ಹಲೋ..ಹಲೋ..ಹಲೋಬನ್ನೀಪ್ಪ ಬನ್ರಿಯಾರಿಗಾದ್ರೂ ಆಂಕರ್ ಆಗ್ಬೇಕು ಅಂತಾ ಆಸೆ ಇದೆಯಾ? ಹಾಗಾದ್ರೆ ಸಮಯ ಟಿವಿ ಮುಂದೆ ಕ್ಯೂ ನಿಲ್ಲಿ. ಕಿತ್ತು ಹೋದೋರು, ತಲೇಲಿ ಏನೂ ಇಲ್ಲದೋರು, ಪಡಪೋಸಿಗಳು, ನೌಕರಿ ಇಲ್ಲದೋರು, ಕೆಲಸ ವಿಲ್ಲದೋರುಚೊಂಬು ಹಿಡಿಯೋರುಯಾರು ಬೇಕಿದ್ರೂ ಬನ್ನಿ... ದಯವಿಟ್ಟು ಸಮಯ ಟಿವಿಯಲ್ಲಿ ಆಂಕರ್ ಆಗ ಬನ್ನಿ...
ಹಿಂಗೆ ಊರು ತುಂಬಾ ಮೈಕ್ ಹಾಕಿಕೊಂಡು ಕೂಗೋದು ಒಂದು ಬಾಕಿ ಇದೆ. ಯಾಕಪ್ಪ ಅಂದ್ರೆ ಸಮಯ ಟಿವಿ ನೋಡಿ. ಅಲ್ಲಿ ಈಗ ದಿನಾ ತೆರೆಯ ಹಿಂದೆ ಕಸ ಹೊಡೀತಿದ್ದವರೆಲ್ಲ ಆಂಕರ್ ಗಳು ಆಗ್ತಿದ್ದಾರೆ. ಕಂಡ ಕಂಡವರನ್ನು ತಂದು ತೆರೆಯ ಮೇಲೆ ಕೂರಿಸಲಾಗ್ತಿದೆ. ಖನ್ನಢ ವನ್ನು ಶ್ಫಷ್ಟವಾಗಿ ಹುಚ್ಚಾರ ಮಾಡ್ಹಲು ಭಂಧರೆ ಸಾಕು...' ಅವರೆಲ್ಲ ಆಂಕರ್ ಗಳಾಗಿ ಬಿಡಬಹುದು. ವಿಪಯರ್ಾಸ ಎಂದರೆ ಈಗ ಇರುವ ಪವಿತ್ರ, ಶರತ್, ಮಂಜುನಾಥ್, ಹಿಂಥ ಹ್ಯಾಂಕರ್ ಘಳಿಗೆ ಸರಿಯಘಿ ಖನ್ನಢ ಹುಚ್ಛಾರ ಮಾಡ್ಹಲು ಬರುಲ್ಲ' ಆದ್ರೂ ಅವ್ರೆಲ್ಲ ಆಂಕರ್ ಗಳು. ಇಂಥಾ ಆಂಕರ್ ಗಳನ್ನು ತಂದು ಕೂರಿಸಿಕೊಂಡರೆ ಸಮಯದ ರೇಟಿಂಗ್ ಡುಬುಕು ಡಭಾರ್ ಅಂತ ಬೀಳದೆ ಇನ್ನೇನಾಗುತ್ತೆ? ಸಮಯದ ರೇಟಿಂಗ್ ಒಂದೇ ಸಮ ಕುಸಿದು ಹೋಗ್ತಿದೆ. ಪಾತಾಳ ತಲುಪಿದೆ. ಅದನ್ನು ಇನ್ನೂ ಪಾತಾಳದಿಂದ ಕೆಳಕ್ಕೆ ತಳ್ಳೋದು ಹೇಗೆ ಅಂತ ಶಶಿಧರ್ ಭಟ್ಟರು ಹಾಗೂ ಸಚಿನ್ ನಾರಾಯಣ್ ತಲೆ ಕೆರ್ಕೋತಿದಾರೆ.ನಿಜ ಹೇಳಬೇಕೆಂದ್ರೆ ಈಗ ಶಶಿಧರ ಭಟ್ಟರನ್ನು ಆಲ್ಮೋಸ್ಟ್ ಹೊರಗಟ್ಟಲು ಸಮಯ ಮ್ಯಾನೇಜ್ ಮೆಂಟ್ ತೀಮರ್ಾನಿಸಿದೆ. ಶಶಿಧರ್ ಭಟ್ಟರಿಗೆ ನಿಮ್ಮ ದಿನಗಳನ್ನು ಎಣಿಸಿಕೊಳ್ಳಿ ಎಂದು ಹೇಳಿದೆ. ಹೀಗಾಗಿ ಭಟ್ಟರು ಹೋಗೋದರೊಳಗೆ ಮುಂದೆ ಯಾರೇ ಬಂದರೂ ಅದನ್ನು ರಿಪೇರಿ ಮಾಡಲಿಕ್ಕೆ ಆಗಬಾರದು. ಯಾರು ಬಂದರೂ ಚಾನೆಲ್ ಮೇಲೆ ಎತ್ತಲಿಕ್ಕೆ ಆಗಬಾರದು. ಅಷ್ಟರ ಮಟ್ಟಿಗೆ ಕುಲಗೆಡಿಸಿ ಹೋಗಲು ಟೊಂಕ ಕಟ್ಟಿ ನಿಂತಿದ್ದಾರೆ.
