Wednesday, May 4, 2011

ಕನ್ನಡ ಮೀಡಿಯಾ ಕಣ್ಣಲ್ಲಿ ಒಸಮಾ ಹತ್ಯೆ

ಒಸಾಮಾ ಬಿನ್ ಲಾಡೆನ್ ಹತ್ಯೆ ಕನ್ನಡ ಮೀಡಿಯಾದಲ್ಲಿ ಜಬರ್ದಸ್ತಾಗಿಯೇ ಕವರ್ ಆಗಿದೆ.
ಕನ್ನಡ ದಿನ ಪತ್ರಿಕೆಗಳ ವಿಷಯಕ್ಕೆ ಬಂದರೆ ಈ ಈವೆಂಟ್ ಅನ್ನು ಸಮರ್ಥವಾಗಿ, ವಿಭಿನ್ನವಾಗಿ ಪ್ರಸ್ತುತ ಪಡಿಸಿದ್ದು ವಿಜಯ ಕರ್ನಾಟಕ. ತನ್ನ ಮಾಸ್ಟ್ ಹೆಡ್ ಗೂ ಮೇಲೆ ಒಸಾಮಾಸುರ ಸಂಹಾರ ಎಂದು ಬರೆಯುವ ಮೂಲಕ ಮುಖಪುಟದ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಒಸಾಮಾ ಸುದ್ದಿಗೆ ಪ್ರಾಮುಖ್ಯತೆ ನೀಡಿತ್ತು. ಉತ್ತಮ ಗ್ರಾಫಿಕ್ಸ್ ಮಾಡಿಸಿದ್ದರೂ, ಅದನ್ನು 7ನೇ ಪುಟದಲ್ಲಿ ಹಾಕುವ ಮೂಲಕ ಅದರ ಮಹತ್ವವನ್ನೇ ಕಡಿಮೆ ಮಾಡಿತ್ತು. ಅದನ್ನು ಮುಖಪುಟದಲ್ಲೇ ಬಳಸಿಕೊಳ್ಳುವ ಸಾಧ್ಯತೆಗಳಿದ್ದವು. ಒಳಗೆ 4 ಪುಟಗಳ ಸಮಗ್ರ ಮಾಹಿತಿಯನ್ನು ವಿಜಯ ಕರ್ನಾಟಕ ನೀಡಿತ್ತು.

ಹೊಸ ದಿಗಂತ. ಲಾಡೆನ್ ಸಂಹಾರ ಎಂಬ ಸಾಮಾನ್ಯ ಹೆಡ್ಡಿಂಗ್ ಕೊಟ್ಟಿದ್ದರೂ, ಲೇ ಓವಟ್, ಕವರೇಜ್, ವಿಷಯಗಳ ಆಯ್ಕೆ, ಎಲ್ಲದರಲ್ಲೂ ಹೊಸ ದಿಗಂತ ಮುಂದಿತ್ತು. 9/11 ಗೆ ಸರಿಯಾಗಿ, ಐತಿಹಾಸಿಕ ದಿನ 2/5 ಎಂದು ಮಾಡಿದ್ದು ಸರಿ ಇತ್ತು. ಆದರೆ ಲಾಡೆನ್ ಸಂಹಾರ ಸಾಮಾನ್ಯ ಹೆಡ್ಡಿಂಗ್ ಕೊಡುವ ಬದಲು 9/11=2/5 ಎಂದು ಮೇನ್ ಹೆಡ್ಡಿಂಗ್ ಕೊಟ್ಟಿದ್ದರೆ ಲಾಡೆನ್ ಸಾಬಿಗೆ ತುಂಬಾ ವಿಭಿನ್ನ ಹೆಡ್ಡಿಂಗ್ ಕೊಟ್ಟಂತಾಗುತ್ತಿತ್ತು.

