳನೆ ಅತ್ತಿದ್ದರು. ರಾಜ್ಯದ ಸೆಲೆಬ್ರಿಟಿಗಳಾಗಿರುವ ನಮಗೆ ಇಂತಹ ತಮಾಷೆ ಮಾಡಿದರೆ ಹೇಗೆ? ಅವನನ್ನು ಕೆಲಸದಿಂದ ತೆಗೆಯಿರಿ ಎಂದು ಒತ್ತಾಯ ಹೇರಿದ್ದರು. ಈ ಜೋಡಿಯ ನಾಟಕದ ಬಗ್ಗೆ ಅರಿತಿದ್ದ ಮಿಶ್ರಾ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದೇ ಜೋಡಿಯ ಇನ್ನಷ್ಟು ವರೆಸೆಗಳ ಬಗ್ಗೆ ಆಗ ಗರ್ವ ಎಂಬ ಪತ್ರಿಕೆಯಲ್ಲಿ ವರದಿಯಾದಾಗ, ಅದನ್ನು ಬರೆಸಿದ್ದು ರಾಘವೇಂದ್ರನೇ ಎಂದು ಮತ್ತೆ ಈ ಜೋಡಿ ಜಗಳ ತೆಗೆದಿತ್ತು.
ಇನ್ನೂ ಈ ಭಲೇ ಜೋಡಿ, ಯಾವುದೇ ಪ್ರವಾಸಿ ತಾಣಕ್ಕೆ ಹೋಗಲಿ, ಮೊದಲೇ ಅಲ್ಲಿನ ಮುಖ್ಯಸ್ಥರಿಗೆ ತಿಳಿಸಿ, ತಮಗೆ ವಿವಿಐಪಿ ಟ್ರೀಟ್ಮೆಂಟ್, ಸಾಮಾನ್ಯರ ಜನರ ನಡುವೆ ಸ್ಪೆಷಲ್ ದರ್ಶನ ಸಿಗೋ ಹಾಗೆ ನೋಡ್ಕೋತಾರೆ. ವರದಿಗಾರರ ಮೂಲಕ ಹೇಳಿಸಿ, ಏನೇನೋ ತಂತ್ರಗಳನ್ನು ಬಳಸಿ, ಆಯಾ ಸ್ಥಳಗಳ ಮುಖ್ಯಸ್ಥರನ್ನು ಭೇಟಿಯಾಗಿ ಬರೋ ಹಾಗೆ ಮಾಡಿಕೋತಾರೆ. ಧರ್ಮಸ್ಥಳಕ್ಕೆ, ತಿರುಪತಿಗೆ, ಕುಕ್ಕೆ ಸುಬ್ರಹ್ಮಣ್ಯಕ್ಕೆ, ಮಂತ್ರಾಲಯಕ್ಕೆ ಹೋದಂತ ಸಂದರ್ಭದಲ್ಲಿ, ಅಲ್ಲಿನ ಅಫಿಶಿಯಲ್ ಗೆಸ್ಟ್ಗಳ ರೀತಿ ಹೋಗಿ ಬರ್ತಾರೆ. ಧರ್ಮಸ್ಥಳಕ್ಕೆ ಹೋದರೆ ದೇವರ ದರ್ಶನಕಕ್ಕೂ ಹೆಚ್ಚಿನ ಮಹತ್ವ ಇವರು ಕೊಡೋದು ವಿರೇಂದ್ರ ಹೆಗ್ಗಡೆಯವರ ಭೇಟಿಗೆ. ಅಲ್ಲಿಗೆ ಹೋದಾಗೆಲ್ಲ ಅವರನ್ನು ಭೇಟಿಯಾಗಲೇ ಬೇಕು! ದೇವರ ಮುಂದೆಯೂ ತಮ್ಮ ಸಂಪರ್ಕ ಪ್ರದರ್ಶನ ಮಾಡದಿದ್ದರೆ ಇವರಿಗೆ ನಿದ್ದೆಯೇ ಬರೋಲ್ಲ. ಇದೊಂಥರಾ ವಿವಿಐಪಿ ಸಿಂಡ್ರೋಮ್.