ಇನ್ನು ಸಚಿನ್ ನಾರಾಯಾಣ್ಗೆ ಸಾರಾಯಿ ಮಾರಿ ಗೊತ್ತೇ ಹೊರತು, ಸುದ್ದಿಯ ಒಳ ಹೊರಗು ಗೊತ್ತಿಲ್ಲ. ದಶಕಗಳನ್ನು ಪತ್ರಿಕೋದ್ಯಮದಲ್ಲೇ ಕಳೆದಿರುವ ಶಶಿಧರ ಭಟ್ಟರಂತಹವರೇ ಸುದ್ದಿ ಎಂದರೆ ಏನು ಅಂತ ಇನ್ನು ತಲೆ ಕೆರೆದುಕೊಳ್ಳಬೇಕಾದರೆ ಇನ್ನು ಸಚಿನ್ ನಾರಾಯಣ್ ಎಂಬ ರೊಕ್ಕದ ಕುಳಕ್ಕೆ ಅರ್ಥವಾಗುವುದಾದರೂ ಹೇಗೆ? ಹೀಗಾಗಿ ಎಡವಟ್ಟಿನ ಮೇಲೆ ಎಡವಟ್ಟುಗಳು ಆಗ್ತಿವೆ. ಹಾದಿ ಬೀದಿಯಲ್ಲಿ ಹೋಗೋರನ್ನೆಲ್ಲಾ ತಂದು ಆಂಕರ್ ಮಾಡಲಾಗ್ತಿದೆ. ಎಲೆಲೆಲಾ ಎಂಥಾ ಆಂಕರ್ರುಗಳುಎಂಥಾ ಆಂಕರ್ರುಗಳು ಎಂದು ಥೇಟ್ ಡಾ.ರಾಜ್ ಸ್ಟೈಲ್ ನಲ್ಲಿ ಸಚಿನ್ ನಾರಾಯಣ್ ಸಮಯ ಮೇಲೆತ್ತಲು ಇಷ್ಟು ಸಾಕು ಎಂದು ನಗುತ್ತಿದ್ದಾನೆ. ಏಕೆಂದ್ರೆ ಆತನಿಗೆ ಆಂಕರ್ ಗಳು ಹೇಗಿರಬೇಕು ಎಂದು ಗೊತ್ತಿದ್ದರೆ ತಾನೆ!
