Tuesday, May 17, 2011

Hoogared ಎಂಬ ಶಬ್ದದ ಅರ್ಥ ನಿಮಗೆ ಗೊತ್ತಾ?

ಅರ್ಥವಿಲ್ಲದ ಮಾತು, ಏನೂ ಇಲ್ಲದಿದ್ದರೂ ತಾಸುಗಟ್ಟಲೆ ಮಾತನಾಡುವುದು, ಕತ್ತೆ ಉಚ್ಚೆ ಹೊಯ್ದಂತೆ ಮಾತನಾಡುವುದು, ಅಸಂಬಂಧ ಪ್ರಲಾಪ, ಹತಾಶೆ, ಹೇಳಿದ್ದನ್ನೇ ಹೇಳುತ್ತಾ ಇರುವುದು, ಮಾತಿನಲ್ಲಿ ಸ್ಪಷ್ಟತೆ ಇರದಿರುವುದು, ತನ್ನ ಅಭಿಪ್ರಾಯವನ್ನೇ ಎಲ್ಲರೂ ಕೇಳಬೇಕು, ತಾನು ಹೇಳಿದ್ದೆ ಸರಿ ಎಂಬಂತೆ ಮಾತನಾಡುವುದು...ಪಕ್ಷಪಾತಿಯಾಗಿ ಮಾತನಾಡುವುದು, ಒಂದೇ ದೃಷ್ಠಿಕೋನ ಹೊಂದಿ ಮಾತನಾಡುವುದು, ಪೂರ್ವಾಗ್ರಹ ಪೀಡಿತನಾಗಿ ಮಾತನಾಡುವುದು...ಗಿಳಿಪಾಠ ಹೇಳಿದಂತೆ ಹೇಳಿದ್ದನ್ನೇ ಹೇಳುವುದು...
ಇದೆಲ್ಲದ್ದಕ್ಕೂ ಇಂಗ್ಲೀಷ್ ನಲ್ಲಿ ಏನು ಹೇಳುತ್ತಾರೆ ಗೊತ್ತಾ? Hoogared
ಹೌದು ಇಂಗ್ಲೀಷ್ ಭಾಷಾ ಲೋಕಕ್ಕೆ ಈ ಶಬ್ದ ಸೇರಿ ಮೂರು ವರ್ಷಗಳೇ ಕಳೆದು ಹೋಗಿವೆ! Hoogared ಎಂಬ ಶಬ್ದವನ್ನು ಎಲ್ಲೋ ಕೇಳಿದಂತಿದೆ ಎಂದುಕೊಳ್ಳುತ್ತಿದ್ದೀರಾ? ಹೌದು ಈ ಶಬ್ಧದ ಮೂಲ ಟಿವಿ9 ಟೆರರ್ ರಿಪೋರ್ಟರ್ ಲಕ್ಞ್ಮಣ್ ಹೂಗಾರ್. ಇದಕ್ಕೆ ಕಾರಣ ಇಲ್ಲದಿಲ್ಲ. ಈ ರೀತಿ ಅರ್ಥವಿಲ್ಲದೆ ಗಂಟೆ ಗಂಟಲೆ ಅಸಂಭದ್ಧವಾಗಿ ಅರ್ಥವಿಲ್ಲದ ಮಾತನಾಡುವುದಕ್ಕೆ, ಏನೂ ಇಲ್ಲದಿದ್ದರೂ ತಾಸುಗಟ್ಟಲೆ ಮಾತನಾಡುವುದು, ಕತ್ತೆ ಉಚ್ಚೆ ಹೊಯ್ದಂತೆ ಮಾತನಾಡುವುದು, ಅಸಂಬಂಧ ಪ್ರಲಾಪ, ಹತಾಶೆ, ಹೇಳಿದ್ದನ್ನೇ ಹೇಳುತ್ತಾ ಇರುವುದು, ಮಾತಿನಲ್ಲಿ ಸ್ಪಷ್ಟತೆ ಇರದಿರುವುದು, ತನ್ನ ಅಭಿಪ್ರಾಯವನ್ನೇ ಎಲ್ಲರೂ ಕೇಳಬೇಕು, ತಾನು ಹೇಳಿದ್ದೆ ಸರಿ ಎಂಬಂತೆ ಮಾತನಾಡುವುದು...ಪಕ್ಷಪಾತಿಯಾಗಿ ಮಾತನಾಡುವುದು, ಒಂದೇ ದೃಷ್ಠಿಕೋನ ಹೊಂದಿ ಮಾತನಾಡುವುದು, ಪೂರ್ವಾಗ್ರಹ ಪೀಡಿತನಾಗಿ ಮಾತನಾಡುವುದು...ಗಿಳಿಪಾಠ ಹೇಳಿದಂತೆ ಹೇಳಿದ್ದನ್ನೇ ಹೇಳುವುದು ಇದೆಲ್ಲವೂ ಲಕ್ಷ್ಮಣ್ ಗೆ ಸಿದ್ದಿಸಿದೆ.
ಹಾಗಂತ ಈ ಶಬ್ದ ನಮ್ಮ ಸೃಷ್ಠಿಯಲ್ಲ ಸ್ವಾಮಿ!  ಈ ಶಬ್ದವನ್ನು ಹುಟ್ಟು ಹಾಕಿದ್ದು ಕನ್ನಡಿಗರೇ ಆದ, ಈಗ ಔಟ್ಲುಕ್ ಪತ್ರಿಕೆಯ ಎಡಿಟರ್ ಆಗಿರುವ ಕೃಷ್ಣಪ್ರಸಾದ್. ಅವರ ಪ್ರಸಿದ್ದ www.churumuri.wordpress.com ಬ್ಲಾಗ್ನಲ್ಲಿ 20 November 2007 ರಂದು ಈ ಶಬ್ಸವನ್ನು ಮೊದಲು ಹುಟ್ಟುಹಾಕಿದವರು ಅವರೇ! ಬೆಂಗಳೂರಿಗೆ ಔಟ್ ಸೋರ್ಸಿಂಗ್ ಸರ್ಿಂಗ್ ಹೆಚ್ಚಾಗಿ ಬರ್ತಿದ್ದಾಗ, ಇಂಗ್ಲೀಷ್ ಗೆ Bangalored ಎಂಬ ಹೊಸ ಪದ ಸೇರ್ಪಡೆಯಾಗಿತ್ತು.  Bangalored ಅರ್ಥ It refers to people who have been laid off from a multinational because their job has been moved to India — a business practice designed to save money that is arousing passions in some countries, especially Britain and the United States’.