ಕನ್ನಡ ಪ್ರಭ ಮೇಲಿನ ಯಾಕೋ ಡಲ್ ಹೊಡೆದಿತ್ತು ಎಂಬುದನ್ನು ಭಟ್ಟರು ಒಪ್ಪಿಕೊಳ್ಳಲೇಬೇಕು. ವಿಷಯಗಳ ಆಯ್ಕೆ, ವಿನ್ಯಾಸ, ಎಲ್ಲದರಲ್ಲೂ ಕನ್ನಡ ಪ್ರಭ ಸಾಕಷ್ಟು ಹಿಂದೆ ಉಳಿದಿತ್ತು. ನಿರೀಕ್ಷೆಗಳ ಭಾರದಿಂದ ಭಟ್ಟರ ಗುಂಪು ನಲುಗುತ್ತಿದೆಯಾ? ಲಾಡೆನ್ ಕಟ್ಟಿಕೊಂಡ ಸಾಮ್ರಾಜ್ಯ ನುಚ್ಚು ನೂರಾಯಿತು ಎಂಬ ಅರ್ಥದಲ್ಲಿ ಲಾ'ಡೆನ್' ನಿರ್ನಾಮ ಎಂಬ ಹೆಡ್ಡಿಂಗ್ ಕೊಟ್ಟಿತ್ತು. ಒಳಪುಟಗಳಲ್ಲಿ ಒಸರಿ ಹೋದ ಒಸಾಮಾ ಎಂದು ಲಾಡೆನ್ ಸುದ್ದಿ ಇದ್ದ ಪುಟಗಳಿಗೆ ಹೆಸರು ನೀಡಿತ್ತು. ಒಟ್ಟು ನಾಲ್ಕು ಪುಟಗಳ ಮಾಹಿತಿ ನೀಡಿದ್ದರೂ, ಯಾಕೋ ಕೊರತೆ ಇದೆ ಎಂದು ಅನ್ನಿಸದೇ ಇರಲಿಲ್ಲ. ಅಥವಾ ನಾವೇ ಕನ್ನಡಡಪ್ರಭದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡದ್ದರಿಂದ ಹೀಗಾಯ್ತೋ ಗೊತ್ತಿಲ್ಲ.

ಪ್ರಜಾವಾಣಿಯಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅಪರಾಧ. ಅದು ನಿರ್ಭಾವುಕ ಪತ್ರಿಕೆ. ಎಂಥದ್ದೇ ಮಹತ್ತರ ಬೆಳವಣಿಗೆ, ಘಟನೆ ನಡೆದರೂ ಅದು ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವುದಿಲ್ಲ. ಪಾಕ್ ನಲ್ಲಿ ಪಾತಕಿ ಲಾಡೆನ್ ಹತ್ಯೆ ಎಂದು ದಶಕಗಳ ಹಿಂದಿನ ಫಾಮ್ರ್ಯಟ್ನಲ್ಲೇ ಹೆಡ್ಡಿಂಗ್ ಕೊಟ್ಟಿತ್ತು. ಪ್ರಜಾವಾಣಿ ಬದಲಾಗದು. ಅಲ್ಲಿದ್ದವರೆಲ್ಲ ಸರಕಾರಿ ನೌಕರಿಗೆ ಸೇರಿದವರಂತೆ ಆರಾಮವಾಗಿದ್ದಾರೆ. ಅಂತಹ ನಿರ್ಜೀವ ತಂಡದಿಂದ ಹೆಚ್ಚಿನದನ್ನು ಕನ್ನಡ ಓದುಗರು ನಿರೀಕ್ಷಿಸುವುದೇ ಅಪರಾಧ.