ಈ ಜೋಡಿಯ ಮತ್ತೊಂದು ದುರಂತ ಅಂದ್ರೆ, ತಮ್ಮನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಬುದ್ದಿವಂತರಿಲ್ಲ ಅನ್ನೋದು! ನಾಥ, ತಾನು ಜಗತ್ತಿನ ಸರ್ವಶ್ರೇಷ್ಠ ಪತ್ರಕರ್ತ ಎಂದು ನಂಬಿಕೊಂಡಿದ್ದರೆ, ರಾಣಿ ತಾನು ಕನ್ನಡಿಗರ ಮನೆ ಮಗಳು. ಮುಂದಿನ ಚುನಾವಣೆಗೆ ನಿಂತ್ರೆ ಗೆಲ್ಲೋದು ಗ್ಯಾರಂಟಿ ಎಂದು ಲೆಕ್ಕಾಚಾರ ಹಾಕ್ತಿವೆ. ಹೀಗಾಗಿ ಹೊಸದಾಗಿ ಬಂದ ಪತ್ರಕರ್ತರನ್ನು ಕಂಡರೆ ಇವರಿಗೆ ಏನೋ ಅಸಡ್ಡೆ! ಇವರ ಮುಂದೆ ಬೇರೆಯವರನ್ನು ಹೊಗಳಬಾರದು. ಆದರೆ 10 ಜನರಿದ್ದಾಗ ಎದುರಿಗೆ ಬೇರೆಯವರ ಏನಾದರೂ ನ್ಯೂನ್ಯತೆ ಎತ್ತಿ ತೋರಿಸಿ, ಅವರ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಲು ಯತ್ನಿಸುವುದು ಇವರ ಹವ್ಯಾಸ. ಹೀಗಾಗಿ ಹೊಸ ಪತ್ರಕತರ್ೆಯರು ಬಂದರೆ ಅವರ ಬಗ್ಗೆ ರಾಣಿಗೆ ಅಸಡ್ಡೆ! ಆದರೆ ಈಗ ಸುವರ್ಣದ ಸುಕನ್ಯಾ ರಾಧಿಕಾಗಿಂತ ಉತ್ತಮವಾಗಿ ಲೇಡಿಸ್ ಕಾರ್ಯಕ್ರಮ ನಡೆಸಿ ಕೊಡ್ತಿರೋದು, ಇವ್ರಿಗೆ ನುಂಗಲಾರದ ತುತ್ತಾಗಿದೆ. ಅಷ್ಟೇ ಅಲ್ಲ ರಾಧಿಕಾ ರಾಣಿಗೆ ಸಹಾಯಕಿಯಾಗಿದ್ದ ಹುಡುಗಿ ಭವ್ಯ ಈಗ ಸಮಯ ಟಿವಿಯಲ್ಲಿ ಲೇಡಿಸ್ ಕಾರ್ಯಕ್ರಮ ನಡೆಸಿಕೊಡ್ತಾ, ರಾಧಿಕಾಗಳಷ್ಟೇ ಫೇಮಸ್ ಆಗ್ತಿರೋದು ಈ ವಮ್ಮನ ನಿದ್ದೆ ಕೆಡಿಸಿದೆ. 'ನಾನು ಇಲ್ಲಿ ಇದ್ದಾಗ ಎಲ್ಲಾ ಕಲಿಸಿಕೊಟ್ಟೆ. ರೆಕ್ಕೆ ಬಲಿತ ಮೇಲೆ ಎಲ್ಲಾ ಹಿಂಗೇ ಉಲ್ಟಾ ಹೊಡೆಯೋದು' ಅಂತ ಭವ್ಯಬಗ್ಗೆ ಕಂಡಕಂಡಲ್ಲಿ ಕೊಂಕು ನುಡಿದಿದ್ದಾಳೆ. ಆದರೆ ಇದೇ ರೀತಿ ರೆಕ್ಕೆ ಬಲಿತ ತನ್ನ ಗಂಡ ನಾಥವೂ ಟಿವಿ9 ನವರಿಗೆ ಹೀಗೆ ಉಲ್ಟಾ ಹೊಡೆದು ಹೋದದ್ದು ಮಾತ್ರ ರಾಣಿಯ ಕಣ್ಣಿಗೆ ಕಾಣೋಲ್ಲ.
ನೀವೂ ಬೇಕಿದ್ದರೆ, ಈ ಖತರ್ ನಾಕ್ ಜೋಡಿ ಸಿಕ್ಕಾಗ, ಏನು ರಾಧಿಕಾ ಅವರೇ ನಿಮ್ಮ ಮನೆ ಎಲ್ಲಿ? ಅಂತ ಒಮ್ಮೆ ಕೇಳಿ ನೋಡಿ. ಈ ವಮ್ಮ ಅಯ್ಯೋ! ಮನೆ ಕಟ್ಟೋವಷ್ಟು ದುಡ್ಡಿದ್ದಿದ್ರೆ ನಾನ್ಯೇಕೆ ಟಿವಿ9 ನಲ್ಲಿ ಇರ್ತಿದ್ದೆ? ಆ ಅದೃಷ್ಠ ಇನ್ನೂ ಬಂದಿಲ್ಲ. ಅಷ್ಟು ಹಣ ಇಲ್ಲ' ಎಂದು ಕೇಳಿದವರ ಕಣ್ಣಲ್ಲಿ ನೀರು ಬರುವಂತೆ ಮಾತನಾಡುತ್ತಾಳೆ. ನಾಥದ್ದೂ ಇದೇ ವರಸೆ. ಇವರ ಮಾತು ಕೇಳಿದವರು, ಜೇಬಿನಲ್ಲಿದ್ದದ್ದು ತೆಗೆದುಕೊಟ್ಟು ಹೋಗಲಿ ಬಿಡಮ್ಮಾ, ಸಮಾಧಾನ ಮಾಡಿಕೋ. ಛೇ.