http://en.wiktionary.org/wiki/Bangalored


Bangalored ಬಗ್ಗೆ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ http://www.worldwidewords.org/turnsofphrase/tp-ban1.htm)



ಇದನ್ನು ಗಮನಿಸಿದ ಕೃಷ್ಣಪ್ರಸಾದ್, ಬೆಂಗಳೂರ್ಡ್ ಎಂಬುದು ವಿಶಿಷ್ಟ ಅರ್ಥ ಪಡೆದು ಇಂಗ್ಲೀಷ್ ಡಿಕ್ಷನರಿ ಸೇರಿದೆ. ಅದೇ ರೀತಿ ಕರ್ನಾಟಕದಿಂದ ಇನ್ನೂ ಯಾವ ಯಾವ ಶಬ್ಧಗಳನ್ನು ಶಬ್ದ ಶಾಸ್ತ್ರಜ್ಞರು ಹುಟ್ಟುಹಾಕಬಹುದು? ಅವುಗಳನ್ನು ಇಂಗ್ಲೀಷ್ ಡಿಕ್ಷನರೊಗೆ ಸೇರಿಸಬಹುದು ಎಂದು ಊಹಿಸಿ, ಕೆಲವು ಶಬ್ದಗಳನ್ನು ಹುಟ್ಟು ಹಾಕಿದ್ದರು. ಆಗಲೇ ಅವರು ಲಕ್ಪ್ಷ್ಮಣ್ ಹೂಗಾರ ಅಸಂಬಧ್ಧವಾಗಿ ಮಾತನಾಡುವುದು ಗಮನಿಸಿ, Hoogared  ಎಂಬ ಶಬ್ದ ಹುಟ್ಟು ಹಾಕಿದ್ದರು. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿದೆ...Hoogared: to keep going on and on. As in, “There was no news, but to fill the airtime, the correspondent hoogared and hoogared till the commercial break.”



ಅವರು ಹುಟ್ಟು ಹಾಕಿದ ಈ ಶಬ್ದ ಹಾಗೂ ಇತರೆ ಶಬ್ದಗಳ ಚುರುಮುರಿ ಲಿಂಕ್ ಇಲ್ಲಿದೆ
http://churumuri.wordpress.com/2007/11/20/coming-nimmoppan-experiments-with-untruths/



ಇದನ್ನು ಓದಿ ಕೆಲ ಓದುಗರು ಹಾಕಿದ ಎರಡು ಕಾಮೆಂಟ್ ಗಳನ್ನೂ ಸಹ ನಿಮ್ಮ ಗಮನಕ್ಕಾಗಿ ಇನ್ನಿ ನೀಡಿದ್ದೇವೆ.
1.     hoogared – Lol..Really good.Keeps talking even if he has got nothing to say.kelavomme helodakke tudi illa, buda illa
‘aitihaasika putagalalli seride’- he used to say this sentence everytime he opned his mouth on the day Yediyurappa govt fell.(or was it during BSY’s oath takingt ceremony?:-)




2.     i think kp was referring to lakshman hoogar.. that tv9 reporter who keeeps on and on on on on saying everything and spoiling my head…



ಇದನ್ನು ಈಗ ಇಲ್ಲೇಕೆ ಪ್ರಸ್ತಾಪ ಮಾಡಿದ್ದೇವೆ ಎಂದು ನೀವು ತಲೆ ಕೆಡಿಸಿಕೊಂಡಿರಬಹುದು. ಏಕೆಂಧರೆ ಇದಕ್ಕೆ ಸಾಕ್ಷಿ ಎನ್ನುವಂತೆ ಲಕ್ಷ್ಮಣ್ ಹೂಗಾರ್ ಆತ್ಮ ರತಿಯ ಪರಾಕಷ್ಠೆ ತಲುಪಿದ್ದಾರೆ. ಪಾಪ್ಯುಲಾರಿಟಿಯ ಮದ ಹೂಗಾರ್ ತಲೆಗೆ ಹತ್ತಿದೆ. ಕೊಬ್ಬು ತಲೆಗೇರಿದೆ. ಇದನ್ನು ಹೇಳಲು ಕಾರಣವಿದೆ. 
ನಿನ್ನೆ ಅಂದರೆ ಮೇ 17 ರಂದು ಸಂಜೆ 7 ರಿಂದ 8.30 ರವರೆಗೆ ನಡೆದ ಟಿವಿ9ನ ರಾಜಕೀಯ ಚರ್ಚೆಯಲ್ಲಿ ಲಕ್ಷ್ಮಣ್ ಹೂಗಾರ್ ತನ್ನ ಎಲ್ಲಾ ಲಿಮಿಟೇಷನ್ ಗಳನ್ನು ದಾಟಿ ಹೋಗಿ, ತಾನು ಪಶ್ನಾತೀತ ಎನ್ನುವಂತೆ ನಡೆದುಕೊಂಡಿದ್ದಾನೆ. ಇಡೀ ಸಂಧರ್ಶನ ನೋಡಿದವರಿಗೆ ಬಿಜೆಪಿ ಸರಕಾರವನ್ನು ಕೇಂದ್ರ ಸರಕಾರ ತಕ್ಷಣ ವಜಾ ಮಾಡದಿರುವದಕ್ಕೆ ಜೆಡಿಎಸ್, ಕಾಂಗ್ರೆಸ್ ಗಿಂತ ಲಕ್ಷ್ಮಣ್ ಹೂಗಾರ್ ಹೆಚ್ಚು ಅಪ್ ಸೆಟ್ ಆಗಿದ್ದು ಎದ್ದು ಕಾಣುತ್ತಿತ್ತು. ಸಾಧ್ಯವಿದ್ದಿದ್ದರೆ ಲಕ್ಷ್ಮಣ್ ಟಿವಿ9 ಚರ್ಚೆಯಲ್ಲೇ ಬಿಜೆಪಿ ಸರಕಾರವನ್ನು ಬೀಳಿಸಿ ಬಿಡುತ್ತಿದ್ದನೋ ಏನೋ??
ಇಡೀ 'ಕಾಡು ಹರಟೆ ನೋಡಿದರೆ ಕೆಲ ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ ಲಕ್ಷ್ಮಣ್ ವೃತ್ತಿಪರ ಪತ್ರಕರ್ತನಲ್ಲ. ಎರಡನೆಯದಾಗಿ ಲಕ್ಷಣ್ ತೆರೆದ ಮನಸ್ಸಿನಿಂದ ಚರ್ಚೆ ನಡೆಸುವುದಿಲ್ಲ. ಚರ್ಚೆಯಲ್ಲಿ ಲಕ್ಷ್ಮಣ್ ಖಾಸಗಿ ಅಭಿಪ್ರಾಯಗಳು ಬರುತ್ತವೆ. ಮತ್ತು ಅದನ್ನು ಎಲ್ಲರೂ ಒಪ್ಪಲೇಬೇಕು. ಮೂರನೆಯದಾಗಿ ತಾನು ಪತ್ರಕರ್ತನಾಗಿರುವುದರಿಂದ ಮತ್ತು ಇತ್ತೀಚೆಗೆ ಅನಿವಾರ್ಯವಾಗಿ ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂಬ ಪರಿಸ್ಥಿತಿ ನಿರ್ಮಾಣವಾಗಿ  ಟಿವಿ9 ಆತನನ್ನು ಪಾರ್ಟ್ ಟೈಂ ಆಂಕರ್ ಮಾಡಿರುವುದರಿಂದ ಈತನಿಗೆ ತಾನು ಜಗತ್ತಿನ ಅತಿ ಶ್ರೇಷ್ಠ ಪತ್ರಕರ್ತ ಎಂಬ ಮತ್ತು ನೆತ್ತಿಗೆ ಹತ್ತಿದೆ.