ಇನ್ನು ಸಮಯ ಟಿವಿ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಇಲ್ಲಿರುವ ಎಂಪ್ಲಾಯಿಗಳೆಲ್ಲ ಬೂಟು ಬೂಟ್ಲೆ ಹೊಡೆದಾಡ್ತಿದ್ದಾರೆ. ಎರಡು ದಿನಗಳ ಹಿಂದೆ ವಸೂಲಿ ವೀರ ಅಲೀಂ ಖಾನ್ ಹಾಗೂ ಖಾಲಿ ತಲೆಹರಟೆ ವೀರ ಸುರೇಶ್ ನಡುವೆ ಓಪನ್ ವಾರ್ ನಡೆದು ಹೋಗಿದೆ. ನೀನು ರೊಕ್ಕ ಮಾಡಿದ್ದು ನನಗೆ ಗೊತ್ತಿಲ್ಲಾ ಎಂದು ಒಬ್ಬ ರೋಪು ಹಾಕಿದ್ರೆ, ಮತ್ತೊಬ್ಬ ನಿನ್ನ ಬಗ್ಗೆ ಶಿವಾಜಿ ನಗರ ಠಾಣೆಯಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಆಗಿರೋದು ನಂಗೆ ಗೊತ್ತಿಲ್ವಾ ಎಂದು ಮತ್ತೊಬ್ಬ ಕೂಗಿದ್ದಾನೆ. ನಿನ್ನ ಇಡೀ ಜಾತಕ ನಂಗೆ ಗೊತ್ತು ಹೋಗಲೆ ಎಂದು ಒಬ್ಬ ಅಂದರೆ ಮತ್ತೊಬ್ಬ ನೀನು ಹೆಂಡತಿ ಕೊಲೆ ಮಾಡಿರೋದು ನನಗೇನು ಗೊತ್ತಿಲ್ಲ ಅಂದುಕೊಂಡಿದ್ದೀಯಾ ಎಂದು ಕೂಗಿದ್ದಾನೆ. ಇವರ ರುದ್ರ ನರ್ತನಕ್ಕೆ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಇದನ್ನೆಲ್ಲಾ ನೋಡ್ತಾ ನೋಡ್ತಾ ಮುಸಿ ಮುಸಿ ಮಜಾ ತೆಗೆದುಕೊಂಡವರು ಮಾತ್ರ ಶಶಿಧರ ಭಟ್ಟ್ರು. ಸಚಿನ್ ನಾರಾಯಣ್ ಗೆ ಸುದ್ದಿ ಹೋದಾಗ ವಿಷಯದ ತಳೆ ಬುಡ ಅರ್ಥವಾಗದೇ ತಲೆ ಕೆರೆದುಕೊಂಡಿದ್ದಾನೆ. ಅಯ್ಯಯ್ಯಪ್ಪೋ! ಸಾರಾಯಿ ತಯಾರಿಸೋ ನೂರು ಮಲ್ಯರನ್ನು ಬೇಕಿದ್ರೆ ಮೇಂಟೇನ್ ಮಾಡಬಹುದು. ಆದರೆ ಈ ಸುದ್ದಿ ತಯಾರಿಸೋ ಪತ್ರಕರ್ತರ ಸಾವಾಸ ಬ್ಯಾಡಪ್ಪೋ ಬ್ಯಾಡ ಎಂದು ಕಂಗಾಲಾಗಿದ್ದಾನೆ. ಚಾನೆಲ್ ತೆಗೆದುಕೊಂಡ ಎರಡೇ ತಿಂಗಳಲ್ಲಿ ಹೈರಾಣಾಗಿರುವ ಸಚಿನ್, ಬೀದೀಲಿ ಹೋಗೋ ಮಾರಮ್ಮನ್ನನು ಕೂಗಿ ಮನೆಯೊಳಗೆ ಕರೆದುಕೊಂಡ ಸ್ಥಿತಿ ತಲುಪಿದ್ದಾನೆ.
