Tuesday, February 15, 2011

ಎಚ್.ಆರ್.ರಂಗನಾಥ ಮತ್ತು ಕುಮಾರಸ್ವಾಮಿ ಸಮಯ ಕೊಂಡ್ರಾ?

ಸಮಯ ಫಾರ್ ಸೇಲ್ ಅನ್ನೋ ಸುದ್ದಿ ಕಳೆದ 4 ತಿಂಗಳಿನಿಂದಲೂ ಮೀಡಿಯಾ ಲೋಕದಲ್ಲಿ ಹರಿದಾಡ್ತಾ ಇತ್ತು. ಎಲ್ಲಾ ರಾಜಕಾರಿಣಿಗಳ ಹೆಸರು ಇದ್ರಲ್ಲಿ ಕೇಳಿ ಬಂದು, ಅವರು ಖರೀದಿ ಮಾಡಿದ್ದಾರೆ. ಇವರು ಖರೀದಿ ಮಾಡಿದ್ದಾರೆ ಎಂಬಂತೆಲ್ಲಾ ಸುದ್ದಿಗಳು ಹರಿದಾಡಿದ್ವು. ಸಂತೋಷ್ ಲಾಡ್, ಅನಿಲ್ ಲಾಡ್, ಖೇಣಿ, ಬಿ.ವೈ.ರಾಘವೇಂದ್ರ, ವಿಜಯೇಂದ್ರ, ವಿಆರ್ ಎಲ್ ಹೀಗೆ ಬಹುತೇಕರ ಹೆಸರುಗಳು ಹಾದು ಹೋದವು. ಈಗ ಮತ್ತೊಂದು ಹೆಸರು ಕೇಳಿ ಬರ್ತಿದೆ. ಆ ಹೆಸರೇ ಎಚ್.ಆರ್.ರಂಗನಾಥ್.
ಎಚ್.ಆರ್.ರಂಗನಾಥ ಸಮಯ ಟಿವಿ ಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಹೆಚ್ಚು ಪುಷ್ಠಿ ಪಡೆಯುತ್ತಿದೆ. ಕೆಲವರ ಪ್ರಕಾರ ಈಗಾಗಲೇ ಎಚ್.ಆರ್.ರಂಗನಾಥ್ ಸುಮಾರು 30 ಕೋಟಿಗೆ ವ್ಯವಹಾರ ಕುದುರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಸ್ವತ: ಎಚ್.ಡಿ.ಕುಮಾರಸ್ವಾಮಿ ಇದಕ್ಕೆ ಕೈಹಾಕಿದ್ದಾರೆ. ಅವರಿಗೂ 24 ಗಂಟೆ ಸುದ್ದಿ ವಾಹಿನಿ ಮಾಡಬೇಕು ಎಂಬ ಆಸೆ ಇತ್ತು. ಈಗ ಸಮಯದ ಮೂಲಕ ಅದನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಆದರೆ ರಾಜಕಾರಿಣಿಯ ಚಾನೆಲ್ ಅಂದರೆ ಅದಕ್ಕೆ ಜನರು ಬೆಲೆ ನೀಡುವುದಿಲ್ಲ. ಈಗಾಗಲೇ ಕಸ್ತೂರಿ ಚಾನೆಲ್ ಹಣೆ ಬರಹ ನೋಡಿ ಆಗಿದೆ. ಹೀಗಾಗಿ ತೆರೆಯ ಹಿಂದೆ ತಾವಿದ್ದು, ತೆರೆಯ ಮುಂದೆ ಪತ್ರಕರ್ತರನ್ನೆ ಬಿಟ್ಟರೆ ಹೇಗೆ ಎಂಬ ಚಿಂತನೆಯಲ್ಲಿದ್ದಾರೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವುದು ಎಚ್.ಆರ್.ರಂಗನಾಥ್ ಅವರನ್ನ. ಈಗಾಗಲೇ ದುಬೈ ಮೂಲದ ಉದ್ಯಮಿಯೊಬ್ಬರು ಇದಕ್ಕೆ ಬೇಕಾದಷ್ಟು ಹಣ ನೀಡಲು ಮುಂದೆ ಬಂದಿದ್ದಾರೆ. ರಂಗನಾಥ ಸಹ ಸ್ವತ: ಹಣ ನೀಡಿ, ತಾವೂ ಮಾಲಿಕರಾಗುತ್ತಿದ್ದಾರೆ ಎಂಬ ಸುದ್ದಿಗಳಿವೆ. ಇನ್ನು ಕೆಲ ಮೂಲಗಳ ಪ್ರಕಾರ ಪೂತರ್ಿ ಹಣ ರಂಗನಾಥೇ ನೀಡುತ್ತಿದ್ದಾರೆ.