ಇದರ ಫಲವಾಗಿಯೇ ನಿನ್ನೆ ಇಡೀ ರಾಜ್ಯದ ಸಮಸ್ತ ಜನತೆ ಕಾರ್ಯಕ್ರಮ ನೋಡುತ್ತಿರುತ್ತಾರೆ ಎಂಬುದನ್ನೂ, ತಾನು ಜೆಡಿಎಸ್ ಅಥವಾ ಕಾಂಗ್ರೆಸ್ ಚೇಲಾ ಅಲ್ಲ, ಒಬ್ಬ ಆರ್ಡಿನರಿ ಪತ್ರಕರ್ತ ಎಂಬುದನ್ನೂ ಮರೆತು ಮರೆತು ಒನ್ ಸೈಡೆಡ್ ಕಾರ್ಯಕ್ರಮ ನಡೆಸಿದ್ದ! ನೇರವಾಗಿ ದಿನೇಶ್ ಗುಂಡೂರಾವ್ ಹಾಗೂ ಜೆಡಿಎಸ್ ದತ್ತಾ ಜೊತೆ ಸೇರಿಕೊಂಡು, ಧನಂಜಯ್ ಕುಮಾರ್ ಅವರನ್ನು ಟಾರ್ಗೆಟ್ ಮಾಡಿಕೊಂಡು, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಿದ. ತಾನು ಪತ್ರಕರ್ತ ಎಂಬುದನ್ನೇ ಮರೆತು, ಧನಂಜಯ್ ಕುಮಾರ್ ಅವರನ್ನು ಕೆಲ ಬಾರಿ ಧನಂಜಯ್..ಧನಂಜಯ್... ಎಂದು ಏಕವಷನದಲ್ಲೇ ಕರೆಯುವ ಮೂಲಕ ಅಸಹ್ಯ ಹುಟ್ಟಿಸಿದ. ಪತ್ರಕರ್ತ ಪಕ್ಷಪಾತಿಯಾಗಬಾರದು. ಆಂಕರ್ ಗಳು ಒನ್ ಸೈಡೆಡ್ ಅಟ್ಯಾಕ್ ಮಾಡಬಾರದು ಎಂದು ಈತನಿಗೆ ಗೊತ್ತೇ ಇಲ್ಲ. ಕಾರ್ಯಕ್ರಮ ನಡೆಸುವವರು ಎಕ್ಸೈಟ್ ಆಗಬಾರದು. ತಾಳ್ಮೆ ಕಳೆದುಕೊಳ್ಳಬಾರದು. ತಾನೇನೋ ಸರ್ವಜ್ಜ ಎಂಬಂತೆ ಪುಗಸಟ್ಟೆ ಉಪದೇಶ ನೀಡಬಾರದು. ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಈದ ಈ ರೀತಿ ತಾಳ್ಮೆ ಕಳೆದುಕೊಂಡು ಒದರಾಡಿದ್ದಕ್ಕೆ ಪರಾವೆಗಳಿವೆ. ಆ ರೀತಿ ಒದರಾಡಿದ್ದು ಕೇವಲ ಬಿಜೆಪಿಯವರ ವಿರುದ್ಧ ಮಾತ್ರ ಎಂಬುದು ನಿಮಗೆ ನೆನಪಿರಲಿ! ಆದರೂ ಈತ ಖ್ಯಾತ (ಕುಖ್ಯಾತ) ಟಿವಿ ಪತ್ರಕರ್ತ.
ಅಷ್ಟಕ್ಕೂ ಆಗಿದ್ದೇನು?
ಚರ್ಚೆಯಲ್ಲಿ ದಿನೇಶ್ ಹಾಗೂ ತಮ್ಮ ಎಂದಿನ ಅಸಂಬಂಧ ಶೈಲಿಯಲ್ಲಿ ದತ್ತಾ ಇಬ್ಬರೂ ಕೆಲಸಕ್ಕೆ ಬಾರದ ವಾದ ಮಾಡುತ್ತಿದ್ದರು. ಆಗ ಧನಂಜಯ್ ಕುಮಾರ್, ಈ ರೀತಿ ನಿಮ್ಮ ಜೊತೆ ಕಾಡು ಹರಟೆ ಮಾಡಲು ನನಗೆ ಸಮಯವಿಲ್ಲ ಎಂದರು! ಅಷ್ಟೇ!