ಇನ್ನು ಅಲ್ಲಿ ಬರುವ ಸುದ್ದಿಗಳೋ ದೇವರಿಗೆ ಪ್ರೀತಿ. ಎಲ್ಲವೂ ಅಧೋಗತಿ. ಇದಕ್ಕೆಲ್ಲ ತಿಲಾಂಜಲಿ ಇಡಬೇಕು ಎಂದು ನೋಡಿದರೆ ಶಶಿಧರ ಭಟ್ಟರು ಸ್ಥಾನ ಬಿಡಲು ಸಜ್ಜಾಗಿಲ್ಲ. ನಂದು ತ್ರೀ ಇಯರ್ಸ್ ಅಗ್ರಿಮೆಂಟ್ ಗೊತ್ತಾ ಎಂದು ಮ್ಯಾನೇಜ್ ಮೆಂಟ್ ಗೆ ಚುಂಗು ಇಡ್ತಿದ್ದಾರೆ. ಇನ್ನೊಬ್ಬ ಡೈರೆಕ್ಟರ್ ಶಾಂತಾ ಅವರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ, ತಮ್ಮ ಕಡೆಗೆ ಮಾಡಿಕೊಂಡಿರುವ ಭಟ್ಟರಿಗೆ ಈಗ ಶಾಂತಮ್ಮನದೇ ಶ್ರೀರಕ್ಷೆ. ಶಾಂತಮ ಬರ್ತಿದ್ದಂತೆ ನೋಡಿ..ನೀವು ಬಂದಾಗ ಇವರು ಎದ್ದು ನಿಲ್ಲಲಿಲ್ಲ. ಇವರು ರೆಸ್ಪೆಕ್ಟ್ ಕೊಡಲಿಲ್ಲ ಎಂದು ಭಟ್ಟರು ಕವಳ ಹಾಕಿಕೊಂಡು ಕಂಪ್ಲೆಂಟ್ ಕೊಡಲು ಸಜ್ಜಾಗೇ ನಿಂತಿರ್ತಾರೆ. ಆದರೆ ಈಗ ಮ್ಯಾನೇಜ್ಮೆಂಟ್ಗೂ ಭಟ್ಟರ ಕಳ್ಳಾಟಗಳು ಅರ್ಥವಾಗಿವೆ. ತನ್ನನ್ನು ತೆಗೆಯುತ್ತಾರೆ ಎಂದು ತಿಳಿಯುತ್ತಲೇ ಶಶಿಧರ ಭಟ್ಟರು ಮತ್ತೊಂದು ಅವಾಂತರಕ್ಕೆ ಕೈಹಾಕಿದ್ದರು. ಅದು ಹೇಗೋ ಸಾಯಿಬಾಬಾ ಸತ್ತಾಗ ಯಾವುದೋ ಒಂದು ಸುದ್ದಿ ಸಮಯ ಕೈಗೆ ಸಿಕ್ಕು, ಒಳ್ಳೇ ರೇಟಿಂಗ್ ಬಂದಿತ್ತು. ಆ ವಾರ ಸಮಯ ಎರಡನೇ ಸ್ಥಾನ ಪಡೆದಿತ್ತು. ಇದನ್ನೇ ತಮ್ಮ ಅತಿ ದೊಡ್ಡ ಸಾಧನೆ ಎಂದು ಸಾರಲು, ನಾನು ಒಬ್ಬ ಎಫೀಸಿಯಂಟ್ ಲೀಡರ್ರು ಎಂದು ಮಾಧ್ಯಮ ಲೋಕದ ಮೊಘುಲ್ ಎಂದು ತೋರಿಸಿಕೊಳ್ಳಲು ಭಟ್ಟರು ಮುಂದಾಗೇ ಬಿಟ್ರು. ರಾಜ್ಯದ ಎರಡನೇ ದೊಡ್ಡ ಚಾನೆಲ್ ಅಂತ ಹೇಳಿ ಪಟಾಕಿ ಸಿಡಿಸುವ, ರಾಜ್ಯದ ಜನರಿಗೆ ಧನ್ಯವಾದ ಹೇಳುವ ಪ್ರಕಟಣೆ ಹಾಕಿಯೇ ಬಿಟ್ಟರು. ಆ ದಿನ ಫುಲ್ ಶಶಿಧರ ಭಟ್ಟರದ್ದು ಜೋಶೇ ಜೋಶು! ಆದರೆ ಮರುವಾರವೇ ಸಂಭ್ರಮ ಕಿತ್ತು ಪರಾರಿಯಾಗಿತ್ತು. ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಚಾನೆಲ್ ಕುಸಿದು ಬಿದ್ದಿತ್ತು. ಆಗ ಆಫೀಸಿನಲ್ಲಿ ಭಟ್ಟರು ಕಾಣಲೇ ಇಲ್ಲ. ಪರಾರಿಯಾಗಿ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು. ಕೇಳಿದರೆ! ಛೇ ನಾನಿಲ್ಲದಾಗ ಹುಡುಗರು ಏನೇನೋ ಹಾಕಿ ರೇಟಿಂಗ್ ಬಿದ್ದು ಹೋಗಿದೆ. ನಾನು ಅಲ್ಲೇ ಇದ್ದಿದ್ರೆ ಈ ರೀತಿ ಆಗ್ತಿರಲಿಲ್ಲ ಎಂದು ಹೇಳಿಕೊಂಡು ಅದರ ಹೊಣೆಯನ್ನು ಸಾರಾ ಸಗಟಾಗಿ ಬೇರೆಯವರ ಹೆಗಲಿಗೆ ವಗರ್ಾಯಿಸಿದರು. ದಟ್ ಈಸ್ ಶಶಿಧರ್ ಭಟ್.