ಉದಯವಾಣಿ ಕ್ಯಾಪ್ಟನ್ ರವಿ ಹೆಗಡೆ ಮೊದಲಿನ ಉತ್ಸಾಹ ಕಳೆದುಕೊಂಡಿರುವುದು ಎದ್ದು ಕಾಣುತ್ತಿದೆ. ಅದು ಇತ್ತೀಚೆಗೆ ಮಹತ್ತರ ಬೆಳವಣಿಗೆಗಳಾದ ಸಂದರ್ಭದಲ್ಲಿ ಸಾಬೀತಾಗುತ್ತಿದೆ. ಉದಯವಾಣಿ ಮ್ಯಾನೇಜ್ ಮೆಂಟ್ ಹಾಗೂ ರವಿ ಹೆಗಡೆ ನಡುವೆ ಅಸಮಾಧಾನದ ಹೊಗೆ ಹೊತ್ತಿಕೊಂಡಿದೆ ಎಂಬ ಸುದ್ದಿ ಹೊಸದೇನಲ್ಲ. ಆದರೆ ರವಿ ಹೆಗಡೆ ಸಂಪಾದಕ ಹುದ್ದೆ ಇಪ್ಪಿಕೊಳ್ಳುವ ಮೊದಲು ತಮ್ಮ ಇತಿಮಿತಿಗಳನ್ನು ಅರಿತುಕೊಂಡಿದ್ದರೆ ಚನ್ನಾಗಿತ್ತು. ಈ ರೀತಿ ನಿರಾಸೆಪಡುವ ಅಗತ್ಯವಿರಲಿಲ್ಲ. ಹೀಗಾಗಿ ಉದಯವಾಣಿ ಕವರೇಜ್ ಬಗ್ಗೆ ವಿಶೇಷವಾಗಿ ಹೇಳುವುದೇನೂ ಇಲ್ಲ.

ಇನ್ನು ದೃಶ್ಯ ಮಾಧ್ಯಮಕ್ಕೆ ಬಂದರೆ ಎಲ್ಲರಗಿಂತ ಉತ್ತಮವಾಗಿ ಕವರ್ ಮಾಡಿದ್ದು ಟಿವಿ9. ಇತರೆ ಕನ್ನಡ ಚಾನೆಲ್ ಗಳಿಗಿಂತ ವೇಗವಾಗಿ ಸುದ್ದಿ ಸಂಗ್ರಹ ಮಾಡಿ ಪ್ರಸಾರ ಮಾಡುತ್ತಿತ್ತು. ಟಿವಿ9 ಪ್ರಸಾರ ಮಾಡಿ, ಒಂದು ಗಂಟೆ ಕಳೆದ ಮೇಲೆ ಇತರೆ ಚಾನೆಲ್ಗಳು ಅದನ್ನು ಫಾಲೋ ಮಾಡುತ್ತಿದ್ದವು. ಗೂಗಲ್ ಅರ್ತ್ ಸಮರ್ಥವಾಗಿ ಬಳಸಿಕೊಂಡ ಟಿವಿ9 ರಾಷ್ಟ್ರೀಯ ಚಾನೆಲ್ ಗಳಿಗಿಂತ ಮೊದಲು ಪಾಕಿಸ್ತಾನದಲ್ಲಿ ಘಟನೆಗಳು ನಡೆದ ಸ್ಥಳಗಳನ್ನು ನಿಖರವಾಗಿ ತೋರಿಸುತ್ತಿತ್ತು. ಉಳಿದ ಕನ್ನಡ ಚಾನೆಲ್ಗಳು ಟಿವಿ9 ಫಾಲೋ ಮಾಡಲು  ಯತ್ನಿಸಿದರೂ, ಸಾಕಷ್ಟು ಹಿಂದುಳಿದವು. ಇಡೀ ದಿನ ಟಿವಿ9 ಒಂದಾದ ನಂತರ ಒಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ವೀಕ್ಷಕರನ್ನು ಹಿಡಿದಿಡುವ ಪ್ರಯತ್ನ ನಡೆಸಿತ್ತು. ಟಿವಿ9 ಪ್ರಯತ್ನದಲ್ಲಿ ಖಂಡಿತಾ ಯಶಸ್ಸು ಕಂಡಿದೆ. ಈಗಷ್ಟೇ ಅಲ್ಲ. ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಾಗಲೂ ಟಿವಿ9 ಎಂದೂ ಹಿಂದೆ ಬಿದ್ದಿಲ್ಲ ಎಂಬುದು ಕೇವಲ ಹೊಗಳಿಕೆಯ ಮಾತಲ್ಲ. ಆದರೆ ಟಿವಿ9 ಕೆಲ ಸುದ್ದಿಗಳನ್ನು ಟ್ರಾನ್ಸ್ ಲೇಟ್ ಮಾಡುವಾಗ ಸ್ವಲ್ಪ ಎಚ್ಚರ ವಹಿಸಬೇಕು. ಟ್ವಿಟ್ಟರ್ ಮೂಲಕ ಓರ್ವ ಪಾಕಿಸ್ತಾನಿ ಯಾವ ರೀತಿ ನಡು ರಾತ್ರಿ ಕಾರ್ಯಚರಣೆ ವಿವರಗಳನ್ನು ತನಗರಿಯದೇ ಟ್ವೀಟ್ ಮಾಡಿದ್ದ ಎಂಬ ಸುದ್ದಿಯನ್ನು ಎಷ್ಟು ಕೆಟ್ಟದಾಗಿ ಟ್ರಾನ್ಸ್ ಲೇಟ್ ಮಾಡಲಾಗಿತ್ತು ಎಂದರೆ, ಸುದ್ದಿ ಇದ್ದದ್ದೇ ಒಂದು. ಪ್ರಸಾರವಾಗಿದ್ದು ಮತ್ತೊಂದು ಎಂಬಂತಾಗಿತ್ತು.