ಅಕಟಕಟಾ ಎಂದು ಲಕ್ಷ್ಮಣ್ ಹೂಗಾರ್ ಪಿತ್ತ ನೆತ್ತಿಗೇರಿಬಿಟ್ಟಿತ್ತು! ಮೊದಲೇ 8ತಿಂಗಳುಗಳಿಂದ ಬಿಜೆಪಿ ಉರುಳಿಸಲು ಓರ್ವ ಪತ್ರಕರ್ತನಾಗಿ ಸಾಮಿನ ಮೇಲೆ ಸಾಮು ಹೊಡೆದದ್ದೇ ಹೊಡೆದದ್ದು ಮಾಡಿದ್ದ ಲಕ್ಷ್ಮಣ್, ಈಗ ಕೇಂದ್ರ ಸರಕಾರ ಬಿಜೆಪಿ ವಜಾ ಮಾಡಲು ಮುಂದಾಗದ್ದು ನೋಡಿ ಹತಾಶನಾಗಿದ್ದ. ಹತಾಶೆ ಹೊರ ಬರಲು ಒಂದು ನೆಪ ಬೇಕಿತ್ತು. ಧನಂಜಯ್ ಕುಮಾರ್ ಹೇಳಿದ್ದು ಕೇಳಿ ಲಕ್ಷ್ಮಣ್ ಕೆರಳಿದ ವೀರ ಲಕ್ಷ್ಮಣನಾಗಿ ಬಿಟ್ಟ. ಆತನ ಉಗ್ರ ಪ್ರತಾಪ ನೋಡಿ, ದತ್ತಾ, ದಿನೇಶ್ ಸಹ ದಂಗೆದ್ದು ಹೋಗಿದ್ದರು! ಅವರ ಮುಖದಲ್ಲೂ ಲಕ್ಷ್ಮಣ್ ಗೆ ಏನಾಯ್ತು? ಎಂಬ ಪ್ರಶ್ನಾರ್ಥಕ ಚಿನ್ಹೆ ಮೂಡುತ್ತಿತ್ತು. ಆದರೆ ಚರ್ಚೆ ತಮ್ಮ ಪರವಾಗಿ ಆಗುತ್ತಿರುವುದನ್ನು ಅರಿತು, ಈ ಇಬ್ಬರೂ ಲಕ್ಷ್ಮಣ್ ಜೊತೆ ಸೇರಿ ಧನಂಜಯ್ ಕುಮಾರ್ ಹೇಳಿದ್ದು ಏನೋ ಮಹಾಪರಾಧ ಎನ್ನುವಂತೆ ದಾಳಿ ನಡೆಸಿದರು. ಅಲ್ಲಿಂದ ಚರ್ಚೆ ಪೂರ್ತಿ ಹಳ್ಳ ಹಿಡಿದು ಹೋಗಿತ್ತು. ನೀವು ಹೇಳಿದ್ದು ವಾಪಸ್ ತೆಗೆದುಕೊಳ್ಳಿ! ನಿಮ್ಮನ್ನು ನೀವು ಏನು ಅಂದುಕೊಂಡಿದ್ದೀರಿ! ಕಾಡು ಹರಟೆ ಎಂದರೆ ಏನರ್ಥ! ನಾವೇನು ಕಾಡು ಹರಟೆ ಮಾಡ್ತಿದ್ದೇವಾ ಎಂದು ಟಿವಿ9 ಗೇ ಬೈದು ಬಿಟ್ಟರೇನೋ! ತನ್ನ ಮರ್ಮಕ್ಕೆ ಝಾಡಿಸಿ ಒದ್ದು ಬಿಟ್ಟರೇನೂ ಎಂಬಂತೆ ಅಲಲಲಾಲಾಲಾಲ ಎಂದು ಕೂಗಾಡಿ ಬಿಟ್ಟ ಲಕ್ಷ್ಮಣ್ ನೋಡಿದರೆ ಎಂಥವರಿಗೂ ಪಿಚ್ಚೆನಿಸಿತ್ತು.
ಅಷ್ಟಕ್ಕೂ ನಿಲ್ಲದೆ, ನೀವು ಬಿಜೆಪಿಯವರು ಮಾಡೋ ನಾಟಕ ನೋಡಿ ನಾವೆಲ್ಲ ಸುಮ್ಮನೇ ಕೂರಬೇಕಾ? ಎಂದೆಲ್ಲ ಹುಚ್ಚರಂತೆ ಕೂಗಾಡಿಬಿಟ್ಟ. ಅದೇ ಪ್ರಶ್ನೆಯನ್ನು ಜೆಡಿಎಸ್, ಕಾಂಗ್ರೆಸ್ ನವರಿಗೆ ಕೇಳಲು ಮಾತ್ರ ಲಕ್ಷ್ಮಣ್ ಗೆ ನೆನಪಾಗುವುದಿಲ್ಲ.! ಶಾಸಕರನ್ನು ಹೈಜಾಕ್ ಮಾಡಿ ಕರೆದುಕೊಂಡು ಹೋಗಿದ್ದು, ಸರಕಾರ ಬಿಳಿಸಲು ಯತ್ನಿಸಿದ್ದು, ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಠಿ ಮಾಡಿದ್ದು ಯಾವುದೂ ಈ ಹೂಗಾರ್ಡ್ ಗೆ ನಾಟಕ ಎನ್ನಿಸುವುದೇ ಇಲ್ಲ.
ಧನಂಜಯ್ ಕುಮಾರ್ ಅದಕ್ಕೆ ಸ್ಪಷ್ಟನೆ ನೀಡಲು ಹೋದರೂ ಅವರಿಗೆ ಮಾತನಾಡಲು ಅವಕಾಶ ನೀಡದಂತೆ ಲಕ್ಷ್ಮಣ್ ತಾನು ಓರ್ವ ಪತ್ರಕರ್ತ ಮಾತ್ರ. ಜಡ್ಜ್ ಅಲ್ಲ ಎಂಬುದನ್ನು ಮರೆತು ಅಸಹ್ಯಕರವಾಗಿ ಕೂಗಾಡಿದ್ದು ಎದ್ದು ಕಂಡಿತ್ತು. ಇಡೀ ಚರ್ಚೆ ಉದ್ದಕ್ಕೂ ಲಕ್ಷ್ಮಣ್ ಮಾತಿನ ದಾಳಿ ಕೇವಲ ಬಿಜೆಪಿ ಕಡೆಗಿತ್ತೇ ಹೊರತು, ಸಂವಿಧಾನಕ್ಕೆ ವಿರುದ್ಧವಾಗಿ ಬಹುಮತ ಇದ್ದಾಗಲೂ ಗವರ್ನರ್ ತಪ್ಪು ನಿರ್ದಾರ ತೆಗೆದುಕೊಂಡ ಬಗ್ಗೆ ಒಮ್ಮೆಯೂ ಕೇಳಲಿಲ್ಲ.! ಎಲ್ಲದಕ್ಕೂ ಕಾರಣವಾದ 10 ಶಾಸಕರನ್ನು ಕುಮಾರಸ್ವಾಮಿ ಹೈಜಾಕ್ ಮಾಡಿಕೊಂಡು ಹೋಗಿದ್ದಕ್ಕೆ ಒಮ್ಮೆಯೂ ತಕರಾರು ಮಾಡಲಿಲ್ಲ! ಅಲಲಲಲಲಾ ಎಂದು ಕುಗಲಿಲ್ಲ. ನಿಮ್ಮ ನೋಟಿಸ್ ಗೆ ಅಂತ ಆ ಚರ್ಚೆಯ ಒಂದು ಸಣ್ಣ ಝಲಕ್ ಇಲ್ಲಿ ಹಾಕಿದ್ದೇವೆ. ನೋಡಿ, ನಿಜವಾದ ಲಕ್ಷ್ಮಣಾವತಾರ ಅರ್ಥ ಮಾಡಿಕೊಳ್ಳಿ



ಇದು ಕೇವಲ ಝಲಕ್ ಮಾತ್ರ! ನಾವು ಇಡೀ ಕಾರ್ಯಕ್ರಮವನ್ನೇ ರೆಕಾರ್ಡ್ ಮಾಡಿಟ್ಟುಕೊಂಡಿದ್ದೇವೆ. ಅವಶ್ಯಕತೆ ಬಿದ್ದಲ್ಲಿ ಇಡೀ ಚರ್ಚೆಯನ್ನು ಇಲ್ಲಿ ಹಾಕಲು ಸಿದ್ದ. ಅಥವಾ ಸಂಬಂಧಿಸಿದವರಿಗೆ ದೂರು ನೀಡಲು ಸಿದ್ದ. ಕಳೆದ 10 ತಿಂಗಳಲ್ಲಿ ಹಾಗೂ ಟಿವಿ9 ಸೇರಿದ ನಂತರ ಲಕ್ಷ್ಮಣ್ ಮಾಡಿದ ಅವಾಂತರಗಳ ಪಟ್ಟಿಯೇ ಇದೆ. ಅವುಗಳಲ್ಲಿ ಕೆಲವನ್ನು ಪುರಾವೆ ಸಮೇತ ಇಲ್ಲಿ ನೀಡಿದ್ದೇವೆ.