ಈಗ ಸಮಯ ಮ್ಯಾನೇಜ್ ಮೆಂಟ್ ಕೆಲ ತಲೆ ಹರಟೆಗಳನ್ನು ಕಿತ್ತು ಹಾಕಲು ಮುಂದಾಗಿದೆ ಎಂಬ ಸುದ್ದಿ ಸಮಯದಲ್ಲಿ ಬಲವಾಗಿ ಹರಿದಾಡ್ತಿದೆ. ಆದರೆ ಯಾವ ತಲೆಗಳು ಉರುಳ್ತವೆ ಗೊತ್ತಿಲ್ಲ. ಹೀಗಾಗಿ ಅವರ್ಯಾರೂ ಮನಸಿಟ್ಟು ಕೆಲಸ ಮಾಡ್ತಿಲ್ಲ. ಸಮಯದ ಹಣೆಬರಹ ಗೊತ್ತಿರೋರು ಅಲ್ಲಿ ಕೆಲಸ ಮಾಡಲು ಮುಂದಾಗ್ತಿಲ್ಲ. ಅದರಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಸಮಯ ಒಂದು ಸೆಂಟ್ರಲ್ ಜೈಲೇ ಸರಿ. ಏಕೆಂದರೆ ಇಲ್ಲೀಗ ಒಬ್ಬರ ಮಾತಲ್ಲ! ತ್ರೀ ಈಡಿಯಟ್ಟ್ ಮಾತು ಕೇಳಬೇಕು ಇಲ್ಲಿನ ಸಿಬ್ಬಂದಿ. ಒಂದು ಕಡೆ ಸಾರಾಯಿ ಮಾರಿಕೊಂಡು ಕೂತು ಧಿಡೀರನೇ ಮೀಡಿಯಾಗೆ ಬಂದ ಸಚಿನ್ ನಾರಾಯಣ್. ವಿದ್ಯಾ ಸಾಗರ್ ಎಂಬ ಮತ್ತೊಬ್ಬ ಚಾರ್ಟರ್ಡ್ ಅಕೌಂಟೆಂಟ್. ಹಾಗೂ ಶಾಂತಾ! ಈ ತ್ರೀ ಈಡಿಯಟ್ಸ್ಗಳ ನಡುವೆ ಕೋ ಆಡರ್ಿನೇಷನ್ ಇಲ್ಲ. ಮೂವರೂ ತಮಗೆ ತಿಳಿದ ಹಾಗೆ ಅಧಿಕಾರ ಚಲಾಯಿಸುತ್ತಾ ಕೂರ್ತಾರೆ. ಹೊತ್ತಲ್ಲದ ಹೊತ್ತಲ್ಲಿ ಬಂದು ಅದು ತೋರ್ಸ್ಸಿ, ಪ್ರೋಮೋ ಹೇಗೆ ಮಾಡಿದ್ದೀರಿ ತೋರ್ಸಿ. ಯಾವ ಸುದ್ದಿ ಹಾಕಿದ್ದೀರಿ. ಅದನ್ನು ಯಾಕೆ ಹಾಕಿದ್ದೀರಿ. ಇದನ್ನು ಯಾಕೆ ತೆಗೆದ್ರಿ. ಆಫೀಸಿಗೆ ಎಷ್ಟು ಹೊತ್ತಿಗೆ ಬಂದ್ರಿ. ನಾವು ಬಂದಾಗ ಎದ್ದು ನಿಲ್ಲಬೇಕು ಎಂಬ ಕಾಮನ್ ಸೆನ್ಸ್ ಇಲ್ಲವಾ? ನನಗೆ ಗೌರವ ಕೊಟ್ಟಿಲ್ಲ. ಹೀಗಾಗಿ ಈ ಹ್ಯಾಂಡ್ ಸರಿ ಇಲ್ಲ..ಅವರ ಸಂಬಳ ಕಟ್ ಮಾಡಿ. ಇವರದ್ದು ಅರ್ಧ ದಿನ ಸಂಬಳ ಹಿಡೀರಿ. ಅವರು ಮಾಡಿದ ತಪ್ಪಿಗೆ ನೋಟೀಸ್ ನೀಡಿ. ಏನೇ ದೂರು ಇದ್ರೂ ನನಗೇ ಡೈರೆಕ್ಟ್ ಕಂಪ್ಲೆಂಟ್ ನೀಡಿ... ಹೀಗೆ ಈ ಮೂವರು ಮಾಡುವ ಅಧ್ವಾನಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಏನೂ ಗೊತ್ತಿಲ್ಲದಿಂದ್ದರೂ ಆಫೀಸಿನ ಕಸ ಹೊಡೆಯೋದ್ರಿಂದ ಹಿಡಿದು ಸಂಬಳ ನೀಡೋವರೆಗೆ ಇವರೆಲ್ಲ ಪುಸಟ್ಟೆ ಸಲಹೆಗಳನ್ನು ಕೊಡ್ತಾನೆ ಇರ್ತಾರೆ. ಶಶಿಧರ ಭಟ್ಟರು ಚಾನೆಲ್ ಹಾಳು ಮಾಡಿದ್ದಕ್ಕೆ ಸಮನಾಗಿ ಸಚಿನ್ ನಾರಾಯಣ್, ವಿದ್ಯಾ ಸಾಗರ್, ಶಾಂತಾ ಸಮಯದ ಅವನತಿಗೆ ಕಾರಣರಾಗಿದ್ದಾರೆ. ಮಾಧ್ಯಮದಲ್ಲಿ ಮ್ಯಾನೇಜ್ ಮೆಂಟ್ ಪಾತ್ರ ಎಷ್ಟಿರಬೇಕು! ಎಷ್ಟಕ್ಕೆ ಸೀಮಿತವಾಗಿರಬೇಕು ಎಂಬ ಕಲ್ಪನೆಯೂ ಈ ಮೂವರಿಗಿಲ್ಲ. ಈ ಎಲ್ಲಾ ಅಧ್ವಾನಗಳನ್ನು ನೋಡಿ, ಸಮಯ ಸೇರಲು ಯಾರೂ ಮುಂದಾಗುತ್ತಿಲ್ಲ.
ಈಗ ಟಿವಿ9 ಶಿವಪ್ರಸಾದ್ ಸಮಯದ ಓವರ್ ಆಲ್ ಮುಖ್ಯಸ್ಥರಾಗಿ, ಸಿಇಓ ಆಗಿ ಬರ್ತಾರೆ ಎಂಬ ಸುದ್ದಿ ಇದೆ. ಸಮಯದ ಎಲ್ಲಾ ಮೀಟಿಂಗ್ ಗಳಲ್ಲಿ, ಎಲ್ಲರ ಮೊಬೈಲ್ ಗಳಲ್ಲಿ ಈಗ ಶಿವಪ್ರಸಾದ್ ಭೂತವಾಗಿ ಕಾಡ್ತಿದ್ದಾರೆ. ಕಸುಬುದಾರ ಶಿವಪ್ರಸಾದ್ ಬಂದರೆ ಅಲ್ಲಿ ಯಾರ ಆಟವೂ ನಡೆಯೋಲ್ಲ. ಎಲ್ಲರ ಪುಂಗಿ ಬಂದ್ ಆಗುತ್ತದೆ. ಆದರೆ ಮಜಾ ಇರುವುದೇ ಇಲ್ಲಿ! ಟಿವಿ9 ಮೂಲಗಳ ಪ್ರಕಾರ ಚಕ್ಕಂದರಾಜ ಶಿವಪ್ರಸಾದ್ ಸಮಯ ಸೇರಲಿಕ್ಕೆ ಸ್ವಲ್ಪವೂ ಇಂಟರೆಸ್ಟ್ ತೋರಿಸಿಲ್ಲ. ಟಿವಿ9 ಮ್ಯಾನೇಜ್ಮೆಂಟ್ ಈ ಬಗ್ಗೆ ಶಿವಪ್ರಸಾದ್ ರನ್ನು ನೀವು ಹೋಗ್ತಿದ್ದೀರಾ ಎಂದು ಅಧಿಕೃತವಾಗೇ ಕೇಳಿದೆ. ಅದಕ್ಕೆ ಶಿವಪ್ರಸಾದ್ ಈ ಹಿಂದೆ ಸುವರ್ಣ ಚೀಫ್ ಆಗಿ ಮಾಡಿದ್ರಿ. ಈಗ ಸಮಯದ ಸಿಇಓ ಮಾಡ್ತಿದ್ದೀರಿ. ಮತ್ತಾವ ಚಾನೆಲ್ ಬರುತ್ತೋ ಅದಕ್ಕೂ ಸಿಇಓ ಮಾಡಿಬಿಡಿ. ಸಮಯದ ವತಿಯಿಂದ ಯಾರೂ ಈ ಬಗ್ಗೆ ನನ್ನನ್ನು ಕೇಳೇ ಇಲ್ಲ' ಎಂದು ಹೇಳಿದ್ದಾರೆ. ಹೀಗಾಗಿ ಶಿವಪ್ರಸಾದ್ ಸಮಯಕ್ಕೆ ಬರೋ ಚಾನ್ಸೇ ಇಲ್ಲ ಎಂಬ ಮಾತುಗಳೂ ಟಿವಿ9 ನಲ್ಲೇ ಇವೆ. ಶಿವಪ್ರಸಾದ್ ಟಿವಿ9 ನಲ್ಲೇ ಚಕ್ಕಂದ ಆಡುವುದು ನೋಡೋಣ ಒಂದು ಸಣ್ಣ ಬ್ರೇಕ್ ನ ನಂತರ.