ಪಾಪ ಎಂದು ಕಣ್ಣೀರು ವರೆಸಬೇಕು! ಅಷ್ಟು ಪಫರ್ೆಕ್ಟ್ ಅಭಿನಯ! ಮಾತಿನ ಏರಿಳಿತ! ಸಾಫ್ಟ್ನೆಸ್!!. ಆದರೆ ಅಸಲಿ ವಿಷಯ ಎಂದರೆ ಕನ್ನಡ ಮೀಡಿಯಾ ಲೋಕದ ಅತ್ಯಂತ ಲಾಭಿ ಮಾಡುವ ಹಾಗೂ ಅಷ್ಟೇ ಶ್ರೀಮಂತ ಜೋಡಿ ನಾಥ ಮತ್ತು ರಾಣಿಯದ್ದು. ಇವರು ಭರ್ಜರಿ ಬಂಗಲೆ ಕಟ್ಟಿಸಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಆದರೆ ತಾವು ನಿರ್ಗತಿಕರು ಎಂದು ತೋರಿಸಿಕೊಳ್ಳುವ ಹಂಬಲದಲ್ಲಿ ಆ ಮನೆಯ ಗೃಹ ಪ್ರವೇಶವನ್ನೂ ಮಾಡದೇ ಬಾಡಿಗೆಗೆ ಬಿಟ್ಟಿದ್ದಾರೆ. ಸುಮ್ಮನೇ ಯಾಕೆ ತೋರಿಸಿಕೊಳ್ಳಬೇಕು ಎಂಬ ನಿಲುವು ಈ ಜೋಡಿಯದ್ದು. ಇನ್ನು ಹಿಂದೆ ಯಾರ್ಯಾರು ಸಿ.ಎಂ. ಆಗಿದ್ದಾಗ ಏನೇನು ಕೆಲಸ ಮಾಡಿಸಿಕೊಂಡಿದ್ದಾರೆ? ಯಾರ್ಯಾರ ಬಳಿ ಏನೇನು ಕೆಲಸ ಮಾಡಿಸಿಕೊಂಡಿದ್ದಾರೆ? ಎಲ್ಲೆಲ್ಲಿ ತಮ್ಮ ಪ್ರಭಾವ ಬಳಸಿದ್ದಾರೆ? ಬರೆದರೆ, ಎಚ್.ಆರ್. ಹಾಗೂ ಅಪ್ಪಾಜಿ ರವಿ ಬೆಳಗೆರೆ ಯಂಥವರೇ ತಲೆ ತಿರುಗಿ ಬೀಳೋದು ಗ್ಯಾರಂಟಿ.
ಇಂಥಾ ನಾಥಕ್ಕೆ ಈಗ ಗೇಟ್ ಪಾಸ್ ಸಿಕ್ಕಿದೆ. ಫಿಟ್ಟಿಂಗ್ ಇಡಲು ಹೋಗಿ ತಾನೇ ಫಿಟ್ಟಿಂಗ್ ಇಡಿಸಿಕೊಂಡಿದೆ. ಹೊಸ ಚಾನೆಲ್ಗಳ ಗೇಟ್ ಇನ್ನೂ ತೆರೆದಿಲ್ಲ. ರಾಣಿ ಕಂಗಾಲಾಗಿದೆ. ಇವರಿಬ್ಬರೂ ತಮ್ಮ ಸೆಲೆಬ್ರಿಟಿ ಸ್ಟೇಟಸ್ ಬಿಟ್ಟು ಕೆಳಗಿಳಿದು, ಇತರರಿಗೆ ಫಿಟ್ಟಿಂಗ್ ಇಟ್ಟು ತಾವು ದೊಡ್ಡವರು ಎನ್ನಿಸಿಕೊಳ್ಳುವುದನ್ನು ಬಿಟ್ಟು, ಕಂಡ ಕಂಡವರಿಗೆ ಅಪ್ಪಾಜಿ, ಅಮ್ಮಾಜಿ ಎಂದು ಉಲಿಯೋದನ್ನು, ನುಲಿಯೋದನ್ನು ಬಿಟ್ಟು, ಹಿಂದೊಂದು ಮುಂದೊಂದು ಮಾತನಾಡೋದು ಬಿಟ್ಟು, ಎದುರಿಗೆ ಸಿಕ್ಕಾಗ ಹೊಗಳೋದು, ಇಲ್ಲದಾಗ ಅವರ ಬಗ್ಗೆ ಬೈಯೋದು ಮಾಡುವುದನ್ನು ಬಿಡದಿದ್ದರೆ, ಈ ಜೋಡಿ ಅಷ್ಟೇ ಬೇಗ ಮಯರ್ಾದೆ ಕಳೆದುಕೊಂಡು, ಮೂಲೆಗುಂಪಾಗುವುದರಲ್ಲಿ ಸಂಶಯವಿಲ್ಲ.
ಜನ ಹೊಗಳೋದು ಇವರನ್ನ ಮೆಚ್ಚಿ ಅಲ್ಲ. ಇವರಿಬ್ಬರು ಇರುವ ಸ್ಥಾನ ನೋಡಿ ಅನ್ನೋ ಕಾಮನ್ ಸೆನ್ಸ್ ಈ ಜೋಡಿಗಿಲ್ಲದಿರುವುದು ವಿಪಯರ್ಾಸ.