ಅಷ್ಟಕ್ಕೂ ಲಕ್ಷ್ಮಣ್ ಈ ರೀತಿ ಪದೇ ಪದೇ ಬಿಜೆಪಿ ವಿರುದ್ಧ, ಬಿಜೆಪಿ ನಾಯಕರ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಏಕೆ ಅಟ್ಯಾಕ್ ಮಾಡ್ತಾನೆ? ಇಲ್ಲೇ ಇರೋದು ಸಸ್ಪೆನ್ಸ್!
ಲಕ್ಷ್ಮಣ್ ನಿಜ ಹೇಳಬೇಕೆಂದರೆ ಒಬ್ಬ ಎಡಪಂಥೀಯ ಕಾಮ್ರೇಡ್. ಆತನ ಬದುಕು, ಬರಹ, ಎಲ್ಲದರಲ್ಲೂ ಇದು ಹಾಸುಹೊಕ್ಕಾಗಿದೆ. ಹೀಗಾಗಿ ಬಿಜೆಪಿ, ಆರ್ ಎಸ್ ಎಸ್ ನವರನ್ನು ಮುಟ್ಟಿದರೆ ಹೇಸಿಗೆ ತಿಂದಷ್ಟೇ ಹೇಸಿಗೆ ಪಟ್ಟುಕೊಳ್ಳುತ್ತಾನೆ. ಈಗಲ್ಲ! ಕನ್ನಡಪ್ರಭದಲ್ಲಿ ಇದ್ದಾಗಲೂ ಇವನದ್ದು ಇದೇ ಕಥೇ. ಈತನ ಭಾನಗಡಿಗಳನ್ನು, ಇಂತಹ ಸಹಿಸದೇ ಎಚ್.ಆರ್. ರಂಗನಾಥ್ ಶಿಫಾರಸು ಮಾಡಿ, ಈತನನ್ನು ಕನ್ನಡಪ್ರಭದಿಂದ ಹೊರಗೆ ಹಾಕಿದ್ದರು. ನಂತರ ಹೊಟ್ಟೆಪಾಡಿಗೆ ಎಲ್ಲೆಲ್ಲೋ ಕೆಲಸ ಮಾಡಿ ಈಟಿವಿ ಸೇರಿಕೊಂಡ. ಅಲ್ಲಿಂದ ಟಿವಿ9. ಇಲ್ಲಿ ಮೊದಲು ಲೂಯಿಸ್ ಎಂಬಾತ ಪೊಲಿಟಿಕಲ್ ಹೆಡ್ ಆಗಿದ್ದ. ಲಕ್ಷ್ಮಣ್ ಆತನ ಅಸಿಸ್ಟೆಂಟ್. ಏನೇನೋ ಹುನ್ನಾರ ಮಾಡಿ ಆತನನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದ. ವಿಜಯ ಲಕ್ಷ್ಮೀ ಲಕ್ಷ್ಮಣ್ ಗಿಂತ ಚೆನ್ನಾಗಿ ರಿಪೋರ್ಟಿಂಗ್ ಮಾಡುತ್ತಿದ್ದರೂ ಆಕೆಯನ್ನು ತುಳಿದು, ಪೊಲಿಟಿಕಲ್ ನಿಂದ ಓಡಿಸಿದ. ನಂತರ ಪೊಲಿಟಿಕಲ್ ಗೆ ಯಾರೂ ಎಂಟ್ರಿಯಾಗದಂತೆ ನೋಡಿಕೊಂಡ. ತನ್ನ ಮಾತು ಕೇಳುವ, ಬಾಲ ಬಡುಕರಂತಿರುವ ಹರಿಪ್ರಸಾದ್, ವಿನಾಯಕ್, ಈತನಿಗೆ ಪರಮಾಪ್ತರು.
ಇದಿಷ್ಟೂ ಆತನ ಹಿನ್ನೆಲೆ. ಇಂತಹ ನಟೋರಿಯಸ್ ಇರೋ ಈತನಿಗೆ ನಕ್ಸಲ್ ಲಿಂಕ್ ಸಹ ಇದೆ ಎಂಬ ಮಾತುಗಳು ಕನ್ನಡಪ್ರಭದಲ್ಲೇ ಕೇಳಿ ಬಂದಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಈತ ನಕ್ಸಲ್ ಸಿಂಪಥೈಸರ್. ಇದನ್ನೂ ಈತ ನೇರವಾಗಿ ತನ್ನ ಫೇಸ್ ಬುಕ್ನಲ್ಲೇ ಬರೆದುಕೊಳ್ತಾನೆ.
Laxman Hoogar: sampattigoskar akramavagi nela, jala, kaadu kadiyoru nijavada deshdrohigalu. aadru eega avre deshada aasti aagiddare! ade ee deshada duranta. konegu binayak senge bail sikkide. heegagi sedition law reform agbeku.
ನಿಮಗೆ ಗೊತ್ತಿಲ್ಲದ ಮತ್ತೊಂದು ವಿಷಯ ಹೇಳ್ತೀವಿ ಕೇಳಿ. ಈತ ಕೂಡಾ ಒಂದು ರೀತಿ ರಂಗ'ನಾಥ' ಭಾರಧ್ವಾಜ ಟೈಪ್ ಪತ್ರಕರ್ತ. ಆತನಂತೆ ಈತನೂ ಕಂಡ ಕಂಡವರಿಗೆ ಅಪ್ಪಾಜಿ ಎನ್ನುತ್ತಾನೆ. ಇವರಲ್ಲಿ ಈತನ ನಿಜವಾದ ಅಪ್ಪಾಜಿ ಸಾಕ್ಷಾತ್ ದೇವೇಗೌಡರು! ನಿಮಗೆ ಗೊತ್ತಿರಲಿ! ದೇವೇಗೌಡರು ಎದುರಾದರೆ ತಾನು ಪತ್ರಕರ್ತ ಎಂಬುದನ್ನೂ ಮರೆತು ಧಡಕ್ಕನೆ  'ಅಪ್ಪಾಜಿ ಹೇಗಿದ್ದೀರಿ'? ಅರಾಮ ಇದ್ದೀರಾ? ಎಂದು ಅವರ ಕಾಲಿಗೆ ಬಿದ್ದು ಬಿಡುತ್ತಾನೆ. ಅದೇ ರಾಜ್ಯದ ಮುಖ್ಯಮಂತ್ರಿಗಳನ್ನು ಈತ ಕರೆಯೋದೇ 'ಯಡ್ಡಿ' ಅಂತ! ಬೇಕಿದ್ರೆ ಸಾಕ್ಷಿ ಇಲ್ಲಿದೆ ನೋಡಿ...
Laxman Hoogar: bjp sarkar matte birugaalige sikkide. govrner kendrakke kalisida report sarkarvannu ulisutta? illa alisutta anno yaksha prashne yeddide. idakke yaaru hone? yaddina illa bhardwaja? antu raajya suffer aagodu maatra tappilla.
ಒಂದು ಪಕ್ಷದವರನ್ನು ಅಪ್ಪಾಜಿ ಎಂದು ಕಾಲಿಗೆ ಬೀಳುವ, ಮತ್ತೊಂದು ಪಕ್ಷದವರಿಗೆ ಕನಿಷ್ಠ ಗೌರವವನ್ನೂ ಕೊಡದ ಇಂಥಹ ಹೀನ ವ್ಯಕ್ತಿತ್ವದ ಪತ್ರಕರ್ತ ಬಿಜೆಪಿಯನ್ನು ದಿನ ಬೆಳಗಾದರೆ ವಿರೋಧಿಸದೇ ಬೇರೇನು ಮಾಡಿಯಾನು?
ಇನ್ನೂ ಒಂದು ವಿಷಯ 2008 ರ ವಿಧಾನಸಭೆ ಚುನಾವಣೆಯಲ್ಲಿ ಸಖತ್ತಾಗಿ ಹರಿದಾಡ್ತಿತ್ತು. ಅದೇನೆಂದರೆ ಸುವರ್ಣದ ಹಮೀದ್  ಹಾಗೂ ಲಕ್ಷ್ಮಣ್ ಇಬ್ಬರೂ ಜೆಡಿಎಸ್ ನಿಂದ ಚುನಾವಣೆಗೆ ನಿಲ್ತಾರೆ ಎಂಬುದು! ಅದಾದ ನಂತರ ಈಗಲೂ ಜೆಡಿಎಸ್ ಅಂತರಂಗದಲ್ಲಿ ಹೊಕ್ಕಾಡುವವರಿಗೆ ಈ ವಿಷಯ ಗೊತ್ತಿದೆ. ಸ್ವತ: ಕುಮಾರಸ್ವಾಮಿಯವರೇ ಕೆಲ ಹಿರಿಯ ಪತ್ರಕರ್ತರ ಮುಂದೆ ಈ ರೀತಿಯ ಒಂದು ಅನಿಸಿಕೆ ವ್ಯಕ್ತ ಪಡಿಸಿದ್ದು ಸಹ ಅಷ್ಟೇ ಸತ್ಯ.
ಇಂತಹ ಆಸೆ ಇಟ್ಟುಕೊಂಡಿರುವ ಮನುಷ್ಯ ದಿನ ಬೆಳಗಾದರೆ ಬಿಜೆಪಿ ವಿರುದ್ಧ ಅಸಂಬಧ್ದ ಪ್ರಲಾಪ ಮಾಡದೇ ಇನ್ನೇನು ಮಾಡಿಯಾನು?
11 ಜನ ಶಾಸಕರು, ಸುಪ್ರಿಂ ಕೋರ್ಟ್ ಆದೇಶದ ನಂತರ ಮತ್ತೆ ಬಿಜೆಪಿಯಲ್ಲೇ ಇಳಿಯುವ ನಿರ್ದಾರ ಮಾಡಿದ್ದರು. ಅದಕ್ಕೆ ಕಾರಣ ಕುಮಾರಸ್ವಾಮಿಯನ್ನು ನಂಬಿಕೊಂಡ ಹೋಗಿದ್ದ ಅವರಿಗೆ ಕಳೆದ 8 ತಿಂಗಳಲ್ಲಿ ಕುಮಾರಸ್ವಾಮಿಯ ಅಸಲಿಯತ್ತು ಪರಿಚಯವಾಗಿತ್ತು. ಹೀಗಾಗಿ ಬಿಜೆಪಿಯಲ್ಲೇ ಉಳಿದರು. ಆದರೆ ಇದನ್ನು ಕಂಡು, ಕಾಂಗ್ರೆಸ್, ಜೆಡಿಎಸ್ ನ ಕುಮಾರಸ್ವಾಮಿಗಿಂತ ಹೆಚ್ಚು ಕುದ್ದು ಹೋಗಿದ್ದು ಲಕ್ಷ್ಮಣ್ ಹೂಗಾರ್ ಎಂಬ ಈ ಮಹಾಶಯ! ಈಗ ಈತ ಯಾವ ರೀತಿ ಗಾಂಧಾರಿಯಂತೆ ತನ್ನ ಹೊಟ್ಟೆಯನ್ನು ತಾನೇ ಗುದ್ದಿಕೊಂಡು ವಿಷಯ ಕಾರಿಕೊಂಡಿದ್ದ ನೋಡಿ...
Laxman Hoogar: kshamisi, bjpya bhinna shashakarnnu (mlas) maanavantharu anth kareyonva? democracyge avaman madta hogore eega hecchu bele baalo jana !! Sunday at 13:17
ಇಷ್ಟು ಸಂಕಟ ಪಡೋ ಈ ಮಹಾಶಯ, ಅದೇ ಕುಮಾರಸ್ವಾಮಿ ಬಿಜೆಪಿ ಶಾಸಕರನ್ನು ಹೈಜಾಕ್ ಮಾಡಿ ಕೊಂಡು ಹೋದಾಗ ಅದು ಹಾದರ ಅನ್ನಿಸಲೇ ಇಲ್ಲ! ಅದು ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ಅದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಇದೇ ಕುಮಾರಸ್ವಾಮಿ, ದೇವೇಗೌಡರು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಾಗ ಈ ಮಹಾಶಯನಿಗೆ ಅದೂ ಸಹ ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ಅದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಈಗ ಗವರ್ನರ್ ಡೆಮಾಕ್ರಸಿಅಡಿಯಲ್ಲೇ ಆಯ್ಕೆಯಾಗಿರುವ ಬಿಜೆಪಿ ಸರಕಾರವನ್ನು ಕಿತ್ತು ಒಗೆಯಲು ಮುಂದಾಗಿರುವುದೂ ಸಹ ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಕೊನೇ ಪಕ್ಷ ಗವರ್ನರ್ ಅವರನ್ನು ವಿರೋಧಿಸುವಂತಹ ಒಂದೇ ಒಂದು ಮಾತು ಈತನ ಹೊಲಸು ಬಾಯಿಯಿಂದ ಬರಲೇ ಇಲ್ಲ. ಈತನಿಗೇಗೆ ಬಿಜೆಪಿ ಶಾಸಕರು ಬಿಜೆಪಿಯಲ್ಲೇ ಉಳಿದರೆ ಹೊಟ್ಟೆಕಿಚ್ಚು? ಬಿಜೆಪಿ ಸರಕಾರ ಪತನವಾಗದೇ ಉಳಿದುಕೊಂಡು ಬಿಟ್ಟಿತು. ತನ್ನ ತಂದೆ ದೇವೇಗೌಡರ ಪಾರ್ಟಿ ಅಧಿಕಾರದಿಂದ ವಂಚಿತವಾಗುತ್ತಿದೆ ಎಂಬ ಪ್ರಲಾಪವಲ್ಲದೇ ಬೇರೇನೂ ಅಲ್ಲ.