ಹೀಗಾಗಿ ಈಗ ಸಮಯ ಅನಾಥ ಶಿಶು. ಅದಕ್ಕೆ ಎಚ್ ಐ ವಿ ಪೀಡಿತ ಮಲತಾಯಿ ಅಮ್ಮನಂತಿರುವ ಶಶಿಧರ್ ಭಟ್ಟರೇ ಗತಿ. ಅದಕ್ಕೆ ಇಡೀ ವ್ಯವಸ್ಥೆಗೆ ಕುಷ್ಠರೋಗಿಗಳಿಂತಿರುವ ಸಚಿನ್ ನಾರಾಯಣ್, ವಿದ್ಯಾ ಸಾಗರ್, ಶಾಂತಾ ಇವರೇ ಬಂಧುಗಳು. ಹೀಗಾಗಿ ಈಗ ಸಮಯದಲ್ಲಿ ಮಾಡಿದ್ದೆಲ್ಲ ಬರೀ ಹಾಳು ಹಾಳು, ಜಾಳು ಜಾಳು. ರೇಟಿಂಗ್ ಒಂದು ಕಡೆಯಿಂದ ಕುಸಿದು ಹೋಗಿದೆ. ಇದು ನನ್ನ ಮಗು ಎಂದು ಅಪ್ಪಿ, ಒಪ್ಪಿಕೊಳ್ಳಲು ಸೇರಿದಂತೆ ಯಾರೂ ಮುಂದೆ ಬರುತ್ತಿಲ್ಲ.
ಹೀಗಾಗಿ ಟಿವಿ ಚಾನೆಲ್ ಅಂದ್ರೆ ಯಾವುದೋ ಫ್ಯಾಕ್ಟರಿ ನಡೆಸಿದಂತೆ ಅಲ್ಲ ಎಂಬ ಕಠು ಸತ್ಯ ಈ ಮೂವರಿಗೂ, ನಿರಾಣಿಗೂ ಅರ್ಥವಾದಂತಿದೆ. ದಿನ ಬೆಳಗಾದರೆ ಹೊಸ ಹೊಸ ಕಿರಿ ಕಿರಿ. ಸಂಭಾಳಿಸುವುದೇ ಕಷ್ಟವಾಗಿದೆ. ಸಮಯ ಮೇಲೆದ್ದರೆ ಅದೇ ಒಮದು ಪವಾಡ ಎನ್ನುವಂತಾಗಿದೆ. ಅದು ಬರಕತ್ತಾಗುವ ಸಾಧ್ಯತೆಗಳಿಲ್ಲ. ತಿಂಗಳೂ ತಿಂಗಲೂ ಕೋಟ್ಯಂತರ ಲಾಸ್ ಬೇರೆ.
ಆದ್ದರಿಂದ ಚಾನೆಲ್ ಮಾರಿಬಿಟ್ಟರೆ ಹೇಗೆ?
ಇದು ಇವರ ತಲೆಯಲ್ಲಿರೋ ಹೊಸ ವಿಚಾರ. ಬೇಕಿದ್ರೆ ಕಾದು ನೋಡಿ.