ಇದರ ಪ್ರಕಾರ ಈಗಾಗಲೇ ಡಾಲರ್ಸ್ ಕಾಲನಿಯ ರಂಗನಾಥ್ ಮನೆಯಲ್ಲಿ ಒಂದು ವಾರದ ಹಿಂದಷ್ಟೇ ಕುಮಾರಸ್ವಾಮಿ ಹಾಗೂ ರಂಗನಾಥ್ ಕುಳಿತು ಇದರ ಬಗ್ಗೆ ಚಚರ್ೆ ನಡೆಸಿದಸ್ದಾರೆ. ಇದಾದ ನಂತರ ಎರಡು ದಿನಗಳ ಹಿಂದೆ ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ ಹಾಗೂ ರಂಗನಾಥ ಸಹ ಚಚರ್ಿಸಿದ್ದಾರೆ. ಇನ್ನೇನು ಎಲ್ಲಾ ಫೈನಲ್ ಆಗಿ ಹೋಗಿದೆ. ಕೆಲವೇ ದಿನಗಳ ಮಾತಷ್ಟೇ ಎನ್ನಲಾಗುತ್ತಿದೆ.
ಅಷ್ಟಕ್ಕೂ ಎಚ್.ಆರ್.ರಂಗನಾಥ್ ಸಮಯ ಕೊಳ್ಳಲು ಮುಂದಾಗಿದ್ದು ನಿಜವೇ ಆದಲ್ಲಿ, ಅದಕ್ಕೆ ಕಾರಣ ವಿಶ್ವೇಶ್ವರ ಭಟ್ ಎನ್ನದೇ ಬೇರೆ ವಿಧಿ ಇಲ್ಲ. ಏಕೆಂದರೆ ವಿಶ್ವೇಶ್ವರ ಭಟ್ ಬರ್ತಿದ್ದಂತೆ ಶಿವ ಸುಬ್ರಹ್ಮಣ್ಯ ಎದ್ದು ಹೋಗುವಂತೆ ತಂತ್ರ ರೂಪಿಸಿದ್ದರು. ಮೇಲಾಗಿ ತಮ್ಮ ಭಟ್ಟಂಗಿಗಳ ಮೂಲಕ ಸುವರ್ಣಕ್ಕೂ ವಿಶ್ವೇಶ್ವರ ಭಟ್ ಅವರೇ ಎಡಿಟರ್ ಇನ್ ಚೀಫ್ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ರಂಗನಾಥ್ ಯಾವುದೇ ಕಾರಣಕ್ಕೂ ಭಟ್ಟರ ಕೆಳಗೆ ಕೆಲಸ ಮಾಡಲು ಒಪ್ಪುವುದಿಲ್ಲ. ಮೇಲಾಗಿ ರಾಜೀವ್ ಚಂದ್ರಶೇಖರ್ ಜೊತೆ ಅವರ ಸಂಬಂಧವೂ ಹಳಸಿದೆ. ಹೀಗಾಗಿ ತಮ್ಮ ಹಾದಿ ನೋಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.
ಇದರ ಜೊತೆಗೆ ರವಿ ಹೆಗಡೆ ಇನ್ನೂ ಅಧಿಕೃತವಾಗಿ ಉದಯವಾಣಿ ಸಏರ್ಪಡೆಯಾಗಿಲ್ಲ. ಇದಕ್ಕೆ ಮತ್ತೊಂಧು ಕಾರಣವೂ ಇದೆ. ಕುಮ್ಮಿ ಮತ್ತು ಎಚ್.ಆರ್. ಗ್ಯಾಂಗು ಸೂಯರ್ೋದಯ ಪತ್ರಿಕೆಯನ್ನೂ ಖರೀದಿ ಮಾಡಿದೆ ಎಂಬ ಸುದ್ದಿಗಳು ಒಳಗೇ ಹರಿದಾಡ್ತಿವೆ. ಆಗ ರವಿ ಹೆಗಡೆಯವರನ್ನು ಅದಕ್ಕೆ ತಂದು ಕೂರಿಸಿಕೊಳ್ಳುವುದು ರಂಗನಾಥ್ ಉದ್ದೇಶ. ಹೀಗಾಗಿ ರವಿಹೆಗಡೆ ಉದಯವಾಣಿ ಸೇರುವ ತಮ್ಮ ನಿಧರ್ಾರವನ್ನು ಪೆಂಡಿಂಗ್ ನಲ್ಲಿ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ.