ಇನ್ನೂ ಮುಂದುವರೆದು ಈತ ಬರೀತಾನೆ...
karnatakadalli matte raajakeeya tamaasha shuru aagide. bayidavarenna bandhugalembenu yendu cm yadiyurappa eega 11 jana bhinna shashakarannu nammavare anta oppikondidare. heegagi vote needida voter maatra dikkettu hogidane. karnatakada raajakaranakke kappu masi. Saturday at 13:49
ಆದರೆ ಈ ಮಹಾಶಯನಿಗೆ ಅದೇ ಮತದಾರರು ವೋಟ್ ಮಾಡಿ ಅಧಿಖಾರಕ್ಕೆ ತಂದ ಬಿಜೆಪಿಯನ್ನು ಅಧಿಕಾರದಿಂದ ಉರುಳಿಸಲು ಯತ್ನಿಸಿದ ಕುಮಾರಸ್ವಾಮಿ, ಸಿದ್ಧರಾಮಯ್ಯ, ದೇವೇಗೌಡರ ಪ್ರಯತ್ನಗಳು ಕರ್ನಾಟಕದ ರಾಜಕಾರಣಕ್ಕೆ ಕಪ್ಪು ಚುಕ್ಕೆಯಾಗಿ ಕಾಣುವುದೇ ಇಲ್ಲ. ಎಷ್ಟೇ ಅಂದರೂ ಜನುಮದಾತ ಅಪ್ಪಾಜಿಯ ಪಕ್ಷವಲ್ಲವೇ?
ಈತ ಯಾವ ಜಾತಿ ಎಂದು ನಮಗೆ ಗೊತ್ತಿಲ್ಲ. ಆದರೆ ಈತನಿಗೆ ಲಿಂಗಾಯತರನ್ನು ಕಂಡರೆ ಭಯಂಕರ ಸಿಟ್ಟು. ಯಾರಾದರೂ ಲಿಂಗಾಯತರನ್ನು ಹೊಗಳಿದರೆ, ಈತನ ನೆತ್ತಿಗೇ ಕೋಪ ಅಡರುತ್ತದೆ. ಒಮ್ಮೆ ದಲಿತ ಕವಿ ಸಿದ್ದಲಿಂಗಯ್ಯ ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂದಿದ್ದರು. ಅದಕ್ಕೆ ಈ ಮಹಾಶಯ ದಲಿತ ಕವಿ ಸಿದ್ದಲಿಂಗಯ್ಯ ಮಾಡಬಾರದ ಅಪರಾಧ ಮಾಡಿದ್ದಾರೆ. ಅವರು ಸಮಯ ಸಾಧಕ ಎಂದು ಬರೆದುಕೊಂಡಿದ್ದ.
ಇನ್ನು ಈತ ವರದಿಗಾರಿಕೆ ಹೆಸರಲ್ಲಿ ಮಾಡುವ ಹೇಸಿಗೆತನ ಬಯಲಾಗಿಲ್ಲ ಎಂದೇನೂ ಇಲ್ಲ. ಎಚ್.ವಿಶ್ವನಾಥ್ ಹಳ್ಳಿ ಹಕ್ಕಿಯ ಹಾಡು ಪುಸ್ತಕ ಬರೆದಾಗ, ಅದನ್ನು ಮಿಡ್ ಡೇ ಮೊದಲು ವರದಿ ಮಾಡಿತ್ತು. ಮಿಡ್ ವರದಿಯನ್ನೇ ಇಟ್ಟುಕೊಂಡು, ಲಕ್ಷ್ಮಣ್ ಹೂಗಾರ್ ಅಕ್ಷರಷ: ಹಾದರಕ್ಕಿಳಿದುಬಿಟ್ಟಿದ್ದ. ಅದನ್ನು ಟಿವಿ9 ಮೂಲಕ ದೊಡ್ಡ ವಿವಾದವಾಗುವಂತೆ ನೋಡಿಕೊಂಡ. ಈತ ಮಾಡಿದ ಭಾನಗಡಿಗಳ ಬಗ್ಗೆ ಅನೇಕರು ಪ್ರಶ್ನೆಗಳನ್ನು ಎತ್ತಿದ್ದರು. ಅದರಲ್ಲಿ ಚುರುಮುರಿ ಕೂಡಾ ಒಂದು. ಚುರುಮುರಿಯಲ್ಲಿ ಹೂಗಾರ್ಡ್ ಗೆ ನೀರಿಳಿಸಿದ ಲೇಖನದ ಲಿಂಕ್ ಇಲ್ಲಿ ನೀಡಿದ್ದೇವೆ.
ಇದರಲ್ಲಿ ಒಂದು ಕಾಮೆಂಟ್ ಹೀಗಿದೆ...
4. What was the rationale behind sensationalising such small issue for hours together. This news could have been shown in a proper way in just about 1 minute duration. What was the need to “hoogaar” (telling/ screaming/ repeating) it again and again?
ಇತರೆ ಪೇಜ್ ಗಳು ಇಂದಿಗೂ ಲಭ್ಯ ಇವೆ. ಅವುಗಳ ಲಿಂಕ್ ಇಲ್ಲಿ ಕೊಡಲಾಗಿದೆ.
 ಇದನ್ನೆಲ್ಲಾ ನೋಡಿಯೇ ಓದುಗರೊಬ್ಬರು ಲಕ್ಷ್ಮಣ್ ಹೂಗಾರ್ ಕಾರ್ಯಕ್ರಮ  ನೋಡಿದರೆ ನಾವು ಸಿಕ್ ಆಗ್ತೀವಿ. ತುಂಬಾ ಇರಿಟೇಟಿಂಗ್ ಎಂದು ಬರದ್ದಿದ್ದಾರೆ. ನೋಡಿ..
guys u are correct, we need to ignore speeches of kumara & more over TV9 lakshman hoogar is an irritation person, who makes audions to get sick of watching him
ಇದರ ಲಿಂಕ್ ಇಲ್ಲಿದೆ
ಇನ್ನು ಹೂಗಾರ್ ಯಾವಾಗಲೇ ಟಿವಿಯಲ್ಲಿ ಮಾತನಾಡಲಿ, ಈ ಕೆಳಗಿನ ಮಾತುಗಳು ಖಂಡಿತಾ ಬರುತ್ತವೆ. ಬೇಕಿದ್ದರೆ ಇಂದಿನಿಂದಲೇ ಗಮನಿಸಿ..