ಟಿವಿ9 ನಂತರ ತಕ್ಕಮಟ್ಟಿಗೆ ಚನ್ನಾಗಿ ಈವೆಂಟ್ ಕವರ್ ಮಾಡಿದ್ದು ಸುವರ್ಣ ಟಿವಿ. ಸಂಜೆ ರವಿ ಬೆಳಗೆರೆಯನ್ನು ಕರೆಸಿ, ಲೈವ್ ಮಾಡುವ ಮೂಲಕ ಟಿವಿ9ಗೆ ತಕ್ಕ ಏಟು ಕೊಟ್ಟಿತ್ತು. ಆದರೆ ಇಡೀ ಕಾರ್ಯಕ್ರಮದ ಒಂದು ನೆಗೆಟಿವ್ ಅಂಶ ಆಂಕರ್ ಹಮೀದ್. ಹಮೀದ್ ಇಡೀ ಸಂದರ್ಶನವನ್ನು ಯಾವುದೇ ಪೂರ್ವ ತಯಾರಿ ಇಲ್ಲದೆ ಮಾಡಲು ಕುಳಿತದ್ದು, ಕೇಳುತ್ತಿದ್ದ ಪ್ರಶ್ನೆಗಳಿಂದಲೇ ಸ್ಪಷ್ಟವಾಗುತ್ತಿತ್ತು. ಅನಂತ್ ಕುಮಾರ್ಗೆ ಕೇಳಬಾರದ ಒಂದು ಪ್ರಶ್ನೆ ಕೇಳಿದಾಗ, ಅನಂತ್ ಕುಮಾರ್ ಅಷ್ಟೇ ಸ್ಪಷ್ಟವಾಗಿ, ಹಮೀದ್ ನೀವು ಪ್ರಶ್ನೆಯನ್ನು ಕೇಳಬಾರದ ವ್ಯಕ್ತಿಗೆ ಕೇಳುತ್ತಿದ್ದೀರಿ ಎಂದು ನೇರ ಪ್ರಸಾರದಲ್ಲೇ ಹಮೀದ್ ನನ್ನು ಹರಾಜು ಹಾಕಿಬಿಟ್ಟಿದ್ದರು. ಆದರೆ ರವಿ ಬೆಳಗೆರೆ ಇದ್ದದ್ದರಿಂದ ಇಡೀ ಪ್ರೋಗ್ರಾಂ ಮ್ಯಾನೇಜ್ ಆಗಿತ್ತು. ಸುವರ್ಣ ಮಾಡಿದ ಮತ್ತೊಂದು ದುರಂತ ಎಂದರೆ ಟಿವಿ9 ಅನ್ನು ಸಾರಾ ಸಗಟಾಗಿ ಕಾಪಿ ಮಾಡಲು ಹೋಗಿದ್ದು. ಟಿವಿ9 ತನ್ನ ಕಾರ್ಯಕ್ರಮಕ್ಕೆ 'ಮರ್ಗಯಾ ಲಾಡೆನ್' ಎಂದು ಹೆಸರಿಟ್ಟಿತ್ತು. ಅದನ್ನು ಬಿಡದೆ ಕಾಪಿ ಮಾಡಿದ ಹಮೀದ್, ಸುವರ್ಣ ಕಾರ್ಯಕ್ರಮಕ್ಕೆ 'ಲಾಡೆನ್ ಮರ್ಗಯಾ' ಎಂದು ಹೆಸರನ್ನು ಹಿಂದೆ ಮುಂದೆ ಮಾಡಿ ಬಳಸಿ, ಚಾನೆಲ್ ಮಾನ ಹರಾಜು ಹಾಕಿದ್ದರು. 'ಬಿಗ್ ನ್ಯೂಸ್' ಎನ್ನುವುದು ಟಿವಿ9ನ ಮತ್ತೊಂದು ಚಾನೆಲ್ ಆಗಿರುವ ಇಂಗ್ಲೀಷ್ ಚಾನೆಲ್ ನ್ಯೂಸ್ 9ನ ಬ್ರೇಕಿಂಗ್ ನ್ಯೂಸ್ ಸ್ಟೈಲ್. ಬ್ರೇಕಿಂಗ್ ನ್ಯೂಸ್ ಬದಲಿಗೆ ಬಿಗ್ ನ್ಯೂಸ್ ಎಂದು ಹಾಕುವುದು ಎಲ್ಲರಿಗೂ ಗೊತ್ತು. ಅದನ್ನೂ ಬಿಡದೆ ಸುವರ್ಣ ಕದ್ದಿದೆ. ಅದನ್ನೇ ನೇರವಾಗಿ ಕದ್ದು ಕಾಪಿ ಮಾಡಿದ ಸುವರ್ಣ ಲಾಡೆನ್ ಸತ್ತ ಸುದ್ದಿಯನ್ನು ಬಿಗ್ ನ್ಯೂಸ್ ಎಂದು ಹಾಕಿದ್ದು ನಗೆ ಪಾಟಲಿಗೆ ಕಾರಣವಾಗಿತ್ತು. ಅಂದರೆ ಹಮೀದ್ ಹಾಗೂ ಸುವರ್ಣದ ಎಡಿಟೋರಿಯಲ್ ಸಿಬ್ಬಂದಿ ಬೌದ್ಧಿಕವಾಗಿ ಎಷ್ಟು ಖಾಲಿ ಎಂಬುದನ್ನು ಇದು ಪ್ರೂವ್ ಮಾಡುತ್ತದೆ. ಇನ್ನಾದರೂ ಸುವರ್ಣ ಕಾಪಿ ಮಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ಸುವರ್ಣ ನೋಡಲಿಕ್ಕೆ ಯಾರೂ ಇರೋಲ್ಲ.