ಈ ರೀತಿ ಸಮಯ, ಸೂಯರ್ೋದಯ ಎರಡೂ ಕೈಗೆ ಸಿಕ್ಕರೆ, ತಾವೂ ಮಾಲಿಕರಾಗಿರುವುದರಿಂದ ಬೇಕಾದಂತೆ ರಾಜಕೀಯ ದಾಳಗಳನ್ನು ಉರುಳಿಸಬಹುದು ಎಂಬುದು ರಂಗನಾಥ್ ಲೆಕ್ಕಾಚಾರ. ಇದಿಷ್ಟೂ ಆದರೆ ಆಗ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭಕ್ಕೆ ಬುದ್ದಿ ಕಲಿಸಲು ಬೇಕಾದಂತ ಸೂಯರ್ೋದಯ, ಸಮಯ ತಮ್ಮ ಕೈಯಲ್ಲೇ ಇರುತ್ತವೆ ಎಂಬುದು ಯೋಜನೆ. ಹೀಗಾಘಿ ಈಗ ಎಚ್.ಆರ್.ಸುವರ್ಣದ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ತೆರೆಯ ಮರೆಯಲ್ಲೇ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ, ಯೋಜನೆ ರೂಪಿಸಿದ್ದಾರೆ.
ಆದರೆ ಇದನ್ನು ಸಾಧಿಸಲು ರಂಗನಾಥಗೆ ನಿಜಕ್ಕೂ ದೃಶ್ಯ ಮಾಧ್ಯಮ ಅರಿತ ಪಂಟರ್ಗಳು ಬೇಕು. ಅದಕ್ಕಾಗಿ ಈಗ ಅವರು ಹುಡುಕಾಟ ನಡೆಸಿದ್ದಾರೆ. ಕೆಲವರನ್ನು ಕರೆಸಿ ಮಾತನಾಡುತ್ತಿದ್ದಾರೆ ಎಂಬ ಸುದ್ದಿಗಳಿವೆ.
ರಂಗನಾಥ ಬಿಟ್ಟದ್ದೇ ಆದಲ್ಲಿ ಸುವರ್ಣವನ್ನು ತಮ್ಮ ಹಿಡಿತಕ್ಕೇ ತೆಗೆದುಕೊಳ್ಳಲು ವಿಶ್ವೇಶ್ವರ ಭಟ್ಟರು ಚಿಂತನೆ ನಡೆಸಿದ್ದಾರೆ. ಆ ಮೂಲಕ ತಮ್ಮ ಕೈಯಲ್ಲೀ ಕನ್ನಡಪ್ರಭ ಹಾಗೂ ಸುವರ್ಣ ಎಂಬ ಎರಡು ಅಸ್ತ್ರಗಳನ್ನು ಇಟ್ಟುಕೊಂಡು ಹೋರಾಟ ಆರಂಭಿಸಲು ಅವರು ಸ್ಕೆಚ್ ಹಾಕಿದ್ದಾರೆ. ಆದರೆ 10 ವರ್ಷಗಳ ಹಿಂದೆ ಎಷ್ಟೇ ವಾತರ್ೆ ಓದಿದ್ದೇನೆ ಎಂದರೂ ವಇಶ್ವೇಶ್ವರ ಭಟ್ಟರ ಗುಣ ದೃಶ್ಯ ಮಾಧ್ಯಮಕ್ಕೆ ಹೊಂದಿಕೆಯಾಗದು.  ಹೀಗಾಗಿ ಹಿಂದೇಟು ಹಾಕುತ್ತಿದ್ದಾರೆ.
ಹಾಗೇನಾದರೂ ಆದರೆ ನಿಜಕ್ಕೂ ಶೋಚನೀಯ ಸ್ಥಿತಿ ಶಶಿಧರ ಭಟ್ಟರದ್ದಾಗುತ್ತದೆ. ವರ್ಷಗಳ ಹಿಂದೆ ಇದೇ ರಂಗನಾಥ ಸುವರ್ಣಕ್ಕೆ ಬಂದಾಗ, ಶಶಿಶರ್ ಭಟ್ಟರನ್ನು ಅಲ್ಲಿಂದ ಎತ್ತಂಗಡಿ ಮಾಡಿಸಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಸಮಯ ಸೇರಿದ ಭಟ್ಟರು ಮತ್ತೆ ಕವಳ ಹಾಕಿಕೊಂಡು, ಬಣ್ಣ ಹಚ್ಚಿಕೊಂಡು ಕುಳಿತಿದ್ದಾರೆ. ಇಂಥಾ ಸಂದರ್ಭದಲ್ಲಿ ರಂಗನಾಥ, ಸಮಯಕ್ಕೆ ಒಕ್ಕರಿಸಿದರೆ ಆಗ ಶಶಿಧರ್ ಮತ್ತೆ ಔಟ್! ಹಾಗೇನಾದರೂ ಆದಲ್ಲಿ ರಂಗನಾಥ ಶಶಿಧರ ಭಟ್ಟರ ಪಾಲಿಕೆ ಶನಿಯಾಗಿ ಕಾಡುವುದರಲ್ಲಿ ಸಂಶಯವಿಲ್ಲ.