1. ನಾನು ಮೊದಲೇ ಹೇಳಿದ್ದೇ (ಆತ್ಮರತಿ)
2. ನಾನು ಬಹಳ ಹಿಂದೆ ಕುಡಾ ಈ ಬಗ್ಗೆ ಹೇಳಿದ್ದೆ (ಆತ್ಮರತಿಯ ಪರಾಕಾಷ್ಠೆ)
3. ಈ ಬಗ್ಗೆ ನಾನು ಹೇಳೋದೇನಪ್ಪ ಅಂದ್ರೆ (ನಿನ್ನ ಒಪೀನಿಯನ್ ಯಾರಿಗೆ ಬೇಕು? ಮುಚ್ಕೊಂಡು ಪತ್ರಕರ್ತನ ಕೆಲಸ ಮಾಡು)
4. ಈ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ, ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ...(ಹೇಳಿದ್ದನ್ನೆ 2007 ರಿಂದಲೂ ಹೇಳಿ ತಲೆ ತಿನ್ನಬೇಡ ಮಾರಾಯಾ)
5. ರಾಜಕಾರಣದಲ್ಲಿ 2+2 ಯಾವಾಗಲೂ ಫೋರ್ ಆಗೋಲ್ಲ. 2+2 = 5 ಕೂಡಾ ಆಗಬಹುದು. ಮೂರು ಬೇಕಿದ್ರೂ ಆಗಬಹುದು. (ರಾಜಕೀಯ ಬೆಳವಣಿಗೆಯಾದಾಗಲೆಲ್ಲಾ ಇದು ಕಾಮನ್.)
6. ಇದಕ್ಕೆ ಆಡಳಿತ ಪಕ್ಷವಾಗಿ ಬಿಜೆಪಿ ಹೆಚ್ಚು ಉತ್ತರ ಕೊಡಬೇಕಾಗುತ್ತದೆ (ಹೌದು ಉತ್ತರ ಕೊಡಲು ಬಿಜೆಪಿ, ಕಾಲಿಗೆ ಬೀಳಲು ಜೆಡಿಎಸ್)
7. ಇತಿಹಾಸದ ಪುಟಗಳನ್ನು ಸೇರಿದೆ. (ಜೆಡಿಎಸ್, ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಈತ ಯಾವಾಗಲೂ ಇತಿಹಾಸದ ಪುಟ ಸೇರಿಸ್ತಾನೆ. ಬಿಜೆಪಿ ಆದ್ರೆ, ನೂರು ವರ್ಷವಾದರೂ ಅವು ಪ್ರಸ್ತುತ ಅಂತಾನೆ.)
ಇಷ್ಟೆಲ್ಲಾ ಆದ ನಂತರವೂ ಟಿವಿ9 ನವರು ಅದೇನು ಮಣ್ಣು ತಿಂತಿದ್ದಾರೋ ಗೊತ್ತಿಲ್ಲ. ರವಿಕುಮಾರ್ ಗೆ ರಿಪೋರ್ಟರ್ ಗಳು ಒಟ್ಟು ಮಾತನಾಡಿದರೆ ಸಾಕು. ಏನು ಮಾತನಾಡಿದರು ಎಂದು ಆತನಿಗೆ ಅರ್ಥ ಆಗೋಲ್ಲ. ಮಾರುತಿಗೆ ಅರ್ಥವಾದರೂ ಹೇಳಲು ಹೋಗದ ಜಾಣ. ಇನ್ನು ಶಿವಪ್ರಸಾದ್ ಗೆ ಲಕ್ಷ್ಮಣ್ ಹೂಗಾರ್ ಹೆಚ್ಚು ತಪ್ಪು ಮಾಡಿದಷ್ಟು ಹೆಚ್ಚು ಖುಷಿ. ಮಹೇಂದ್ರ ಮಿಶ್ರಾಗೆ ಕನ್ನಡವೇ ಅರ್ಥವಾಗೋಲ್ಲ! ಇಂತಹ ಪರಿಸ್ಥಿತಿಯಲ್ಲಿ ಹೂಗಾರ್ ಮಾತನಾಡಿದ್ದೇ ರಾಜಕೀಯ. ಆತ  ಮಾಡಿದ್ದೇ ಪೊಲಿಟಿಕಲ್ ಅನಾಲಿಸಿಸ್. ಆತ ಹೇಳಿದ್ದೇ ವೇದವಾಕ್ಯ. ಆತ ಹೇಳಿದ್ದೇ ಫೈನಲ್. ಆತ ಹೇಳಿದಂತೆ ಬಿಜೆಪಿಯವರು ಕೇಳಬೇಕು. ಆತ ಕೇಳಿದ ಪ್ರಶ್ನೆಗಳಿಗೆ ಮುಚ್ಚಿಕೊಂಡು ಉತ್ತರ ಕೊಡಬೇಕು. ಇಲ್ಲದಿದ್ದರೆ ತಾನೂ ಪತ್ರಕರ್ತ ಎಂಬುದನ್ನೂ, ಉಳಿದ ಮೂರನ್ನೂ ಬಿಟ್ಟು ನೇರವಾಗಿ ವೀಕ್ಷಕರಿಗೆ ಹೇಸಿಗೆಯಾಗುವಂತೆ ಜಗಳಕ್ಕಿಳಿಯುತ್ತಾನೆ.
ಹೂಗಾರ್, ಇನ್ನಾದರೂ ನೀನು ಕೇವಲ ಪತ್ರಕರ್ತ, ಸೃಷ್ಠಿಕರ್ತನಲ್ಲ ಎಂಬ ಪರಿಜ್ಞಾನ ಇರಲಿ.
ಇದುವರೆಗೂ ಈತನನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಈಗ ನಾವು ಮಾಡಿದ್ದೇವೆ. ಯಾರಾದರೂ ಪುಣ್ಯಾತ್ಮರು ಇದನ್ನು ಅನುವಾದ ಮಾಡಿ, ಮಹೇಂದ್ರ ಮಿಶ್ರಾಗೆ ಈ ಮೇಲ್ ಐಡಿಗೆ ಕಳುಹಿಸಿದರೆ ನಾವು ಧನ್ಯರು! ಹಾಗೇ ಮಿಶ್ರಾ ಅವರ ನಂಬರ್ 9980366999, 9980510144, 9880104897 ಇವುಗಳಿಗೆ ಎಸ್.ಎಂ.ಎಸ್.ಹಾಕಿ.

No comments:

Post a Comment