ಇನ್ನು ಸಮಯದ ವಿಷಯಕ್ಕೆ ಬರೋದಾದರೆ ಪಾಪ! ಅವರಿಗೆ ಒಸಾಮಾನನ್ನು ಯಾವಾಗ ಹತ್ಯೆ ಮಾಡಿದ್ದು ಎಂದೇ ಸರಿಯಾಗಿ ಅರ್ಥವಾಗಿರಲಿಲ್ಲ. ಒಸಾಮಾ ಹತ್ಯೆಗೆ ಅಂತಿಮ ಕಾಯರ್ಾಚರಣೆಗೆ ಒಬಾಮಾ ಆದೇಶ ನೀಡಿದ್ದು ಶುಕ್ರವಾರ. ಅದನ್ನೆ ತಪ್ಪಾಗಿ ಅರ್ಥ ಮಾಡಿಕೊಂಡ ಶಶಿಧರ ಭಟ್ಟರು, 3 ದಿನಗಳ ಹಿಂದೆಯೇ ಒಸಾಮಾ ಹತ್ಯೆ ಎಂದು ಇಡೀ ದಿನ ಸುದ್ದಿ ಹಾಕುತ್ತಲೇ ಇದ್ದರು. ಅಲ್ಲದೆ ಒಸಾಮಾ ಇದ್ದ ಮನೆಯ ದೃಶ್ಯಗಳು ಎಲ್ಲಾ ಚಾನೆಲ್ ಗಳಿಗೂ ಲಭ್ಯವಾಗಿದ್ದವು. ಎಲ್ಲರೂ ಒಸಾಮಾ ಇದ್ದ ಮನೆಯ ಒಳಗಿನ ದೃಶ್ಯಗಳು ಎಂದು ಪ್ರಸಾರ ಮಾಡುತ್ತಿದ್ದರೆ, ಸಮಯ ಚಾನೆಲ್ ಮಾತ್ರ ಹೊಸ ವಿಷಯದ ಬೆನ್ನು ಹತ್ತಿತ್ತು. ಒಸಾಮಾ ಯಾವುದೋ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಕ್ಕಿ ಬಿದ್ದಿದ್ದಾನೆ ಎನ್ನುವಂತೆ 'ಒಸಾಮಾ ಬೆಡ್ ರೂಂ ದೃಶ್ಯಗಳು' ಎಂದು ನಿತ್ಯಾನಂದನ ಸುದ್ದಿಯಂತೆ ಹೆಡ್ಡಿಂಗ್ ಕೊಟ್ಟು ಪ್ರಸಾರ ಮಾಡುತ್ತಿತ್ತು. ಸಮಯ ಟಿವಿ ಶಶಿಧರ ಭಟ್ಟರ ಈ ರಸಿಕತೆ ಮೆಚ್ಚಲೇ ಬೇಕು.