ಆದರೆ ಈ ಎಲ್ಲಾ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂದು ತಿಳಿಯಲು ನೀವು ಇನ್ನೂ ಒಂದೆರಡು ತಿಂಗಳಾದರೂ ಕಾಯಲೇಬೇಕು.
ಇನ್ನು ರಂಗ ನಾಥ ಭಾರದ್ವಾಜ್, ಈಗ ನಾವು ಬರೆದಂತೆ ಅತಂತ್ರವಾಗಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕನರ್ಾಟಕದ ಟಾಪ್ ವಿಐಪಿಗಳನ್ನೆಲ್ಲಾ ಭೇಟಿ ಮಾಡಿ, ತನ್ನ ಅಸ್ತತ್ವಿ ತೋರಿಸಿಕೊಳ್ಳಲು ಹೆಣಗಾಡುತ್ತಿದೆ. ಕರೆಯದಿದ್ದರೂ ವಿವಿಧ ಪತ್ರಿಕೆಗಳ ಸಂಪಾದಕರು, ಚಾನೆಲ್ ಮುಖ್ಯಸ್ಥರು,  ಗಣ್ಯ ವ್ಯಕಜ್ತಿಗಳ ಮೆನೆಗೆ ಹೋಗಿ ಮಾತನಾಡಿ ಬರ್ತಿದೆ ಎಂಬ ಮಾಹಿತಿ ಇದೆ. ಆದರೆ ಈಗ ಜನಶ್ರೀಯಿಂದಲೂ ನಾಥಕ್ಕೆ ಭೇಡ ಎಂದು ಹಚಾ ಅಂದಿದ್ದಾರೆ. ಹೀಗಾಘಿ ಹೋಗುವುದಿದ್ದರೆ ಸಮಯಕ್ಕೆ ಹೋಗಬೇಕು. ಆದರೆ ಅಲ್ಲಿಗೆ ಮತ್ತೆ ಎಚ್.ಆರ್.ರಂಗನಾಥ್ ವಕ್ಕರಿಸಿದರೆ? ಎಂಬ ಆತಂಕ ನಾಥದ್ದು.  ಹೀಗಾಗಿ ಈಗ ಕಂಡ ಕಂಡವರ ಮುಂದೆ, ನನಗೆ ಜನಶ್ರೀಯಿಂದ ತುಂಬಾ ಒಳ್ಳೇ ಆಫರ್ ಇದೆ. ಟಿವಿ9ನಿಂದ ಮತ್ತೆ ಆಫರ್ ಇದೆ. ಆದರೆ ಟಿವಿ9 ನಲ್ಲಿ ಸಂಬಳ ಕಡಿಮೆ. ಆನಶ್ರೀಯಲದಲಾದರೆ ಸಿಕ್ಕಾಪಟ್ಟೆ ಕೊಡಲು ಒಪ್ಪಿದ್ದಾರೆ. ನೀವು ಏನು ಸಜೆಸ್ಟ್ ಮಾಡ್ತೀರಿ ಎಂದು ಕಂಡ ಕಂಡವರನ್ನು ಕೇಳಿಕೊಂಡು ಬೀದಿ ತಿರುಗಿತದೆ. ನಾಥದ ರಾಣಿ ರಾಧಿಕಾಕೂಡಾ, ಗಂಡನನ್ನು ಟಿವಿ9 ಕರೆತರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾಳೆ. ಈ ಹುಚ್ಚಾಟ ನೋಡಿದವರೆಲ್ಲರ ಮುಂದೆ ನಾಥ ಮತ್ತು ರಾಣಿ ನಗೆಪಾಟಲಿಗೆ ಈಡಾಗಿದ್ದಾರೆ.

No comments:

Post a Comment