ಇನ್ನು ಜನಶ್ರೀ ಬಗ್ಗೆ ಹೇಳದಿರುವುದೇ ವಾಸಿ. ರಮಾಕಾಂತ್ ಮತ್ತೊಮ್ಮೆ ತಾನಿನ್ನೂ ಎಳಸು. ಬೌದ್ಧಿಕವಾಗಿ ಖಾಲಿ ಖಾಲಿ ಎಂದು ನಡೆಸಿಕೊಟ್ಟ ಕಾರ್ಯಕ್ರಮದಲ್ಲೆ ಮತ್ತೊಮ್ಮೆ ಪ್ರೂವ್ ಮಾಡುತ್ತಿದ್ದರು. ಅನಂತ್ ಚಿನಿವಾರ್ ಇದ್ದುದರಲ್ಲೇ ಸ್ವಲ್ಪ ಜನಶ್ರೀ ಮರ್ಯಾದೆ ಉಳಿಸಲು ಹರಸಾಹಸ ಮಾಡುತ್ತಿದ್ದರು. ಆದರೆ 3-4 ತಾಸುಗಳ ಕಾಲ ಅನಗತ್ಯವಾಗಿ ಚರ್ಚೆ ಎಳೆದು ರಸ ಮುಗಿದ ಚ್ಯೂಯಿಂಗ್ ಗಂ ಮಾಡಿ ಬಿಟ್ಟಿದ್ದರು. ಜನಶ್ರೀ ಇಂತಹ ಮಹತ್ತರ ಬೆಳವಣಿಗೆ ಇರುವ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಪದೇ ಪದೇ ಎಡವುತ್ತಿದೆ. ಜನಶ್ರೀ ಫುಲ್ ರಿಪೇರಿ ಆಗಬೇಕು ಎಂಬುದನ್ನು ಇದು ಮತ್ತೊಮ್ಮೆ ಸಾಬೀತು ಪಡಿಸುತ್ತದೆ.

No comments:

Post a Comment